ಬೆಂಗಳೂರು: ಬೆಂಗಳೂರಿನಲ್ಲಿಯೇ ಏರ್ ಕ್ರಾಫ್ಟ್ ಉತಾದನೆಯಾಗುವ ದಿನಗಳು ದೂರವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸಫ್ರಾನ್ ಗ್ರೂಪ್ ಹಾಗೂ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ಸಹಯೋಗದಲ್ಲಿ ಏರ್ ಕ್ರಾಫ್ಟ್ ಇಂಜಿನ್‍ಗಳ ಘಟಕವನ್ನು ಉದ್ಘಾಟಸಿ ಮಾತನಾಡಿದರು.
ನಮ್ಮ ಬದುಕನ್ನು ಸುಲಭಗೊಳಿಸಲು ತಂತ್ರಜ್ಞಾನ ಬಹು ಮುಖ್ಯ ಸಾಧನ. ಏರೋಸ್ಪೇಸ್ ತಂತ್ರಜ್ಞಾವೂ ಕಾಲಕ್ಕೆ ತಕ್ಕಂತೆ ವಿಕಸನಗೊಳ್ಳುತ್ತಾ ಬಂದಿದೆ. ತಂತ್ರಜ್ಞಾನ ವಿಶ್ವ ಯುದ್ಧದ ನಂತರ ಅಭಿವೃದ್ಧಿಗೊಂಡಿತು. ಏರ್‍ಕ್ರಾಫ್ಟ್ ಒಂದರಲ್ಲಿಯೇ ಸಾಕಷ್ಟು ತಂತ್ರಜ್ಞಾನವನ್ನು ಒಳಗೊಂಡಿರುತ್ತದೆ. ಸಫ್ರಾನ್ ಮತ್ತು ಹೆಚ್.ಎ.ಎಲ್ ಪೈಪ್‍ಲೈನ್ ಗಳ ಜೊತೆ ಇಂಜಿನ್ ಉತ್ಪಾದನೆಯನ್ನೂ ಮಾಡಲು ಸಾಧ್ಯವಿದೆ. ಇದೊಂದು ಹೆಮ್ಮೆಯ ಗಳಿಗೆ. ಹೆಚ್.ಎ.ಎಲ್ ಮತ್ತು ಸಫ್ರಾನ್ 65 ವರ್ಷಗಳ ಸುದೀರ್ಘ ಅವಧಿಯ ಸಹಯೋಗ ಫಲಪ್ರದವಾಗಿದೆ ಎಂದರು.
ಏರೋಸ್ಪೇಸ್ ತಂತ್ರಜ್ಞಾನದಲ್ಲಿ ಬೆಂಗಳೂರು ಈಗಾಗಲೇ ಮುಂಚೂಣಿಯಲ್ಲಿದೆ. ಏರ್‍ಕ್ರಾಫ್ಟ್ ಇಂಜಿನ್‍ಗಳ ಸೌಲಭ್ಯಗಳ ಘಟಕ ಏರೋಸ್ಪೇಸ್ ತಂತ್ರಜ್ಞಾನದ ಅಭಿವೃದ್ಧಿಗೆ ಇನ್ನಷ್ಟು ಗಟ್ಟಿತಳಪಾಯವನ್ನು ಹಾಕಲಿದೆ ಎಂದರು. ಹೆಚ್.ಎ.ಎಲ್. ಬೆಂಗಳೂರಿನಲ್ಲಿ ಮೊದಲಿಗೆ ಪ್ರಾರಂಭವಾದ ಸರ್ಕಾರಿ ಸ್ವಾಮ್ಯದ ಉದ್ದಿಮೆ. ಇದರೊಂದಿಗೆ ಸ್ವಾತಂತ್ರ್ಯಕ್ಕೂ ಮುನ್ನ ಹಾಗೂ ನಂತರದಲ್ಲಿ ಎನ್.ಎ.ಎಲ್, ಇಸ್ರೋ, ಹೆಚ್.ಎಂ.ಟಿ , ಬಿಇಎಂಎಲ್ ಮುಂತಾದ ಪಿ.ಎಸ್.ಯುಗಳ ಸ್ಥಾಪನೆ ಬೆಂಗಳೂರಿಗೆ ತಂತ್ರಜ್ಞಾನವನ್ನು ಪರಿಚಯಿಸಿತು. ದೇಶ ಹಾಗೂ ಮಾನವನ ಬದುಕಿನ ಅಭಿವೃದ್ಧಿಯಲ್ಲಿ ತಂತ್ರಜ್ಞಾನ ಪ್ರಮುಖ ಪಾತ್ರವನ್ನು ವಹಿಸುತ್ತದೆ
ಎಂದರು.
