ಮುಂಬೈ:
ಭಾರತದ ಪ್ರಥಮ ಮಹಿಳಾ ಐಎಎಸ್ ಅಧಿಕಾರಿ ಹೆಗ್ಗಳಿಕೆ ಪಾತ್ರವಾಗಿದ್ದ, ಅನ್ನಾ ರಾಜಮ್ ಮಲ್ಹೋತ್ರಾ (91) ಅವರು ಇಂದು(ಸೋಮವಾರ) ತಮ್ಮ ನಿವಾಸದಲ್ಲಿ ಸೋಮವಾರ ನಿಧನರಾದ್ದಾರೆ.
ಕೇರಳದ ಎರ್ನಾಕುಲಂನಲ್ಲಿ 1927ರಲ್ಲಿ ಇವರು ಜನಿಸಿದರು. ಕೋಯಿಕ್ಕೋಡ್‌ನಲ್ಲಿ ಶಾಲಾ ಶಿಕ್ಷಣ ಪೂರೈಸಿ, ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆಯುವ ಸಲುವಾಗಿ ಚೆನ್ನೈಗೆ ತೆರಳಿದರು. 1951ರಲ್ಲಿ ಮದ್ರಾಸ್ ಕೇಡರ್‌ನಲ್ಲಿ ಭಾರತೀಯ ನಾಗರಿಕ ಸೇವೆಗೆ ಸೇರ್ಪಡೆಯಾದರು.
ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ಮಲ್ಹೋತ್ರಾ ರವರು ಮುಖ್ಯಮಂತ್ರಿ ಸಿ. ರಾಜಗೋಪಾಲಾಚಾರಿ ನೇತೃತ್ವದ ಮದ್ರಾಸ್ ಸರ್ಕಾರದಲ್ಲಿ ಕೆಲಸ ಮಾಡಿದರು. ತಮಿಳುನಾಡಿನ ಏಳು ಮುಖ್ಯಮಂತ್ರಿಗಳ ಅಡಿಯಲ್ಲಿ ಕಾರ್ಯ ನಿರ್ವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