ಬೆಂಗಳೂರು : ಸಿದ್ದರಾಮಯ್ಯ ಕ್ಯಾಬಿನೆಟ್ ಸಚಿವರಿಗೆ ಡಿಕೆಶಿ ಓಪನ್ ವಾರ್ನಿಂಗ್

ಬೆಂಗಳೂರು: 

    ಕಾಂಗ್ರೆಸ್‌ನಲ್ಲಿ ಪಕ್ಷ ಸಂಘಟನೆಗೆ ಬದಲಾವಣೆ ತರಲು ತೀರ್ಮಾನ ಮಾಡಿದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಹತ್ವದ ನಿರ್ದೇಶನ ನೀಡಿದ್ದಾರೆ.

    ಉಸ್ತುವಾರಿ ಸಚಿವರು ಹಾಗೂ ಶಾಸಕರಿಗೆ ಮಹತ್ವದ ಸೂಚನೆ ನೀಡಿದ್ದು ಕಾಂಗ್ರೆಸ್ ಪಕ್ಷವನ್ನು ಕೇಡರ್ ಬೇಸ್ ಪಾರ್ಟಿ ಮಾಡಲೇಬೇಕು ಎಂದು ಹೇಳಿ ಕಾಂಗ್ರೆಸ್ ಕುಟುಂಬ ಎಂಬ ವಿನೂತನ ಪರಿಕಲ್ಪನೆಯನ್ನು ಮುಂದಿಟ್ಟಿದ್ದಾರೆ

 

    ಕೆಪಿಸಿಸಿ ಭಾರತ್ ಜೋಡೋ ಭವನದಲ್ಲಿ ನಡೆದ ನೆಹರು ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಕುಟುಂಬ ಅಂತ 50 ಫ್ಯಾಮಿಲಿ ಟೀಂ ಮಾಡಬೇಕು. 50 ಜನರ ತಂಡ ರಚನೆ ಮಾಡಬೇಕು.ಕೇಡರ್ ಬೇಸ್ ಪಾರ್ಟಿ ಮಾಡದೇ ಇದ್ದರೆ ಮುಂದೆ ಕಷ್ಟವಾಗುತ್ತದೆ. ಎಷ್ಟೇ ದೊಡ್ಡವರೇ ಆದರೂ ಪಾರ್ಟಿಗೆ ಕಾಣಿಕೆ ನೀಡಲೇಬೇಕು. ಇದು ನಾಲ್ಕು ವರ್ಷದ ಸರ್ಕಾರ ಅಲ್ಲ, ಇದು ಹತ್ತು ವರ್ಷದ ಸರ್ಕಾರ. ಇದಕ್ಕೆ ಭದ್ರವಾದ ಅಡಿಪಾಯ ಹಾಕಬೇಕು ಎಂದರು
    ನಿನ್ನೆ ನಾನು ಸಚಿವರಲ್ಲಿ ಮಾತನಾಡಿದ್ದೇನೆ. ಪಕ್ಷದ ಕಚೇರಿಯೇ ಮೊದಲ ದೇವಸ್ಥಾನ. ಬೆಂಗಳೂರು ಸಿಟಿ ಕಚೇರಿ ಕೂಡ ಹೊಸದಾಗಿ ಆಫೀಸ್ ಕಟ್ಟುತ್ತೇವೆ. ಮುಂದಿನ ಒಂದು ವರ್ಷದಲ್ಲಿ ಪಕ್ಷದ ಕಚೇರಿ ಕಟ್ಟಿ ಫೌಂಡೇಶನ್ ಹಾಕಬೇಕು. ಎಲ್ಲ ಸಚಿವರೂ ಕೂಡ ಇದಕ್ಕೆ ಸಜ್ಜಾಗಬೇಕು ಎಂದರು
   ಸಚಿವ ಹೆಚ್‌.ಸಿ.ಮಹದೇವಪ್ಪನವರಿಗೂ ಕೂಡ ಎಚ್ಚರಿಕೆ ನೀಡಿದ್ದೇವೆ. ಪಕ್ಷದ ಜಿಲ್ಲಾ ಕಚೇರಿ ಒಂದು ವರ್ಷದಲ್ಲಿ ಕಟ್ಟದೇ ಹೋದರೆ, ಪಕ್ಷದ ಕೆಲಸ ಮಾಡದೇ ಹೋದರೆ ಬೇರೆ ಕಡೆ ಹೋಗಬೇಕಾಗುತ್ತದೆ ಎಂದು ಹೇಳಿದ್ದೇವೆ ಎಂದು ಡಿ‌.ಕೆ.ಶಿವಕುಮಾರ್ ಬಹಿರಂಗ ವಾರ್ನಿಂಗ್ ಕೊಟ್ಟರು

 

Recent Articles

spot_img

Related Stories

Share via
Copy link
Powered by Social Snap