ಚಿಕ್ಕನಾಯಕನಹಳ್ಳಿ:
ದೇಶಕ್ಕೆ ಒಳ್ಳೆಯ ಆಡಳಿತ ನೀಡುವುದರ ಜೊತೆಗೆ ರಾಷ್ಟ್ರಕ್ಕೆ ರಕ್ಷಣೆಯೂ ಸಹ ಬಹುಮುಖ್ಯವಾಗಿದೆ, ಇದನ್ನು ಪೂರೈಸುವ ಸಾಮಥ್ರ್ಯವನ್ನು ಹೊಂದಿರುವುದು ನರೇಂದ್ರಮೋದಿಯವರು ವಿನಹ ಬೇರೆಯವರಿಗಿಲ್ಲ ಎಂದು ಶಾಸಕ ಜೆ.ಸಿಮಾಧುಸ್ವಾಮಿ ಹೇಳಿದರು.
ತಾಲ್ಲೂಕಿನ ಮತಿಘಟ್ಟ ಗ್ರಾಮದ ಜಯಭಾರತಿ ಪ್ರೌಢಶಾಲಾ ಮೈದಾನದಲ್ಲಿ ನಡೆದ ಹಂದನಕೆರೆ ಹೋಬಳಿ ಶಕ್ತಿಕೇಂದ್ರದ ಬಿ.ಜೆ.ಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ರಾಷ್ಟ್ರದಲ್ಲಿ ಫೆ.14 ರಂದು ಉಗ್ರರು ಸೈನಿಕರನ್ನು ಹತ್ಯೆಗೈದುದರಿಂದ ದೇಶ ತಲ್ಲಣಗೊಂಡಿದೆ, ಭಾರತಕ್ಕೆ ಶತ್ರುಗಳಿಂದ ಕಾಪಾಡಲು ಹಾಗೂ ಪಾಕಿಸ್ತಾನಕ್ಕೆ ಪಾಠ ಕಲಿಸಲು ಪ್ರಧಾನಮಂತ್ರಿ ನರೇಂದ್ರಮೋದಿಯವರು ಸಮರ್ಥರಾಗಿದ್ದಾರೆ, ಪ್ರಧಾನಿಯವರು ಭಾರತವನ್ನು ವಿಶ್ವ ಮಟ್ಟದಲ್ಲಿ ಆರ್ಥಿಕವಾಗಿ ಮೇಲೆತ್ತಲು ಶ್ರಮಿಸಿ ಯಶಸ್ವಿಯಾಗಿದ್ದಾರೆ,
ಮೇಕ್ ಇನ್ ಇಂಡಿಯಾ ಹೆಸರಿನಲ್ಲಿ ಅನೇಕ ಕಾರ್ಖಾನೆಗಳನ್ನು ಸ್ಥಾಪಿಸಲು ಪ್ರೋತ್ಸಾಹ ನೀಡಿದ್ದಾರೆ ಇದರಿಂದ ದೇಶ ಸ್ವಾವಲಂಬನೆಯತ್ತ ಸಾಗುತ್ತಿದೆ ಎಂದರು. ದೇಶದಲ್ಲಿರುವ ಕಚ್ಛಾ ವಸ್ತುಗಳನ್ನು ಶುದ್ದ ವಸ್ತುಗಳನ್ನಾಗಿ ಮಾಡಿ ಹೊರ ದೇಶಗಳಿಗೆ ರಫ್ತು ಮಾಡುವ ಮುಖಾಂತರ ದೇಶದ ಸಾಲವನ್ನು ತೀರಿಸಿ ಸ್ವಾವಲಂಬನೆಯತ್ತ ದೇಶ ಸಾಗುವಂತೆ ಮಾಡಿದ್ದಾರೆ ಎಂದರು.
