ಬೆಂಗಳೂರಿನಲ್ಲಿ ಸ್ಟಾರ್ ನಟನ ಮಗ ಅರೆಸ್ಟ್

ತಡ ರಾತ್ರಿ ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ಆರೋಪ

ಪ್ರಜಾಪ್ರಗತಿ.ಕಾಂ
ಬೆಂಗಳೂರು : ನಗರದ ಫೈವ್ ಸ್ಟಾರ್ ಹೋಟೆಲ್‍ವೊಂದರಲ್ಲಿ ತಡರಾತ್ರಿಯಾದರೂ ಪಾರ್ಟಿ ನಡೆಸುತ್ತಿದ್ದಾರೆ ಎಂಬ ಅನುಮಾನದ ಹಿನ್ನೆಲೆ ಮೇಲೆ ಹಲಸೂರು ಪೆÇಲೀಸರು ದಾಳಿ ನಡೆಸಿದ್ದಾರೆ, ಈ ವೇಳೆ ಡ್ರಗ್ಸ್ ಸೇವಿಸುತ್ತಿರುವುದು ಧೃಟಪಟ್ಟಿದ್ದು ಬಾಲಿವುಡ್ ಸ್ಟಾರ್ ನಟ ಶಕ್ತಿ ಕಪೂರ್ ರವರ ಮಗ ಸಿದ್ಧಾಂತ್ ನನ್ನು ಪೊಲೀಸರು ಬಂಧಿಸಿರುವುದಾಗಿ ಸೋಮವಾರ ತಿಳಿಸಿದ್ದಾರೆ.

ತಡರಾತ್ರಿಯಾದರೂ ಪಾರ್ಟಿ ನಡೆಸುತ್ತಿದ್ದ ಫೈವ್ ಸ್ಟಾರ್ ಹೋಟೆಲ್ ಮೇಲೆ ಹಲಸೂರು ಪೆÇಲೀಸರಿಗೆ ಅನುಮಾನ ಬಂದು ದಾಳಿ ನಡೆಸಿದ್ದಾರೆ. ರಾಜಕೀಯ ನಾಯಕರ ಮಕ್ಕಳು ಸಹ ಪಾರ್ಟಿಯಲ್ಲಿ ಇದ್ದರು ಎಂದು ಅಂದಾಜಿಸಲಾಗಿದ್ದು. ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ಪಾರ್ಟಿ ನಡೆಸುತ್ತಿದ್ದನ್ನು ಪೆÇಲೀಸರು ಪರಿಶೀಲನೆ ನಡೆಸಿ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇನ್ನು ವಶಕ್ಕೆ ಪಡೆದಿದ್ದ 35 ಜನರ ಮಾದರಿಗಳನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ಅದರಲ್ಲಿ 5 ಜನರು ಡ್ರಗ್ಸ್ ಸೇವಿಸಿರುವುದಾಗಿ ಧೃಡಪಟ್ಟಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಒಟ್ಟು ಆರು ಜನರ ವಿರುದ್ಧ ಕೇಸ್ : ಒಟ್ಟು ಆರು ಜನರ ಮೇಲೆ ಪೆÇಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ. ಆದರೆ ಈ ಪಾರ್ಟಿಯಲ್ಲಿ ಬಾಲಿವುಡ್ ನಟನ ಮಗ ಕೂಡ ಸಿಕ್ಕಿ ಬಿದ್ದಿದ್ದು, ಡಗ್ರ್ಸ್ ತೆಗೆದುಕೋಂಡಿರುವುದು ವೈದ್ಯಕೀಯ ಪರೀಕ್ಷೆ ವೇಳೆ ರಕ್ತದಲ್ಲಿ ಡ್ರಗ್ಸ್ ಸೇವಿಸಿರುವುದು ಪತ್ತೆಯಾಗಿದೆ.

ಪೋಲೀಸರ ಕಾರ್ಯಚರಣೆ ಹೇಗಿತ್ತು : ತಡರಾತ್ರಿಯಾದರು ಹೋಟಲ್ ವೊಂದರಲ್ಲಿ ಡಿಜೆ ಪಾರ್ಟಿ ಮಾಡುತ್ತಿದ್ದ ಬಗ್ಗೆ ಅನುಮಾನ ಬಂದು, ಹಲಸೂರು ಸಿಪಿಐ ಮಂಜುನಾಥ್ ನೇತೃತ್ವದಲ್ಲಿ 25ಕ್ಕೂ ಹೆಚ್ಚು ಪೆÇಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಡ್ರಗ್ಸ್ ಸೇವನೆಯ ಬಗ್ಗೆ ಅನುಮಾನ ಬಂದು 50ಕ್ಕೂ ಹೆಚ್ಚು ಯವಕ ಮತ್ತು ಯುವತಿಯರನ್ನು ವಶಕ್ಕೆ ಪಡೆದು ಮೂರು ಟಿಟಿ ವಾಹನದಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.
ಬಾಲಿವುಡ್?ನಲ್ಲಿ ಸುದ್ದಿಯಾಗಿತ್ತು ಡ್ರಗ್ಸ್ ಪ್ರಕರಣ

ಡ್ರಗ್ಸ್ ಸೇವಿಸುವಲ್ಲಿ ವಿಐಪಿಗಳು ಹೆಚ್ಚು : ನಗರದಲ್ಲಿ ಇದೇನು ಮೊದಲ ಬಾರಿ ನಡೆದಿಲ್ಲ, ಈ ಹಿಂದೆ ಹಲವು ಬಾರಿ ರಾಜಕೀಯ ನಾಯಕರ ಮಕ್ಕಳು, ಸ್ಟಾರ್ ನಟ, ನಟಿಯರು, ಅವರ ಮಕ್ಕಳು ಹೀಗೆ ಹಲವಾರು ಜನರು ಡ್ರಗ್ಸ್ ಗೆ ಬಾನಿಸರಾಗಿದ್ದಾರೆ. ಟಾಲಿವುಡ್, ಬಾಲಿವುಡ್ ನಟರು ಹಲವು ಬಾರಿ ಪೊಲೀಸರ ಬಂಧನಕ್ಕೂ ಒಳಗಾಗಿದ್ದಾರೆ.

Recent Articles

spot_img

Related Stories

Share via
Copy link