ಬೆಂಗಳೂರಿನಲ್ಲಿ ಕೋವಿಡ್ ಏರಿಕೆ : ಮಾಸ್ಕ್ ಕಡ್ಡಾಯ

  • ದೇಶದಲ್ಲಿ ಒಂದೇ ದಿನ ಶೇ40ರಷ್ಟು ಪಾಸಿಟಿವ್ ಕೇಸ್
  • ನಾಲ್ಕನೇ ಅಲೆ ಮುನ್ಸೂಚನೆ, ಕೋವಿಡ್ ಪ್ರಕರಣಗಳ ಹೆಚ್ಚಳ
  • ಮಾಸ್ಕ್ ಹಾಕಿಕೊಳ್ಳಲು ತಜ್ಞರ ಸಲಹೆ
  • ಕೋವಿಡ್ ಏರಿಕೆಯ ಜೊತೆಗೆ ಮಂಕಿಪಾಕ್ಸ್ ಆತಂಕ

ಗುಡಿಬಂಡೆ ಭರತ್ ಜಿ.ಎಸ್

ಪ್ರಜಾಪ್ರಗತಿ.ಕಾಂ

ಬೆಂಗಳೂರು: ದೇಶ ಹಾಗೂ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನೇ ದಿನೆ ಏರಿಕೆಯಾಗಿತ್ತಿದೆ, ಮತ್ತೊಂದು ಕಡೆ ಮಂಕಿಪಾಕ್ಸ್ ಸೊಂಕಿನ ಭೀತಿಯು ಸಾರ್ವಜನಿಕರನ್ನು ಕಾಡುತ್ತಿದ್ದೆ, ದೇಶಾದ್ಯಂತ ಕಳೆದ 24 ಗಂಟೆಯಲ್ಲಿ ಶೇ40ರಷ್ಟು ಪಾಸಿಟಿವ್ ಪಕ್ರರಣಗಳು ಕಂಡುಬಂದಿದ್ದು ಇದೇ ನಾಲ್ಕನೇ ಅಲೆಯ ಆರಂಭವೇ ಎನ್ನುವ   ಅನುಮಾನಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿವೆ.

ಜೂನ್ ಆರಂಭದಿಂದಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ದಿನ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದೆ, ಒಂದು ದಿನಕ್ಕೆ 300ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ. ಆದರೂ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಮನೆಯಿಂದ ಹೊರಬರುವಾಗ ಕಡ್ಡಾಯವಾಗಿ ಧರಿಸಬೇಕು, ಹೆಚ್ಚು ಜನಸಂದಡಿ ಪ್ರದೇಶಗಳಿಗೆ ಹೋದಾಗ ಸಾಮಾಜಿಕ ಅಂತರ ಪಾಲಿಸಬೇಕು ಎಂದು ಆರೋಗ್ಯ ಇಲಾಖೆ ಎಚ್ಚರಿಕೆಯ ನಿಯಮಗಳನ್ನು ತಿಳಿಸುತ್ತಿದೆ.

ಬೆಂಗಳೂರಿನಲ್ಲೇ ಹೆಚ್ಚು : ಗರುವಾರ ಬೆಂಗಳೂರು ನಗರದಲ್ಲಿ ಒಂದೇ ದಿನ 458 ಪ್ರಕರಣಗಳು ಪತ್ತೆಯಾಗಿದೆ, ದಕ್ಷಣ ಕನ್ನಡ ಮತ್ತು ದಾರವಾಡ ಜಿಲ್ಲೆಗಳಲ್ಲಿ 3 ಪಕ್ರಕರಣಗಳು ಧೃಡಪಟ್ಟಿದೆ. ಬೀದರ್‍ನಲ್ಲಿ ಎರಡು ಪ್ರಕರಣ ಸೇರಿದಂತೆ, ಕಲಬುರಗಿ ಮತ್ತು ಉಡುಪಿಯಲ್ಲಿ ತಲಾ ಒಂದು ಕೋವಿಡ್ ಪ್ರಕರಣ ಕಾಣಿಸಿಕೊಂಡಿದೆ ಎಂದು ಆರೊಗ್ಯ ಇಲಾಖೆ ಮಾಹಿತಿ ನೀಡಿದೆ.

