ಹುಳಿಯಾರು
ರೈತರು ತಮ್ಮ ಹೊಲದ ಮಣ್ಣು ಪರೀಕ್ಷೆ ಮಾಡಿಸಿ ಅಗತ್ಯ ಲಘು ಪೋಷಕಾಂಶ ನೀಡಿದರೆ ಉತ್ತಮ ಇಳುವರಿ ಪಡೆಯಬಹುದು ಎಂದು ಕೃಷಿ ಸಹಾಯಕ ನಿರ್ದೇಶಕ ಕೆ.ಟಿ.ತಿಪ್ಪೇಸ್ವಾಮಿ ತಿಳಿಸಿದರು.
ಸೋಮನಹಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಸಿರಿಧಾನ್ಯ ಬೆಳೆಗಳ ಅಭಿವೃದ್ಧಿ ಯೋಜನೆಯಡಿ ನವಣೆ ಪ್ರಾತ್ಯಕ್ಷಿಕೆ ರೈತರಿಗೆ ಸಾವಯವ ಗೊಬ್ಬರ ಮತ್ತು ಲಘು ಪೋಷಕಾಂಶಗಳನ್ನು ವಿತರಿಸಿ ಮಾತನಾಡಿದರು.
ಹೆಚ್ಚು ರಾಸಾಯನಿಕ ಬಳಸದೆ ಸಾವಯವ ಗೊಬ್ಬರದ ಜತೆ ಸತುವಿನ ಸಲ್ಫೆಟ್ ಸೇರಿದಂತೆ ಇತರ ಲಘು ಪೋಷಕಾಂಶಗಳನ್ನು ನೀಡಬೇಕು. ಇದರಿಂದ ಭೂಮಿಯ ಫಲವತ್ತತೆ ಹೆಚ್ಚಾಗಿ ಉತ್ತಮ ಫಸಲು ಲಭಿಸುತ್ತದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಣ್ಣ, ಗೀತಾಬಾಯಿ, ರೈತರಾದ ಆರ್.ಜೆ.ವಿರೂಪಾಕ್ಷಯ್ಯ, ಬಸವರಾಜು, ರಾಜಾನಾಯ್ಕ, ರಾಮಾನಾಯ್ಕ, ಆನಂದಪ್ಪ, ತಿಪ್ಪೇಸ್ವಾಮಿ, ಆರ್.ಎಂ.ಸ್ವಾಮಿ, ಅನುವುಗಾರರಾದ ಬಸವರಾಜು, ಮಂಜುನಾಥ್ ಇದ್ದರು.