ಮಧುಗಿರಿ :
ವಿದ್ಯುತ್ ಕಂಬವೊಂದು ಮುರಿದು ಬಿದ್ದಿದ್ದು ಬೀಳುವ ಹಂತದಲ್ಲಿದ್ದರು ಇದೂವರೆವಿಗೂ ಬೆಸ್ಕಾಂನವರು ವಿದ್ಯುತ್ ಕಂಬವನ್ನು ಸರಿಪಡಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಪಟ್ಟಣದ ದ್ವಿಪಥ ರಸ್ತೆಯಲ್ಲಿನ ಎಲ್‍ಐಸಿ ಶಾಖೆಯ ಮುಂಭಾಗ ಟೀ ಅಂಗಡಿ ಬಳಿ ವಾಹನವೊಂದು ಇತ್ತೀಚೆಗೆ ಕಂಬಕ್ಕೆ ಡಿಕ್ಕಿ ಹೊಡೆದಾಗ ಈ ಅವಘಡ ಸಂಭವಿಸಿದೆ ಎಂಬ ಅನುಮಾನ ನಾಗರೀಕರಲ್ಲಿ ಇದ್ದು ಕಂಬವು ಸಂಪೂರ್ಣವಾಗಿ ಮುರಿದು ಹೋಗಿದೆ ಎನ್ನಲಾಗುತ್ತಿದೆ.
ಕಂಬದಲ್ಲಿನ ವಿದ್ಯುತ್ ತಂತಿಗಳು ನೆಲಕ್ಕೆ ಉರುಳಿ ಪ್ರಾಣಾಪಾಯ ಹಾಗೂ ಸುತ್ತಮುತ್ತಲಿನ ಮನೆಗಳಲ್ಲಿನ ಗೃಹ ಉಪಯೋಗಿ ವಿದ್ಯುತ್ ಪರಿಕರಗಳು ಹಾಳು ಆಗುವ ಮುಂಚಿತವಾಗಿವೇ ಕಂಬವನ್ನು ಸರಿಪಡಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.
ಈ ಬಗ್ಗೆ ಮಧುಗಿರಿ ಬೆಸ್ಕಾಂಗೆ ಟೀ ಅಂಗಡಿಯ ಮಾಲೀಕ ದೂರು ನೀಡಿದ್ದರೂ ಇಲ್ಲಿಯವರೆಗೂ ಯಾವುದೇ ಕ್ರಮಕೈಗೊಂಡಿಲ್ಲವೆಂದು ಮಾಲೀಕ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
