ಬ್ರಹ್ಮಶ್ರೀ ನಾರಾಯಣಗುರುಗಳು ಯಜಮಾನಿಕೆ ಸಂಸ್ಕೃತಿ ವಿರುದ್ದ ಹೋರಾಡಿದ ಕ್ರಾಂತಿಪುರುಷರು : ಡಿ. ಧರಣೇಂದ್ರಯ್ಯ

ಹಿರಿಯೂರು:

              ಬ್ರಹ್ಮಶ್ರೀ ನಾರಾಯಣಗುರುಗಳು ದೇವರನಾಡದ ಕೇರಳ ರಾಜ್ಯದಲ್ಲಿ ಸುಮಾರು 1856ರಲ್ಲಿ ಸಮಾಜದ ಅತಿ ಹಿಂದುಳಿದ ಜನಾಂಗದಲ್ಲಿ ಜನಿಸಿದರು, ಅಂದಿನ ಕಾಲದ ಯಜಮಾನಿಕೆ ಸಂಸ್ಕøತಿ ವಿರುದ್ದ ಹೋರಾಡಿದ ಕ್ರಾಂತಿಪುರುಷರು ಅಷ್ಟೇ ಅಲ್ಲ ಅಂದಿನ ಸಮಾಜದಲ್ಲಿ ಜಾರಿಯಲ್ಲಿದ್ದ ಅಸ್ಪಷ್ಯತೆ, ಅಸಮಾನತೆ ವಿರುದ್ಧ ಧ್ವನಿ ಎತ್ತುವ ಮೂಲಕ ಸಮಾಜದಲ್ಲಿ ಸಮಾನತೆಗಾಗಿ ನೊಂದವರ ಶೋಷಿತರ ಧ್ವನಿಯಾದವರು ಎಂಬುದಾಗಿ ವಾಣಿಕಾಲೇಜಿನ ಪ್ರಾಂಶುಪಾಲರಾದ ಡಿ. ಧರಣೇಂದ್ರಯ್ಯ ಹೇಳಿದರು.

                ನಗರದ, ತಾಲ್ಲೂಕು ಕಛೇರಿಯಲ್ಲಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ನೇತೃತ್ವದಲ್ಲಿ ಏರ್ಪಡಿಸಲಾಗಿದ್ದ, ಬ್ರಹ್ಮಶ್ರೀ ನಾರಾಯಣಗುರುಗಳ ಜಯಂತೋತ್ಸವದಲ್ಲಿ ವಿಶೇಷ ಉಪನ್ಯಾಸಕರಾಗಿ ಪಾಲ್ಗೊಂಡು ಮಾತನಾಡಿದರು.

               ಸಮಾಜದಲ್ಲಿನ ಜಾತಿವ್ಯವಸ್ಥೆಯ ವಿರುದ್ಧ ಹೋರಾಡುವ ಮೂಲಕ ಸಮಾಜದಲ್ಲಿ ಸಾಮಾಜಿಕ ಕ್ರಾಂತಿ, ಧಾರ್ಮಿಕ ಕ್ರಾಂತಿ, ಹಾಗೂ ಶೈಕ್ಷಣಿಕ ಕ್ರಾಂತಿಗೆ ಕಾರಣರಾದವರು. ಇವರು ಇಡೀ ಭಾರತ ಕಂಡ ಕ್ರಾಂತಿಪುರುಷ ಅಷ್ಟೇಅಲ್ಲ ದೀನದಲಿತರ ಏಳಿಗೆಗಾಗಿ ಹೆಣ್ಣಿನ ಶೋಷಣೆ ಹೆಣ್ಣಿನ ಸಮಾನತೆಗಾಗಿ ಹಾಗೂ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅವಿರತ ಹೋರಾಡಿದವರು ಎಂದರು.

                  ವಿಶೇಷ ಅತಿಥಿಗಳಾಗಿದ್ದ ವೃತ್ತ ನಿರೀಕ್ಷಕರಾದ ಗುರುರಾಜ್ ಮಾತನಾಡಿ, ಸುಮಾರು 19-20ನೇ ಶತಮಾನದಲ್ಲಿ ಬ್ರಿಟೀಷರ ಕಾಲದಲ್ಲಿ ಕೇರಳದಲ್ಲಿ ಕ್ರಾಂತಿ ಕಹಳೆ ಮೊಳಗಿಸುವ ಮೂಲಕ ಇಡೀ ದೇಶಕ್ಕೆ ಹೆಸರಾದವರು ಶ್ರೀ ನಾರಾಯಣ ಗುರುಗಳು. ವಿಶೇಷವೆಂದರೆ ಸಮಾಜದಲ್ಲಿನ ವರ್ಣಭೇಧ, ಜಾತಿಭೇಧ ಅಸ್ಪøಶ್ಯತೆ ಅಸಮಾನತೆ ತಾರತಮ್ಯಗಳ ವಿರುದ್ಧ ಸಿಡಿದೆದ್ದವರು.ಅಲ್ಲದೆ ಈ ಎಲ್ಲಾ ತಾರತಮ್ಯಗಳಿಗೆ ಪರಿಹಾರವೆಂದರೆ ನಮ್ಮ ಸಮಾಜ ಶೈಕ್ಷಣಿಕ ಪ್ರಗತಿ ಸಾಧಿಸುವ ಮೂಲಕ ವಿದ್ಯಾವಂತರಾಗಬೇಕು ಎಂಬ ನಿಟ್ಟಿನಲ್ಲಿ ಅಂದಿನ ಕಾಲದಲ್ಲಿಯೇ ಕೇರಳದಲ್ಲಿ ಸುಮಾರು 42 ರಾತ್ರಿ ಶಾಲೆಗಳನ್ನು ಗ್ರಂಥಾಲಯಗಳನ್ನು ಹಾಗೂ ದಲಿತರು ಹಾಗೂ ಹಿಂದುಳಿದವರಿಗಾಗಿಯೇ ದೇವಸ್ಥಾನಗಳನ್ನು ಕಟ್ಟಿಸಿದವರು. ಅವರು ವಿಚಾರವಾದಿಗಳು, ದಾರ್ಶನಿಕರು, ಮಹಾನ್ ಕ್ರಾಂತಿಕಾರರು ಆಗಿದ್ದರಲ್ಲದೆ, ಎಲ್ಲಾ ಜಾತಿ-ಮತ ಜನಾಂಗವನ್ನು ಮೀರಿದ ಜಾತ್ಯಾತೀತ ವ್ಯಕ್ತಿಯಾಗಿದ್ದರು. ಇವರ ದೂರದೃಷ್ಟಿ, ಆದರ್ಶಗಳು, ಇಂದಿನ ಯುವಜನತೆ ಹಾಗೂ ವಿದ್ಯಾರ್ಥಿಗಳಿಗೆ ನಿಜಕ್ಕೂ ಆದರ್ಶ ಎಂದರು.

