ಬೆಳೆವಿಮೆ ತಾರತಮ್ಯ ಖಂಡಿಸಿ ಇಂದು ಬ್ಯಾಂಕ್ ಮುತ್ತಿಗೆ

ಹುಳಿಯಾರು:

                ಬೆಳೆವಿಮೆ ತಾರತಮ್ಯ ಖಂಡಿಸಿ ಆ.28 ರ ಮಂಗಳವಾರ ಕಂದಿಕೆರೆ ಕಲ್ಪತರು ಗ್ರಾಮೀಣ ಬ್ಯಾಂಕ್ ಮುತ್ತಿಗೆ ಹಾಕುವುದಾಗಿ ರಾಜ್ಯ ರೈತ ಸಂಘದ (ಹೊಸಹಳ್ಳಿ ಚಂದ್ರಣ್ಣ ಬಣ) ಅಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ತಿಳಿಸಿದ್ದಾರೆ.

                ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು ರಾಜ್ಯಾಧ್ಯಂತ ರಾಷ್ಟ್ರೀಯ ಫಸಲು ಭಿಮಾ ಯೋಜನೆಯಡಿ ರೈತರು ಬೆಳೆ ವಿಮೆ ಕಟ್ಟಿದಂತೆ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲೂ ರೈತರು ವಿಮೆ ಕಟ್ಟಿದ್ದಾರೆ. ಆದರೆ ಬೆಳೆ ನಷ್ಟವಾಗಿ ವರ್ಷ ಕಳೆದರೂ ತಾಲೂಕಿನ ರೈತರಿಗೆ ಪರಿಹಾರವಾಗಿ ವಿಮೆ ಹಣ ರೈತರ ಖಾತೆಗೆ ಜಮೆ ಮಾಡಿಲ್ಲ ಎಂದು ಆರೋಪಿಸಿದ್ದಾರೆ.

                 ಜಿಲ್ಲೆಯ ರೈತರಿಂದ 2016-17 ಮತ್ತು 2017-18 ನೇ ವರ್ಷದಲ್ಲಿ ಕೋಟ್ಯಾಂತರ ರೂ. ಬೆಳೆ ವಿಮೆ ಕಟ್ಟಿಸಿಕೊಂಡು ಬೆಳೆ ನಷ್ಟದ ಪರಿಹಾರವಾಗಿ 76 ಕೋಟಿ ರೂ. ಘೋಷಿಸಿದೆ. ಅದರೆ ಇದರೂವರೆವಿಗೂ ಈ ಹಣ ಯಾವ ರೈತರ ಖಾತೆಗೆ ಹೋಗಿದೆ ಎನ್ನುವ ಮಾಹಿತ ಸಹ ಲಭ್ಯವಿಲ್ಲ. ಬೆಳೆ ವಿಮೆ ಬರುವ ಭರವಸೆಯಿಂದ ಸಾಲಸೂಲ ಮಾಡಿರುವ ರೈತರ ಗೋಳು ಈಗ ಕೇಳುವವರಾರು ಇಲ್ಲದಾಗಿದ್ದಾರೆ ಎಂದಿದ್ದಾರೆ.

                   ಈ ಬಗ್ಗೆ ಬ್ಯಾಂಕ್ ಹಾಗೂ ಕೃಷಿ ಅಧಿಕಾರಿಗಳನ್ನೂ ಪ್ರಶ್ನಿಸಿದರೂ ಹಾರಿಕೆಯ ಉತ್ತರ ನೀಡುತ್ತಾರೆ. ಇನ್ನು ಜನಪ್ರತಿನಿಧಿಗಳು ಸಬೂಬು ಹೇಳಿ ಕಳಿಸುತ್ತಾರೆ. ಹಾಗಾಗಿ ವಿಮೆಯ ಪರಿಹಾರ ಹಣದ ಬಗ್ಗೆ ಸ್ಪಷ್ಟ ಮಾಹಿತಿ ನೀಡಿ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡುವ ನಿಟ್ಟಿನಲ್ಲಿ ಒತ್ತಡ ಏರುವ ಸಲುವಾಗಿ ಬ್ಯಾಂಕ್ ಮುತ್ತಿಗೆ ಕಾರ್ಯ ಹಮ್ಮಿಕೊಂಡಿದ್ದು ರೈತರು ಜಾತಿ, ಪಕ್ಷದ ಬಿಟ್ಟು ಸಹಸ್ತ್ರ ಸಂಖ್ಯೆಯಲ್ಲಿ ಸೇರಿ ಒಗ್ಗಟ್ಟು ಪ್ರದರ್ಶಿಸಬೇಕಿದೆ ಎಂದರು

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link