ಬೇಡತ್ತೂರು ಗ್ರಾಮದಲ್ಲಿ ಓವರ್ ಹೆಡ್ ಬ್ಯಾಂಕ್ ಬೀಳುವ ಮುನ್ನ ತೆರವುಗೂಳಿಸುವರೇ ?

 ಮಧುಗಿರಿ

             ತಾಲ್ಲೂಕಿನ ಮಿಡಿಗೇಶಿ ಸೇರಿದ ಬೇಡತ್ತೂರು ಗ್ರಾಮದ ಮದ್ಯೆ ಅಂದರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ಪಕ್ಕದಲ್ಲಿರುವ 1993 ನೇ ಸಾಲಿನಲ್ಲಿ ನಿರ್ಮಿಸಿರುವ ಗ್ರಾಮಾಂತರ ನೀರು ಸರಬರಾಜು ಯೋಜನೆಯಡಿಯಲ್ಲಿ 25,000 ಲೀಟರ್ ಸಾಮಥ್ರ್ಯದ ಓವರ್ ಹೆಡ್ ಟ್ಯಾಂಕ್ ಇದೀಗ ಶಿಥಿಲಗೊಂಡಿರುತ್ತದೆ. ಟ್ಯಾಂಕನ್ನು ನಾಲ್ಕು ಪಿಲ್ಲರ್‍ಗಳು ಹಾಗೂ ನಾಲ್ಕು ಭೀಮ್ಸ್‍ಗಳು ಸಂಪೂರ್ಣ ಶಿಥಿಲಗೊಂಡಿರುತ್ತವೆ. ಸಂಪೂರ್ಣ ಸಿಮೆಂಟಿನ ಕೆನೆ ಪದರಗಳು ಉದುರಿದ್ದು ಕಬ್ಬಿಣದ ಕಂಬಿಗಳು ಎದ್ದು ಕಾಣುತ್ತಿವೆ. ಸದರಿ ಟ್ಯಾಂಕ್ ನಿಂದ ಇಂದಿಗೂ ಗ್ರಾಮಕ್ಕೆ ನೀರನ್ನು ಬೇಡತ್ತೂರು ಗ್ರಾಮ ಪಂಚಾಯ್ತಿಯವರು ನೀರನ್ನು ಸರಬರಾಜು ಮಾಡುತ್ತಿರುತ್ತಾರೆ. ಸದರಿ ಓವರ್ ಹೆಡ್ ಟ್ಯಾಂಕ್ ಯಾವ ಸಮಯದಲ್ಲಾದರು ನೆಲಕ್ಕುರಳಬಹುದಾಗಿದೆ, ಇದರಿಂದ ಸಾರ್ವಜನಿಕರಿಗಾದರೂ ತೊಂದರೆಯಾಗಬಹುದು ಹಾಗೂ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳು ಹಾಗೂ ಬೋದಕವರ್ಗದವರಿಗಾದರೂ ತೊಂದರೆ ಸಂಭವಿಸುವಂತಿದ್ದು ಸಂಭಂಧಿಸಿದ ಗ್ರಾಮ ಪಂಚಾಯ್ತಿಯವರು ಅತಿ ಶಿರ್ಘದಲ್ಲಿ ಶಿಥಿಲಗೊಂಡಿರುವ ಓವರ್ ಹೆಡ್ ಟ್ಯಾಂಕನ್ನು ತೆರವುಗೊಳಿಸುವ ಮೂಲಕ ಮುಂದೆ ಆಗಬಹುದಾದ ಅನಾವುತಗಳನ್ನು ತಪ್ಪಿಸಬೇಕೆಂದು ಈ ಗ್ರಾಮಸ್ಥರುಗಳ ಒತ್ತಾಯವಾಗಿದೆ.

Recent Articles

spot_img

Related Stories

Share via
Copy link