ಬೆಂಗಳೂರು:
ಬೋರ್ ವೆಲ್ ಕೊರೆಸುವ ರಾಜ್ಯದ ಜನರಿಗೆ ಭಾರಿ ಆಘಾತ ಕಾದಿದೆ. ಈದುವರೆಗೆ ಅಡಿಗೆ 60-70ರೂ ಬೋರ್ ವೆಲ್ ಕೊರೆಸಲು ಹಣ ಖರ್ಚು ಮಾಡುತ್ತಿದ್ದ ರಾಜ್ಯದ ಜನರು ಇನ್ನು ಒಂದು ಅಡಿಗೆ ಸುಮಾರು 120 ರೂಗಳ ಬೆಲೆ ತೆರಬೇಕಾಗುತ್ತದೆ. ಕರ್ನಾಟಕ ರಾಜ್ಯ ಬೋರ್ ವೆಲ್ ಮಾಲೀಕರ ಸಂಘ ಕಳೆದ ಮೂರು ದಿನಗಳಿಂದ ಬೋರ್ ವೆಲ್ ಕೊರೆಯುವುದನ್ನು ಸ್ಥಗಿತಗೊಳಿಸಿದ್ದಾರೆ, ಡೀಸೆಲ್ ದರ ಹೆಚ್ಚಳದಿಂದ ಉಂಟಾಗಿರುವ ಆರ್ಥಿಕ ನಷ್ಟವನ್ನು ಭರಿಸಿಕೊಳ್ಳಲು ಬೋರ್ ವೆಲ್ ಕೊರೆಯುವ ಶುಲ್ಕವನ್ನು ದುಪ್ಪಟ್ಟು ಹೆಚ್ಚಿಸಲು ಮುಂದಾಗಿದ್ದಾರೆ.
ಈ ಕುರಿತು ಸೆಪ್ಟೆಂಬರ್ 16ರಂದು ಭಾನುವಾರ ಬೆಂಗಳೂರಿನ ಕೆಂಗೇರಿ ಬಳಿ ಕರ್ನಾಟಕ ರಾಜ್ಯ ಬೋರ್ ವೆಲ್ ಮಾಲೀಕರ ಸಂಘದ ಬೃಹತ್ ಸಭೆ ನಡೆಯಲಿದೆ. ಬೋರ್ ವೆಲ್ ಕೊರೆಯುವ ಶುಲ್ಕವನ್ನು ಪ್ರತಿ ಅಡಿಗೆ 60ರಿಂದ 120 ರೂಗಳಿಗೆ ಹೆಚ್ಚಿಸಲು ಅಂತಿಮ ನಿರ್ಧಾರ ತೆಗೆದು ಕೊಳುವ ನಿರೀಕ್ಷೆ ಇದೆ.
“ಅದೆ ಎನಾದರು ಫಲಿಸಿದರೆ ಇನ್ನು ಮುಂದೆ ರೈತರ ಆತ್ಮಹತ್ಯಾ ಪ್ರಕರಣಗಳು ಹೆಚ್ಚಾದರು ಆಶ್ಚರ್ಯ ಪಡಬೇಕಾಗಿಲ್ಲ”