ನವದೆಹಲಿ:
ಜೂನ್ 12 ರಂದು ಪಾಟ್ನಾದಲ್ಲಿ ನಡೆಯಬೇಕಿದ್ದ ಬೃಹತ್ ವಿರೋಧ ಪಕ್ಷದ ಸಭೆ ಇದೀಗ ಜೂನ್ 23 ರಂದು ನಡೆಯಲಿದೆ. ಕಾಂಗ್ರೆಸ್ ಮತ್ತು ಅದರ ತಮಿಳುನಾಡು ಮಿತ್ರಪಕ್ಷವಾದ ಡಿಎಂಕೆ ಮನವಿಯ ನಂತರ ಈ ದಿನಾಂಕವನ್ನು ಬದಲಾಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ನಿತೀಶ್ ಕುಮಾರ್ ಇದುವರೆಗೆ ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರಂತಹ ನಾಯಕರನ್ನು ಭೇಟಿ ಮಾಡಿ ಒಟ್ಟಿಗೆ ಕರೆತಂದಿದ್ದಾರೆ.
ದೆಹಲಿಯ ಅಧಿಕಾರವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಕೇಂದ್ರ ಸರ್ಕಾರದ ಇತ್ತೀಚಿನ ಸುಗ್ರೀವಾಜ್ಞೆ ಮತ್ತು ಸಂಸತ್ತಿನಲ್ಲಿ ಮಸೂದೆಯನ್ನು ತಡೆಯಲು ಸಹಾಯ ಕೋರಿ ಅರವಿಂದ್ ಕೇಜ್ರಿವಾಲ್ ಅವರು ವಿರೋಧ ಪಕ್ಷದ ನಾಯಕರೊಂದಿಗೆ ನಡೆಸಿದ ಸಭೆಗಳು ಇದೀಗ ಬಿಜೆಪಿ ವಿರುದ್ಧದ ಎಲ್ಲಾ ವಿಪಕ್ಷಗಳ ಒಟ್ಟುಗೂಡುವಿಕೆಗೆ ಮತ್ತಷ್ಟು ಪ್ರೇರಣೆ ನೀಡಿದೆ.
ಹೆಚ್ಚಿನ ವಿರೋಧ ಪಕ್ಷಗಳು ಕೇಜ್ರಿವಾಲ್ ಅವರನ್ನು ಅವರನ್ನು ಬೆಂಬಲಿಸಿವೆ. ಕೇಂದ್ರವು ಫೆಡರಲ್ ತತ್ವಗಳನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿರುವ ಅವರು, ಕಾಂಗ್ರೆಸ್ ಕೂಡ ತಮ್ಮನ್ನು ಬೆಂಬಲಿಸಬೇಕು ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