ಮಾಸ್ಕ್ ಕಡ್ಡಾಯ : ಬೆಂಗಳೂರು ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳಿಗೆ ಬಿಬಿಎಂಪಿ ಮುಂದಾಗಿದೆ, ಮಾಲ್, ಸಿನಿಮಾ ಂದಿರಗಳು, ರೈಲ್ವೇ ನಿಲ್ದಾಣ, ಮಾರುಕಟ್ಟೆ, ಬಸ್ ನಿಲ್ದಾನ, ಸರಕಾರಿ ಕಚೇರಿಗಳು ಸೇರಿದಂತೆ ಹೆಚ್ಚು ಸಾರ್ವಜನಿಕರು ಓಡಾಡುವ ಪ್ರದೇಶಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಬಳಕೆ ಮಾಡಲು ಸೂಚಿಸಿದೆ, ಸದಸ್ಯ ದಂಡ ವಿಧಿಸುತ್ತಿಲ್ಲ, ಹಾಗೂ ಲಸಿಕೆ ಪಡೆದಿರುವ ಬಗ್ಗೆ ಪ್ರಮಾಣ ಪತ್ರವನ್ನು ಪರಿಶೀಲಿಸಲು ಮಾರ್ಷಲ್‍ಗಳಿಗೆ ಸೂಚನೆ ನೀಡಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದರು.

ತಜ್ಞರ ಸಲಹೆ ಪಾಲಿಸಿ : ರಾಜಧಾನಿಯಲ್ಲಿ ಕೋವಿಡ್ ಪ್ರಕರಣಗಳ ಜೂನ್ ಆರಂಭದಿಂದ ಏರಿಕೆಯಾಗುತ್ತಲೇ ಇದೆ. ಜನರು ಮನೆಯಿಂದ ಹೊರಗೆ ಬರುವಾಗ ಮಸ್ಕ್ ಬಳಸಿ, ಹಾಗೂ ಸಾಮಾಜಿಕ ಅಂತರ ಪಲಿಸಿ, ಯಾರು ಲಸಿಕೆ ಪಡೆದಿಲ್ಲ, ಅವರು ತಕ್ಷಣ ಲಸಿಕೆ ಪಡೆದುಕೊಳ್ಳಬೇಕು, ಸಾಬೂನ್‍ನಲ್ಲಿ ಆಗಾಗ ಕೈತೊಳೆದುಕೊಳ್ಳಿ ಎಂದು ತಜ್ಞರು ಮುನ್ನೆಚ್ಚರಿಕೆಯ ಕ್ರಮವಾಗಿ ಕೋವಿಡ್ ನಿಯಮಗಳನ್ನು ಪಾಲಿಸಿ ಎಲ್ಲರೂ ಜಾಗರುಕರಾಗಬೇಕು ಎಂದಿದ್ದಾರೆ.

ಪರೀಕ್ಷೆ ಹೆಚ್ಚಳದಿಂದ ಸೋಂಕು ಏರಿಕೆ: ರಾಜ್ಯದಲ್ಲಿ ಏಪ್ರಿಲ್‍ನಲ್ಲಿ ಸೋಂಕು ಪರೀಕ್ಷೆಗಳು 7-8 ಸಾವಿರ ನಡೆಯುತ್ತಿದ್ದವು. ಹೊಸ ಪ್ರಕರಣಗಳು 100ಕ್ಕಿಂತ ಕಡಿಮೆ ಇದ್ದವು. ಮೇ ಕೊನೆಯ ವಾರ 16 ಸಾವಿರಕ್ಕೆ (ದುಪ್ಪಟ್ಟು ಹೆಚ್ಚಳ) ಏರಿಕೆಯಾದ ಹಿನ್ನೆಲೆ 200 ಆಸುಪಾಸಿಗೆ ಹೆಚ್ಚಳವಾದವು. ಇನ್ನು ಜೂನ್ ಮೊದಲ ವಾರ ಸರಾಸರಿ 20 ಸಾವಿರ ನಡೆಯುತ್ತಿದ್ದು, ಹೊಸ ಪ್ರಕರಣಗಳು ಕೂಡಾ 300 ಆಸುಪಾಸಿಗೆ ಏರಿಕೆಯಾಗಿವೆ. ಇನ್ನು ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಮುಂದಿನ ದಿನಗಳಲ್ಲಿ ಪರೀಕ್ಷೆಗಳು 30 ಸಾವಿರಕ್ಕೆ ಹೆಚ್ಚಲಿದ್ದು, ಹೊಸ ಪ್ರಕರಣ ಒಂದಿಷ್ಟು ಹೆಚ್ಚಾಗಬಹುದು. ಹೀಗಾಗಿ, ಕೋವಿಡ್ ಪ್ರಕರಣ ಹೆಚ್ಚಳ ಬಗ್ಗೆ ಆತಂಕ ಬೇಡ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರದಿಂದ ಪತ್ರ : ಪಕ್ಕದ ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಹೊಸ ಪ್ರಕರಣ ದಿಢೀರ್ ಹೆಚ್ಚಳವಾಗುತ್ತಿರುವ ಹಿನ್ನೆಲೆ ಕೇಂದ್ರ ಸರ್ಕಾರವು ಪರೀಕ್ಷೆ ಪ್ರಮಾಣ ಹೆಚ್ಚಳ ಸೇರಿದಂತೆ ಮುಂಜಾಗ್ರತಾ ಕ್ರಮಕ್ಕೆ ಸೂಚನೆ ನೀಡಿದೆ. ಪರೀಕ್ಷೆ ಹೆಚ್ಚಿಸಲಾಗಿದ್ದು, ಮಾಸ್ ಕಡ್ಡಾಯ ನಿಯಮವನ್ನು ಕಟ್ಟುನಿಟ್ಟಿನಲ್ಲಿ ಜಾರಿಗೆ ತರಲಾಗುತ್ತಿದೆ. ಆದರೆ, ರೂಪಾಂತರಿ ಪತ್ತೆಯಾಗಿ, ಹೊಸ ಅಲೆಯ ಕಾರಣದಿಂದ ಸೋಂಕು ಹೆಚ್ಚಳವಾಗಿಲ್ಲ ಎಂದು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯಾರು ಏನಂತಾರೆ.?

ಕೇಂದ್ರ ಸರಕಾರದ ಸೂಚನೆ ಬೆನ್ನಲೆ ರಾಜ್ಯದಲ್ಲಿ ಪರೀಕ್ಷೆ ಹೆಚ್ಚಳದಿಂದ ಕೋವಿಡ್ ಸೋಂಕಿನ ಪ್ರಕರಣ ಹೆಚ್ಚಾಗಿವೆ. ನೆರೆಯ ರಾಜ್ಯದಲ್ಲಿ ಸೋಂಕು ಹೆಚ್ಚಳದಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕರು ಆತಂಕಕ್ಕೊಳಗಾಗುವ ಬದಲು ಸ್ವಯಂ ಪ್ರೇರಿತವಾಗಿ ಮಾಸ್ ಧರಿಸಬೇಕು.

– ಡಾ.ಎಂ.ಕೆ.ಸುದರ್ಶನ್, ಅಧ್ಯಕ್ಷರು ಕೊರೋನಾ ತಾಂತ್ರಿಕ ಸಲಹಾ ತಜ್ಞರ ಸಮಿತಿ.

Recent Articles

spot_img

Related Stories

Share via
Copy link
Powered by Social Snap