ಬೆಂಗಳೂರಿನಲ್ಲಿ ದೇವತೆಗಳ ದೇವಸ್ಥಾನಗಳೇ ಖದೀಮನ ಟಾರ್ಗೆಟ್..!
ಬೆಂಗಳೂರು : ದೇವಸ್ಥಾನಕ್ಕೆ ಭಗವಂತ ಒಳ್ಳೆಯದು ಮಾಡಪ್ಪಾ ಅಂತ ಹೋಗುತ್ತಾರೆ, ಆದರೆ ಇಲ್ಲೊಬ್ಬ ವಿಚಿತ್ರ ಖದೀಮ ದೇವಸ್ಥಾನಕ್ಕೆ ಹೋಗಿ ದೇವರ ಹತ್ತಿರಾನೇ ನಿಶ್ಕಾಮ ಭಾವದಂತೆ ನಿಂತು ಪ್ರಾರ್ಥಿಸಿಕೊಂಡು, ಯಾರು ಇಲ್ಲದೇ ಇದ್ದಾಗ, ದೇವರ ಮೇಲಿರುವ ಒಡವೆಗಳನ್ನು ಕದ್ದು ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನ ಮಾರತ್ ಹಳ್ಳಿಯಲ್ಲಿ ನಡೆದಿದೆ.
ಚಂದ್ರಶೇಖರ್ ಅಲಿಯಾಸ್ ಚಂದ್ರು ಎಂಬುವನು, ದೇವಸ್ಥಾನದಲ್ಲಿ ದೇವತೆಯರ ತಾಳಿಯನ್ನು ಕದಿಯುವುದೇ ಮುಖ್ಯ ಕೆಲಸವಾಗಿ ಮಾಡಿಕೊಂಡಿದ್ದ, ಈತನ ಕಳ್ಳತನದ ದೃಶ್ಯಗಳು ಸಿಸಿ ಟೀವಿಯಲ್ಲಿ ಸೆರೆಯಾಗಿದ್ದು, ಆತನ ವಿನಯ, ಭಕ್ತಿ ಭಾವ ಮೈಮರೆತಿದ್ದಾನೆ, ಹಾಗೇ ದೇವಸ್ಥಾನದ ಗರ್ಭಗುಡಿತ ಗೇಟ್ ತಳ್ಳಿ ಒಳಗೆ ಎಂಟ್ರಿ ಕೊಟ್ಟು, ವಿಗ್ರಹಕ್ಕೆ ಕೈ ಹಾಕಿ ಕ್ಷಣಾರ್ಧಲ್ಲಿ ಏನೋ ತೆಗೆದುಕೊಂಡು ಮುಗ್ಧನಂತೆ ಹೊರಗೆ ಹೋಗಿಬಿಡುತ್ತಾನೆ.
ದೇವರಿಗೆ ಭಕ್ತಿಯಿಂದ ಕೈ ಮುಗಿದುಕೊಂಡು ಒಳಗೆ ಹೋದವನು ದೇವರ ಚಿನ್ನದ ಸರವನ್ನೇ ಕದ್ದುಬಿಟ್ಟಿದ್ದಾನೆ. ಇದು ವಿಚಿತ್ರ ಆದರು ಸತ್ಯ. ಈ ಘಟನೆ ಬೆಂಗಳೂರಿನ ಮಾರತ್ ಹಳ್ಳಿಯಲ್ಲಿ ನಡೆದಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎಣ್ಣೆ ಕುಡಿಯುವುದಕ್ಕಾಗಿ ಕಳ್ಳತನ : ರಾಜ್ಯದಲ್ಲಿ ಸಾಮಾನ್ಯವಾಗಿ ಎಲ್ಲಾ ರೀತಿ ಕಳ್ಳರನ್ನು ನೋಡಿರುತ್ತೇವೆ, ಆದರೆ ಈ ರೀತಿ ವಿಚಿತ್ರ ಕಳ್ಳನನ್ನು ಮಾತ್ರ ನೋಡುವುದಕ್ಕೆ ಸಿಗಲ್ಲ ಅನಿಸುತ್ತದೆ ಕಳ್ಳತನ, ದರೋಡೆ ಮಾಡಿ ಜೀವನದಲ್ಲಿ ಬೇಗ ದೊಡ್ಡವರಾಗಬೇಕು ಅನ್ನುವ ಆಸೆಯಿಂದ ಸುತ್ತ ಮುತ್ತ ನಮಗೆ ತಿಳಿಯದೆ ಎಷ್ಟೋ ಜನರು ಇರುತ್ತಾರೆ. ಆದರೆ ಇಲ್ಲೊಬ್ಬ ಖತರ್ನಾಕ್ ಕಳ್ಳ ಎಣ್ಣೆ ಕುಡಿಯುವುದಕ್ಕಾಗಿ ಕಳ್ಳತನ ಮಾಡಿ ಬೆಂಗಳೂರಿನ ಮಾರತ್ ಹಳ್ಳಿ ಅತಿಥಿಯಾಗಿದ್ದಾನೆ.