ಕೇಂದ್ರ ಸರ್ಕಾರ ರೈತರಿಗೆ ಫಸಲ್ ಭೀಮಾ ಯೋಜನೆ, ಆಯುಷ್ಮಾನ್ ಭಾರತ್, ಜನೌಷಧಿ ಕಾರ್ಯಕ್ರಮ, ತೆಂಗು ಬೆಳೆಗಾರರಿಗೆ 9660 ರೂ.ಕೊಬ್ಬರಿ ಬೆಂಬಲ ಬೆಲೆ, ಬಡವರಿಗೆ ಮನೆ ಕಟ್ಟಲು ಗ್ರ್ಯಾಂಟ್, ಉಚಿತ ಗ್ಯಾಸ್ ವಿತರಣೆ, ಸಣ್ಣ ಹಿಡುವಳಿ ಕೃಷಿ ಕ್ಷೇತ್ರದ ಕುಟುಂಬಕ್ಕೆ ಪ್ರತಿ ವರ್ಷ 6ಸಾವಿರ ಹಣ ನೀಡಲು ಮುಂದಾಗಿದ್ದು ಇದರಿಂದ ದೇಶದ 13 ಸಾವಿರ ಕೋಟಿ ಕುಟುಂಬಕ್ಕೆ ಅನುಕೂಲವಾಗಿದೆ, ತಾಲ್ಲೂಕಿಗೂ ಕೇಂದ್ರ ಸರ್ಕಾರವು ಕೆ.ಬಿ.ಕ್ರಾಸ್‍ನಿಂದ ಹುಳಿಯಾರು ರಾಷ್ಟ್ರೀಯ ಹೆದ್ದಾರಿಗೆ 650ಕೋಟಿ ರಸ್ತೆ ಅಭಿವೃದ್ದಿಗೆ ಹಣ ನೀಡಿದೆ ಎಂದ ಅವರು, ದೇಶದ ಅಭಿವೃದ್ದಿ ಹಾಗೂ ರಕ್ಷಣೆಗಾಗಿ 2019ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿ.ಜೆ.ಪಿಯ ಸಂಸತ್ ಸದಸ್ಯರನ್ನು ಆಯ್ಕೆ ಮಾಡಲು ಸಹಕರಿಸಿ ಎಂದು ಮನವಿ ಮಾಡಿದರು, ಇದಕ್ಕೆ ಕಾರ್ಯಕರ್ತರ ಶ್ರಮ ಅಗತ್ಯ ಎಂದರು.
ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜಕುಮಾರ್ ಮಾತನಾಡಿ, ಕಳೆದ 10 ವರ್ಷಗಳಿಂದ ತಾಲ್ಲೂಕು ಅಭಿವೃದ್ದಿಯ ಆಸ್ತಿತ್ವವನ್ನು ಕಳೆದುಕೊಂಡಿತ್ತು, ಜೆ.ಸಿ.ಮಾಧುಸ್ವಾಮಿ ಶಾಸಕರಾಗಿ ಅಧಿಕಾರ ಪಡೆದ ಮೇಲೆ 9 ತಿಂಗಳಲ್ಲಿ ಹಂತ ಹಂತವಾಗಿ ತಾಲ್ಲೂಕು ಆಡಳಿತ ಸುಧಾರಿಸುತ್ತಿದೆ ಎಂದರು.
ತಾಲ್ಲೂಕು ಬಿ.ಜೆ.ಪಿ.ಅಧ್ಯಕ್ಷ ಹೆಚ್.ಆರ್ ಶಶಿಧರ್, ಪ್ರಧಾನ ಕಾರ್ಯದರ್ಶಿ ನಿರಂಜನ್‍ಮೂರ್ತಿ, ಜಿ.ಪಂ.ಸದಸ್ಯೆ ಮಂಜುಳಮ್ಮ, ಬರಗೂರುಬಸವರಾಜು, ಬೇವಿನಹಳ್ಳಿಚನ್ನಬಸವಯ್ಯ, ಕೇಶವಮೂರ್ತಿ, ಪುರಸಭಾ ಮಾಜಿ ಆಧ್ಯಕ್ಷ ಸಿ.ಎಮ್.ರಂಗಸ್ವಾಮಿ, ಸೊರಲಮಾವುಹರ್ಷ ಮತ್ತಿತರರು ಉಪಸ್ಥಿತರಿದ್ದರು.