ಬೆಂಗಳೂರು : ಡಿಎಸ್ ಮ್ಯಾಕ್ಸ್ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಜೂನ್ 19 ರಂದು ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಡಿಎಸ್ ಮ್ಯಾಕ್ಸ್ ಅಧ್ಯಕ್ಷ ಡಾ. ಕೆ.ವಿ ಸತೀಶ್ ಹಾಗೂ, ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಪಿ ದಯಾನಂದ್ ಮಾಹಿತಿ ನೀಡಿದರು.
ನಗರದ ಪ್ರೆಸ್ ಕ್ಲಬ್ ನಲ್ಲಿ ಡಿಎಸ್ ಮ್ಯಾಕ್ಸ್ ವತಿಯಿಂದ ಆಯೋಜಿಸಲಾಗಿದ್ದ ಸಿದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜೂನ್ 19ರಂದು ನಗರದ ಅರಮನೆ ಮೈದಾನದಲ್ಲಿ ನಡೆಯುವ 16ನೇ ವರ್ಷದ ಡಿಎಸ್ ಮ್ಯಾಕ್ಸ್ ವಾರ್ಷಿಕೋತ್ಸವ ಸಮಾರಂಭದಲ್ಲಿ 9 ಸಾಧಕರಿಗೆ ಕರುನಾಡು ರತ್ನ ಪ್ರಶಸ್ತಿ, ಹಾಗೂ ಇಬ್ಬರಿಗೆ ಕಲಾ ಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಹೇಳಿದರು. ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗಸ್ವಾಮೀಜಿ ಸಾನಿಧ್ಯದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ವಸತಿ ಮತ್ತು ಮೂಲ ಸೌಕರ್ಯ ಸಚಿವ ವಿ. ಸೋಮಣ್ಣ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ರಾಜೂಗೌಡ, ಹಿರಿಯ ಪತ್ರಕರ್ತ ಹೆಚ್.ಆರ್. ರಂಗನಾಥ್ ಭಾಗವಹಿಸಲಿದ್ದಾರೆ.
ಬಹುಮಾನ ವಿತರಣೆ: ಡಿಎಸ್ ಮ್ಯಾಕ್ಸ್ ಸಂಸ್ಥೆಯ ವಾರ್ಷಿಕೋತ್ಸವ ಸಂದರ್ಭದಲ್ಲಿ ಮನೆಗಳನ್ನು ಖರೀದಿಸಿರುವ ಗ್ರಾಹಕರಿಗಾಗಿ, ಕೋಟ್ಯಾಂತರ ರೂಪಾಯಿ ಮೌಲ್ಯದ 166 ಮಂದಿಗೆ ಲಕ್ಕಿ ಡ್ರಾ ಮೂಲಕ ವಿಶೇಷ ಬಹುಮಾನ ನೀಡಲಾಗುತ್ತದೆ. ಪ್ರಥಮ ಬಹುಮಾನವಾಗಿ ಮೂವರಿಗೆ 2 ಬೆಡ್ ರೂಂ ಪ್ಲಾಟ್, ದ್ವಿತೀಯ ಬಹುಮಾನ – ಮೂವರಿಗೆ ಕಾರ್, ಮೂರನೇ ಬಹುಮಾನ- 60 ಮಂದಿಗೆ ದ್ವಿಚಕ್ರ ವಾಹನಗಳು, ನಾಲ್ಕನೇ ಬಹುಮಾನ 100 ಕ್ಕೂ ಮಂದಿಗೆ ಗೃಹ ಉಪಯೋಗಿ ಉಪಕರಣಗಳನ್ನು ವಿತರಿಸಲಾಗುತ್ತಿದೆ. ಎಂದು ಹೇಳಿದರು.
ಬಡವರಿಗಾಗಿ ಆಸ್ಪತ್ರೆ ಯೋಜನೆ : ಜನ ಸಾಮಾನ್ಯರಿಗೆ ವಸತಿ ಕಲ್ಪಿಸುವ ಆದ್ಯತೆಯ ಮೆರೆಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಚಿಕಿತ್ಸೆ ಸಿಗಬೇಕೆಂಬ ಉದ್ದೇಶದಿಂದ ಬೆಂಗಳೂರಿನ ಕಂಗೇರಿ ಮತ್ತು ಥಣಿಸಂದ್ರ 80 ಮತ್ತು 150 ಹಾಸಿಗೆಗಳ ಆಸ್ಪತ್ರೆಯನ್ನು ನಿರ್ಮಾಣ ಮಾಡುತ್ತಿರುವುದಾಗಿ ತಿಳಿಸಿದರು. ಪ್ರಸ್ತುತ ರಾಜ್ಯದ ಎಲ್ಲಾ ಕಡೆ ಸಾಮಜಿಕ ಕಾಯ್ಕ್ರಮಗಳಲ್ಲಿ ತೊಡಗಿಸಿಕೊಂಡಿರುವ ನಮ್ಮ ಸಂಸ್ಥೆ ಮುಂದಿನ ದಿನಗಳಲ್ಲಿ ಇನಷ್ಟು ಜನರಿಗೆ ಅನುಕೂಲ ಮಾಡಲು ಯೊಜನೆಗಳನ್ನು ರೂಪಿಸುತ್ತೇವೆ ಎಂದರು.