ಹೆಣ್ಣು ದೇವರಷ್ಟೇ ಟಾರ್ಗೆಟ್ : ಆರೋಪಿ ಚಂದ್ರು ಹೆಣ್ಣು ದೇವತೆಗಳೆಂದರೆ ಅಪಾರ ಭಕ್ತಿ ಭಾವ, ದೇವತೆಗಳ ವಿಗ್ರಹಳ ದೇವಸ್ಥಾನಗಳಿಗೆ ಮಾತ್ರ ಹೋಗುತ್ತಿದ್ದ. ಈತನು ಬೈಯ್ಯಪ್ಪನಹಳ್ಳಿ ನಿವಾಸಿಯಾಗಿದ್ದು. ತನ್ನ ಸುತ್ತಾ ಮುತ್ತಾ ಪ್ರದೇಶಗಳಲ್ಲಿ ಎಲ್ಲಾ ಹೆಣ್ಣು ದೇವರ ದೇವಸ್ಥಾನಗಳಿಗೆ ಹೋಗಿ ಭಕ್ತಿ ಭಾವದಿಂದ ಕೈ ಮುಗಿಯುತ್ತಿದ್ದ. ಇವನ ಭಕ್ತಿ ನೋಡಿದರೆ ಕಲಿಯುಗದ ಭಕ್ತ ಕುಂಬಾರ ಎಂಬುವಷ್ಟರ ಮಟ್ಟಿಗೆ ನಂಬಬೇಕು. ಆಮೇಲೆ ದೇವರ ಮೇಲೆ ಇರುವ ಚಿನ್ನಾಭರಣ, ತಾಳಿ ಕದ್ದು ಓಡಿಹೋಗುತ್ತಿದ್ದ, ಹೀಗೆ ಕದ್ದ ಚಿನ್ನದ ಸರ ಮಾರಾಟ ಮಾಡಿ ಅದರಲ್ಲಿ ಬಂದ ಹಣಕ್ಕೆ ಕಂಠ ಪೂರ್ತಿ ಕುಡಿಯುತ್ತಿದ್ದ ಎಂಬುದು ವಿಚಾರಣೆಯಲ್ಲಿ ತಿಳಿದುಬಂದಿದೆ.
ಸಿಸಿಟಿವಿಯಲ್ಲಿ ಧೃಶ್ಯ ಸೆರೆ : ಚಂದ್ರಶೇಖರ್ ಅಲಿಯಾಸ್ ಚಂದ್ರು ಜುಲೈ 4 ರಂದು ಬೆಳಗ್ಗೆ ಮಾರತ್ ಹಳ್ಳಿಯ ಚೌಡೇಶ್ವರಿ ದೇವಸ್ಥಾನಕ್ಕೆ ಹೋಗಿದ್ದಾನೆ, ದೇವರಿಗೆ ಕೈಮುಗಿದು ನಮಸ್ಕಾರ ಮಾಡುತ್ತಾನೆ. ಅರ್ಚಕರು ಹೊರಗೆ ಹೋಗುತ್ತಿದ್ದಂತೆ ಸುತ್ತಾ ಮುತ್ತಾ ನೋಡಿ, ವಿಗ್ರಹಕ್ಕೆ ಕೈ ಹಾಕಿ ಚಿನ್ನದ ಒಡವೆಗಳನ್ನು ಕಿತ್ತುಕೊಂಡು ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಆರೋಪಿಯ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಘಟನೆ ನಡೆದ ಎರಡೇ ಗಂಟೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಹೀಗೆ ಬೇರೆ ಬೇರೆ ಸ್ಥಳಗಳಲ್ಲೂ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದ್ದು ಇನ್ನೂ ವಿಚಾರಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನಿಡಿದರು.