ಬುಕ್ಕಾಪಟ್ಟಣ
ಸೋಮವಾರದಂದು ಬುಕ್ಕಾಪಟ್ಟಣ ಗ್ರಾಮದ ಪೊಲೀಸ್ ಉಪಠಾಣೆಯಲ್ಲಿ ಆ. 21 ರಂದು ನಡೆಯುವ ಬಕ್ರೀದ್ ಹಬ್ಬದ ಪ್ರಯುಕ್ತ ಊರಿನಲ್ಲಿ ಯಾವುದೇ ರೀತಿಯ ತೊಂದರೆ ಬಾರದಂತೆ ಎಚ್ಚರವಹಿಸಿ ಎಂದು ಶಾಂತಿ ಸಭೆಯಲ್ಲಿ ಚೇತನ್ ಕುಮಾರ್ ಎಲ್ಲಾ ಧಾರ್ಮಿಕ ಮುಖಂಡರಿಗೆ ತಿಳಿಸಿದರು. ಶಾಂತಿಸಭೆಯಲ್ಲಿ ಜಾಮೀಯಾ ಮಸೀದಿಯ ಮುತವಲ್ಲಿ ಖಲೀಲ್ ಸಾಬ್, ಶಾಂತಿ ಬೀಡಿ ಮಾಲಿಕರಾದ ಖಲೀಲ್ ಸಾಬ್, ವೆಂಕಟೇಶ್, ಕಟ್ಟೆಗಂಗಣ್ಣ, ರಾಮಲಿಂಗಪ್ಪನವರು, ಪ್ರಭಣ್ಣ, ಗ್ರಾಮಸ್ಥರು ಹಾಜರಿದ್ದರು