ಪ್ರಧಾನಿಗಳ ಆತ್ಮನಿರ್ಭರ್ ಭಾರತದ ಕನಸು ನನಸಾಗುತ್ತಿದೆ
ವಿಶ್ವದ ಪ್ರಮುಖ ಏರ್‍ಕ್ರಾಫ್ಟ್ ಸಂಸ್ಥೆಗಳು ಬೆಂಗಳೂರಿನಲ್ಲಿ ಉತ್ಪಾದನೆಯನ್ನು ಪ್ರಾರಂಭಿಸುವಂತಾಗಬೇಕು. ಏರ್ ಕ್ರಾಫ್ಟ್ ಗಳ ಬಿಡಿ ಭಾಗಗಳು ಇಲ್ಲಿ ಉತ್ಪಾದನೆಯಾಗುವುದರಿಂದ ಏರ್‍ಕ್ರಾಫ್ಟ್ ನ್ನು ಉತ್ಪಾದಿಸುವುದು ಕಷ್ಟಸಾಧ್ಯವೇನಲ್ಲ. ಹೆಚ್.ಎ.ಎಲ್. ತನ್ನ ವ್ಯಾಪ್ತಿಯನ್ನು ದೊಡ್ಡ ಮಟ್ಟದಲ್ಲಿ ವಿಸ್ತರಿಸುತ್ತಿದೆ. ಇಂಟೆಲ್ ನೊಂದಿಗೆ ಸೆಮಿಕಂಡಕ್ಟರ್‍ಗಳ ಉತ್ಪಾದನೆಗಾಗಿ ಕರ್ನಾಟಕ ಸರ್ಕಾರ ಒಪ್ಪಂದ ಮಾಡಿಕೊಂಡಿದೆ. ಸೆಮಿಕಂಡಕ್ಟರ್ ಉತ್ಪಾದನೆಗೆ ಒಪ್ಪಂದ ಮಾಡಿಕೊಂಡಿರುವ ಏಕೈಕ ರಾಜ್ಯ ಕರ್ನಾಟಕ. ಇದರ ಹಿಂದಿನ ಶಕ್ತಿ ಹೆಚ್.ಎ.ಎಲ್. ಆಗಿದೆ. ಸೆಮಿಕಂಡಕ್ಟರ್ ಉತ್ಪಾದನೆ ರಾಜ್ಯದಲ್ಲಿ ಬಹು ದೊಡ್ಡ ಬದಲಾವಣೆಯನ್ನು ತರಲಿದೆ. ಜಿನೋಮ್ಯಾಟಿಕ್ಸ್ ನಿಂದ ಏರೋಸ್ಪೇಸ್ ವರೆಗೆ ಎಲ್ಲಾ ವಲಯದಲ್ಲಿಯೂ ಬೆಂಗಳೂರು ಮುಂಚೂಣಿಯಲ್ಲಿದೆ. ನವಕರ್ನಾಟದಿಂದ ನವ ಭಾರತ ನಿರ್ಮಾಣ ನಮ್ಮ ಗುರಿ. ದೇಶದ ಆರ್ಥಿಕ ಬೆಳವಣಿಯಲ್ಲಿ ಕರ್ನಾಟಕ ಮಹತ್ವದ ಪಾತ್ರವನ್ನು ವಹಿಸಲಿದೆ. ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ್ ಭಾರತದ ಕನಸು ಈಡೇರುತ್ತಿದೆ. ಡಿ.ಆರ್.ಡಿ.ಒ ಮತ್ತು ಇತರ ರಕ್ಷಣಾ ಸಂಸ್ಥೆಗಳು ಶೇ 60 ರಷ್ಟು ರಫ್ತನ್ನು ಮೇಕ್ ಇನ್ ಇಂಡಿಯಾ ಮೂಲಕ ಕಡಿಮೆ ಮಾಡಿದ್ದಾರೆ. ಸ್ಥಳೀಯ ಪ್ರತಿಭೆಗಳ ಬಳಕೆಗೂ ಇದರಿಂದ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.