ರಾಣಿಬೆನ್ನೂರು:
ಸುಂದರಿ ನಗರ ಕೊಡಗಿನಲ್ಲಿ ಸಂಭವಿಸಿದ ಭೀಕರ ನೆರೆಹಾವಳಿಗೆ ತುತ್ತಾದ ಸಂತ್ರಸ್ಥರಿಗೆ ಸ್ಥಳೀಯ ಭಾರತೀಯ ವೈದ್ಯಕೀಯ ಸಂಘದ ವತಿಯಿಂದ ಅಂದಾಜು. 1.5 ಲಕ್ಷರುಗಳ ಮೊತ್ತದ ವಿವಿಧ ದಿನಬಳಿಕೆಯ ಅಡುಗೆ ಸಾಮಗ್ರಿ, ಬಟ್ಟೆ, ಪಾದ ರಕ್ಷೆ ಸೇರಿದಂತೆ ಮತ್ತಿತರ ವಸ್ತುಗಳನ್ನು ಬುಧವಾರ ಕಳುಹಿಸಿಕೊಡಲಾಯಿತು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವೈದ್ಯಕೀಯ ಸಂಘದ ಅಧ್ಯಕ್ಷೆ ವಿದ್ಯಾ ವಾಸುದೇವಮೂರ್ತಿ ಅವರು, ಕೊಡಗಿನಲ್ಲಿ ಸಾಕಷ್ಟು ಪ್ರಮಾಣದ ಹಾನಿಯುಂಟಾಗಿದೆ. ಸಂತ್ರಸ್ಥರು ದಿಕ್ಕು ತೋಚದ ಪರಸ್ಥಿತಿಯಲ್ಲಿದ್ದಾರೆ. ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಕೊಡಗಿನ ಜನರನ್ನು ರಕ್ಷಿಸುವ ಗುರಿ ನಮ್ಮ ನಿಮ್ಮೆಲ್ಲರದ್ದಾಗಬೇಕು ಎಂದರು.
ಈಗಾಗಲೇ ರಾಜ್ಯದಲ್ಲಿರುವ ಹಲವಾರು ಸಂಘ ಸಂಸ್ಥೆಗಳು, ಸಾರ್ವಜನಿಕರು, ಪ್ರಜ್ಞಾವಂತರು ಸೇರಿದಂತೆ ನೆರೆ ಹಾವಳಿಗೆ ತುತ್ತಾದ ಕೊಡುಗಿನ ಜನತೆಗೆ ಪ್ರಾಮಾಣಿಕವಾಗಿ ಹಾಗೂ ಉದಾರತೆಯ ಮನೋಭಾವನೆಯಿಂದ ಪರಿಹಾರ ನೀಡುವುದರ ಮೂಲಕ ಸಾಂತ್ವನ ಕಾರ್ಯ ಕೈಗೊಂಡಿದ್ದಾರೆ. ಇದೇ ರೀತಿ ಇನ್ನೂ ಹಲವಾರು ಸಂಘ ಸಂಸ್ಥೆಗಳು ಸುಂದರ ನಗರಿಯ ಜನತೆಗೆ ಪರಿಹಾರ ನೀಡಿ ಸಂರಕ್ಷಣೆ ಮಾಡುವಲ್ಲಿ ಮುಂದಾಗಬೇಕು ಎಂದರು.
ಸ್ಥಳೀಯ ವೈದ್ಯಕೀಯ ಸಂಘದಿಂದ ಬಟ್ಟೆ, ಸೋಪು, ಬಕೆಟ್ ಹೀಗೆ ದಿನ ಬಳಕೆ 1500ರೂಗಳ 100 ಕಿಟ್ಗಳನ್ನು ವೈದ್ಯರುಗಳಿಂದ ಸಂಗ್ರಹಿಸಲಾಗಿದ್ದು ಇನ್ನೂ ಹಂತ ಹಂತವಾಗಿ ಸಂಗ್ರಹಣೆ ಮೂಲಕ ಕಳುಹಿಸಿಕೊಡಲಾಗುವುದು ಎಂದರು.
ಡಾ.ಮನೋಜ ಸಾವುಕಾರ, ಡಾ.ಶಿವಪ್ರಕಾಶ ತಂಡಿ, ಡಾ.ರಾಜೇಶ್ವರಿ ಕದರಮಂಡಲಗಿ, ಡಾ.ಸುಷ್ಮಾ ಸಾವುಕಾರ, ಡಾ.ರವಿ ಕುಲಕರ್ಣಿ, ಡಾ.ವಿದ್ಯಾ ಕೇಲಗಾರ, ಡಾ.ವಾಸುದೇವ ಮೂರ್ತಿ, ಡಾ.ವೃಂದಾ ಕುಲಕರ್ಣಿ, ಡಾ.ಅನಿತಾ ಕೇಲಗಾರ ಸೇರಿದಂತೆ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