ಸಾಮಾಜಿಕ ಸೇವೆ : ಪ್ರತಿ ವರ್ಷ ಸಾವಿರಾರು ಬಡ ಹಾಗೂ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಅಂಗವಿಕಲರಿಗೆ ನೆರವು ನೀಡುವ ನಿಟ್ಟಿನಲ್ಲಿ ಟ್ರೈಸಿಕಲ್ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಹಾಗೂ ಮೋದಿ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಪ್ರತಿ ತಿಂಗಳು ಬಡ ಗ್ರಾಮೀಣ ಜನರಿಗೆ ಕಣ್ಣಿನ ಪೆÇೀರೆ, ಶಸ್ತ್ರಚಿಕಿತ್ಸೆ ನಡೆಸುತ್ತಿದ್ದು, ಈ ಶಸ್ತ್ರಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಭರಿಸಿದ್ದೇವೆ. ಇಲ್ಲಿಯವರೆಗೂ ಸಾವಿರಾರು ಮಂದಿಗೆ ಕಣ್ಣಿನ ಶಸ್ತ್ರಚಿಕಿತ್ಸೆ, ಬಡ ಮಕ್ಕಳ ಹೃದಯ ಶಸ್ತ್ರ ಚಿಕಿತ್ಸೆಗೂ ನೆರವು ನೀಡಲಾಗಿದೆ. ಪ್ರತಿವರ್ಷ ನಮ್ಮ ಸಂಸ್ಥೆಯಿಂದ ಚಿತ್ರದರ್ಗದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಶಿವಮೂರ್ತಿ ಮುರಘ ಶರಣರ ಸಾನಿಧ್ಯದಲ್ಲಿ ನೂರಾರು ಜೊಡಿಗಳ ಸಾಮೂಹಿಕ ವಿವಾಹಗಳನ್ನು ನಡೆಸಿಕೊಂಡು ಬರಲಾಗಿದೆ ಎಂದರು.
ಡಿಎಸ್ ಮ್ಯಾಕ್ಸ್ ಕರುನಾಡು ಪ್ರಶಸ್ತಿಗೆ ಭಾಜನರಾದವರು : ಡಾ.ಕೆ. ಕಿರಣ್ ಕುಮಾರ್, ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ನಟಿ ಡಾ. ಭಾರತಿ ವಿಷ್ಣುವರ್ಧನ್, ಸಾಲುಮರದ ತಿಮ್ಮಕ್ಕ, ರಂಗ ಭೂಮಿ ಕಲಾವಿದೆ ಬಿ. ಮಂಜಮ್ಮ ಜೋಗತಿ, ಕವಿ, ಗೀತೆ ರಚನೆಗಾರ ಡಾ. ದೊಡ್ಡರಂಗೇಗೌಡ, ಜಾಗತಿಕ ಪ್ಯಾರಾ ಅಥ್ಲೀಟ್ ಮಾಲತಿ ಹೊಳ್ಳ ಕೃಷ್ಣಮೂರ್ತಿ ಹಾಗೂ ರಾಷ್ಟ್ರೀಯ ಮಹಿಳಾ ಸಾಧಕಿ ಸಬಿತಾ ಮೋನಿಸ್ ಮತ್ತು ತುಳಸಿ ಗೌಡ ಅವರಿಗೆ ಪ್ರಶಸ್ತಿ ನೀಡಲಾಗುತ್ತದೆ.
ಡಿಎಸ್ ಮ್ಯಾಕ್ಸ್ ಕಲಾಶ್ರೀ ಪ್ರಶಸ್ತಿ : ಸಾಹಿತಿ, ನಟ ಹಾಗೂ ನಿದೇರ್ಶಕ ನಾಗತಿಹಳ್ಳಿ ಚಂದ್ರಶೇಖರ್, ಹಾಗೂ ತೆಲುಗು ಸಾಹಿತಿ, ನಟ ಹಾಗೂ ನಿದೇರ್ಶಕ ತಣಿಕೇಳ್ಳ ಭರಣಿ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.
ಕಳೆದ ಎರಡು ವರ್ಷದಿಂದ ಡಿಎಸ್ ಮ್ಯಾಕ್ಸ್ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಮಾಡಿರಲಿಲ್ಲ, ಈ ವರ್ಷದಿಂದ ಕಾರ್ಯಕ್ರಮ ಮಾಡಲಾಗುವುದು, ಹಾಗೂ ಎರಡು ಸಾವಿರದ ಐನೂರು ಗ್ರಾಹಕರಿಗೆ ಆಹ್ವಾನ ನಿಡಿದ್ದೇವೆ. ನಮ್ಮ ಈ ಸಮಾಜ ಮುಖಿ ಕೆಲಸಕ್ಕೆ ಎಲ್ಲರ ಬೆಂಬಲ ಹಾಗೂ ಸಹಕಾರ ಬೇಕು.
-ಕೆ. ವಿ ಸತಿಶ್, ಅಧ್ಯಕ್ಷರು ಡಿಎಸ್ ಮ್ಯಾಕ್ಸ್
ಡಿಎಸ್ ಮ್ಯಾಕ್ಸ್ ಜನಸಾಮಾನ್ಯರಿಗಾಗಿ ಕಡಿಮೆ ದರದಲ್ಲಿ ನಿವೇಶನ ಕಲ್ಪಿಸಿಕೊಡುತ್ತದೆ, ಇದರ ಜೊತೆಗೆ ಸಾಮೂಹಿಕ ವಿವಾಹ, ಕಣ್ಣಿನ ಚಿಕಿತ್ಸೆ, ಅನಾಥ ಮಕ್ಕಳಿಗೆ ನೆರವು, ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಕೊಡಲು ಎರಡು ಆಸ್ಪತ್ರೆಗಳನ್ನು ನಿರ್ಮಾಣ ಮಾಡುತ್ತಿದ್ದೇವೆ.
-ಎಸ್.ಪಿ ದಯಾನಂದ್, ಕಾರ್ಯನಿರ್ವಾಹಕ ನಿರ್ದೇಶಕ, ಡಿಎಸ್ ಮ್ಯಾಕ್ಸ್