ಬೆಂಗಳೂರು : ತೀವ್ರ ಕುತೂಹಲ ಕೆರಳಿಸಿದ ವೇಣುಗೋಪಾಲ್‌ ಭೇಟಿ

ಬೆಂಗಳೂರು :

   ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಬಿಜೆಪಿ ನಾಯಕರು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಪಟ್ಟು ಹಿಡಿದುಕುಳಿತಿದ್ದು, ಇನ್ನೊಂದೆಡೆ ಕಾಂಗ್ರೆಸ್ ಸಚಿವರು ನಿರಂತರ ಸಭೆ, ಹೇಳಿಕೆ, ಸಿಎಂ ಬದಲಾವಣೆ ಚರ್ಚೆಗಳ ನಡುವೆಯೇ ಹೈಕಮಾಂಡ್ ನಾಯಕರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.

    ಇಂದು ಬೆಂಗಳೂರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ ಆಗಮಿಸುತ್ತಿದ್ದು, ಇನ್ನೆರಡು ದಿನ ಇಲ್ಲೇ ಇರುತ್ತಾರೆ ಎಂದು ತಿಳಿದುಬಂದಿದೆ. ಅಲ್ಲದೇ ಹೈಕಮಾಂಡ್ ಮಟ್ಟದಲ್ಲಿ ಪ್ರಭಾವಿ ನಾಯಕರಾಗಿರುವ ಅವರು, ಬೆಂಗಳೂರಿಗೆ ದಿಢೀರ್ ಭೇಟಿ ಕಾಂಗ್ರೆಸ್ ಗೆ ಸಾಕಷ್ಟು ಕುತೂಹಲಕ್ಕೆ ಅನುವು ಮಾಡಿಕೊಟ್ಟಿದೆ.

   ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಬೆಂಗಳೂರು ಭೇಟಿ ಬಗ್ಗೆ ಕಾಂಗ್ರೆಸ್ ಪಕ್ಷ ಖಚಿತಪಡಿಸಿದೆ. ಆದರೆ ಪಕ್ಷದ ವತಿಯಿಂದ ಅವರು ಪಾಲ್ಗೊಳ್ಳುವ ಯಾವುದೇ ಸಭೆಗಳು ನಿಗದಿಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ.

   ಮತ್ತೊಂದೆಡೆ ಸಿಎಂ ಬದಲಾವಣೆಯ ಬಗ್ಗೆ ರಾಜ್ಯದಲ್ಲಿ ಬಹಿರಂಗವಾಗಿ ಚರ್ಚೆಗಳಾಗುತ್ತಿದ್ದು, ಇದೀಗ ದಿಢೀರ್ ಆಗಿ ಹೈಕಮಾಂಡ್ ನ ನಾಯಕರು ರಾಜ್ಯಕ್ಕೆ ಭೇಟಿ ನೀಡಿದ್ದು, ಯಾರನ್ನು ಭೇಟಿಯಾಗುತ್ತಾರೆ.? ಯಾರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಕಾದು ನೋಡಬೇಕಿದೆ.

   ಕಾಂಗ್ರೆಸ್ ನಾಯಕರ ಪ್ರಕಾರ ಕೆ. ಸಿ. ವೇಣುಗೋಪಾಲ್ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಸಭೆಗಾಗಿ ಆಗಮಿಸಿದ್ದಾರೆ. ಪಕ್ಷದ ವತಿಯಿಂದ ಅವರ ಯಾವುದೇ ಸಭೆ ನಿಗದಿಯಾಗಿಲ್ಲ. ಪಕ್ಷದ ನಾಯಕರು ಅವರನ್ನ ಭೇಟಿ ಮಾಡುವುದು ಅವರ ವೈಯಕ್ತಿಕ ವಿಚಾರ ಎಂದು ಕಾಂಗ್ರೆಸ್ ತಿಳಿಸಿದೆ.

   ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ನಾಯಕರೇ ಸಿಎಂ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದು, ಈ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರನ್ನು ವೇಣುಗೋಪಾಲ್ ಭೇಟಿಯಾಗಿ ನಾಯಕರ ಹೇಳಿಕೆಗೆ ತಡೆ ಹಾಕಲು ಹೈಕಮಾಂಡ್ ನಿಂದಲೆ ಸೂಚನೆ ನೀಡಲು ಮನವಿ ಮಾಡಲಿದ್ದಾರೆ ಎನ್ನಲಾಗಿದೆ.

Recent Articles

spot_img

Related Stories

Share via
Copy link
Powered by Social Snap