                  ಆರಂಭದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಆರ್ಯ ಈಡಿಗರ ಸಂಘದ ಕಾರ್ಯದರ್ಶಿ ವಿ.ತಿಪ್ಪೇಸ್ವಾಮಿಯವರು ನಮ್ಮ ಸಮಾಜವನ್ನು ಸರ್ಕಾರ ಗುರುತಿಸಿ, ನಮ್ಮ ಬ್ರಹ್ಮಶೀ ನಾರಾಯಣ ಗುರುಗಳ ಜಯಂತೋತ್ಸವವನ್ನು ಸರ್ಕಾರದ ಕಾರ್ಯಕ್ರಮವಾಗಿ ಆಚರಿಸಲು ಅನುವು ಮಾಡಿಕೊಟ್ಟಿರುವುದು ನಿಜಕ್ಕೂ ಸಂತೋಷದ ಸಂಗತಿ ಎಂದರಲ್ಲದೆ ಅದಕ್ಕಾಗಿ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು.

                   ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಪದಕ ಪುರಸ್ಕøತರಾದ ವೃತ್ತ ನಿರೀಕ್ಷಕ ಶ್ರೀ ಗುರುರಾಜ್‍ರವರನ್ನು ತಾಲ್ಲೂಕು ಆಡಳಿತ ಹಾಗೂ ಆರ್ಯ ಈಡಿಗ ಸಮಾಜದ ವತಿಯಿಂದ ಶಾಲು ಹೊದಿಸಿ, ಸನ್ಮಾನಿಸಿ ಗೌರವಿಸಲಾಯಿತು.

                  ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ್ ಜೆ.ಸಿ.ವೆಂಕಟೇಶಯ್ಯ ವಹಿಸಿದ್ದರು. ವೇದಿಕೆಯಲ್ಲಿ, ತಾ.ಪಂ.ಅಧ್ಯಕ್ಷರಾದ ಚಂದ್ರಪ್ಪ, ಎ.ಪಿ.ಎಂ.ಸಿ ಅಧ್ಯಕ್ಷರಾದ ಈರಲಿಂಗೇಗೌಡ, ಆರ್ಯ ಈಡಿಗರ ಸಂಘದ ಗೌ||ಅಧ್ಯಕ್ಷರಾದ ಎಂ.ಕೆ.ವೆಂಕಟಸ್ವಾಮಿ, ಅಧ್ಯಕ್ಷರಾದ ಜೆ.ಆರ್.ಅಜಯ್‍ಕುಮಾರ್, ಕೃಷಿಕ ಸಮಾಜದ ಅಧ್ಯಕ್ಷ ಹೆಚ್.ಆರ್.ತಿಮ್ಮಯ್ಯ ಜಿ.ಪಂ.ಸದಸ್ಯರಾದ ನಾಗೇಂದ್ರನಾಯ್ಕ್, ಪಾಪಣ್ಣ, ಉಮೇಶ್‍ವಿ.ವಿ.ಪುರ, ತಾ.ಪಂ.ಸದಸ್ಯ ಓಂಕಾರಪ್ಪ, ಆಲೂರು ಕಾಂತಯ್ಯ ಉಪಸ್ಥಿತರಿದ್ದರು.

                ಕಾರ್ಯಕ್ರಮದಲ್ಲಿ ಆರ್ಯ ಈಡಿಗ ಸಮಾಜದ ಮುಖಂಡರುಗಳಾದ ಹೇಮದಳ ರವೀಂದ್ರನಾಥ್, ಟಿ.ಮಲ್ಲೇಶಪ್ಪ, ಚೆನ್ನಕೇಶವ, ಆಡಿಟರ್‍ತಿಪ್ಪೇಸ್ವಾಮಿ, ಶ್ರೀನಿವಾಸ್‍ಪಿಟ್ಲಾಲಿ, ಬಬ್ಬೂರು ನಾಗರಾಜ್, ಪ್ರಕಾಶ್, ಹನುಮಂತಪ್ಪ, ಶಿವಣ್ಣ, ಜಗದೀಶ್, ನಾರಾಯಣಸ್ವಾಮಿ, ಆರ್ಯ ಈಡಿಗ ಮಹಿಳಾ ವಿಭಾಗದ ಅಧ್ಯಕ್ಷರಾದ ಮೀನಾಬಾಲರಾಜ್, ಉಮಾದೇವಿ, ಮಂಜುಳ, ನಾಗರತ್ನ, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಕೊನೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕೃಷ್ಣಮೂರ್ತಿ ವಂದನಾರ್ಪಣೆ ನೆರವೇರಿಸಿದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap