ಬೆಂಗಳೂರು:
ಭೂಗತ ಪಾತಕಿ ರವಿ ಪೂಜಾರಿಯ ಆಪ್ತ ಸಹಚರ ಗುಲಾಂ ಎಂಬಾತನನ್ನು ಕೇಂದ್ರ ಅಪರಾಧ ದಳದ ಪೊಲೀಸರು ಮಂಗಳೂರಿನಿಂದ ಬಂಧಿಸಿದ್ದಾರೆ.
ಗುಲಾಮ್ ಎಂಬಾತ ಬಂಧಿತ ಆರೋಪಿಯಾಗಿದ್ದು, ಈತ ರವಿ ಪೂಜಾರಿ ಮಾಡುವ ಕೃತ್ಯಕ್ಕೆ, ಸುಲಿಗೆಗೆ ನೆರವು ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆತನನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು, 10 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಗುಲಾಂನ ವಿಚಾರಣೆಯಿಂದ ಪೂಜಾರಿಗೆ ಸಂಬಂಧಿಸಿದ ಇನ್ನಷ್ಟು ಮಾಹಿತಿ ಸಿಗುವ ನಿರೀಕ್ಷೆ ಇದೆ ಎಂದೂ ಸಿಸಿಬಿ ಪೊಲೀಸರು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
