“ಭೌದ್ದಿಕ ಆಸ್ತಿ ಹಕ್ಕುಗಳು”

ದಾವಣಗೆರೆ

            ಜಿ.ಎಂ.ಐ.ಟಿಯಲ್ಲಿ“ಭೌದ್ದಿಕ ಆಸ್ತಿ ಹಕ್ಕುಗಳು” ಎಂಬ ವಿಷಯದ ಬಗ್ಗೆ ಎರಡು ದಿನದ ಕಾರ್ಯಾಗಾರದ ಉದ್ಘಾಟಿಸಲಾಯಿತು . ಯಾಂತ್ರಿಕ ವಿಭಾಗದ ಸಹಯೋಗದಿಂದ ಈ ಕಾರ್ಯಾಗಾರ ನಡೆಯುತ್ತಿದ್ದು ದಾವಣಗೆರೆ ಕೇಂದ್ರದ ಪ್ರಾಯೋಜನೆ ಪಡೆಯಲಾಗಿದೆ. ಮೊದಲಿಗೆಡಾ. ಶ್ರೀನಿವಾಸ ಸಿ ವಿ ಇವರುಕಾರ್ಯಾಗಾರದ ಬಗ್ಗೆ ನಿರೂಪಿಸಿದರು.

             ಸಮಾರಂಭದ ಮುಖ್ಯಅತಿಥಿಯಾಗಿ ಸನ್ಮಾನ್ಯ ಜಸ್ಟೀಸ್ ಡಾ. ಎನ್. ಕುಮಾರ್, ಮಾನವ ಹಕ್ಕುಗಳ ಅಯೋಗದಛೇರ್  ಪ್ರೊಫೆಸರ್‍ರವರು ಭಾಗವಹಿಸಿದ್ದರು, ಮುಖ್ಯಅತಿಥಿ ಜಸ್ಟೀಸ್ ಡಾ. ಎನ್. ಕುಮಾರ್‍ರವರುತಮ್ಮ ಭಾಷಣದಲ್ಲಿಅಮೇರಿಕಾ ಮತ್ತುಚೀನಾದಂಥಹ ದೇಶಗಳ ಆರ್ಥಿಕ ಸಾಮಥ್ರ್ಯದೊಡನೆ ಸ್ಪರ್ದಿಸಲು ಸಾಮಥ್ರ್ಯಇದ್ದರೂ ನಮ್ಮಲ್ಲಿರುವ ಕೀಳರಿಮೆಯಿಂದ ಅದು ಸಾಧ್ಯವಾಗುತ್ತಿಲ್ಲ. ದೇಶದ ಶೇ. 60%ರಷ್ಟುಜನಯುವಕರುಇರುವುದೇ ನಮ್ಮ ಪಾಲಿಗೆ ಒಂದುದೊಡ್ಡ ಆಸ್ತಿಯಾಗಿದ್ದು ಯುವಜನರು ಕೀಳರಿಮೆ ಬಿಟ್ಟುತಮ್ಮ ಬುದ್ದಿ ಬಳಸಿ ಆರ್ಥಿಕ ಸಮರದ ಸವಾಲೆಸೆದುವಿಶ್ವವನ್ನುಗೆಲ್ಲಲು ಪ್ರಯತ್ನಿಸಬೇಕು ಹಾಗೂ ಭಾರತದೇಶದ ಹಿಂದಿನ ವೈಭವ ಮರು ಪಡೆಯಲು ಹೋರಾಡಬೇಕುಎಂದುಕಾರ್ಯಾಗಾರದ ಅಭ್ಯರ್ಥಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಭೌದ್ದಿಕ ಆಸ್ತಿ ಬೇರೊಬ್ಬರು ನಕಲು ಮಾಡಿದರೆಅದು ಬುದ್ದಿಯ ಕಳ್ಳತನ ಎಂದಅವರು ಭೌದ್ದಿಕ ಆಸ್ತಿ 4ನೇ ಪಿಳಿಗೆಯ ಹಕ್ಕು ಎಂದು ಬಣ್ಣಿಸಿದರು.

             ಕಾರ್ಯಾಗಾರದಗೌರವಾರ್ಥಅತಿಥಿಯಾಗಿ ಆಗಮಿಸಿದ್ದ ಡಾ. ಎಸ್.ಜಿ. ಶ್ರೀಕಂಠೇಶ್ವರಸ್ವಾಮಿ, ಕಾರ್ಯಾನಿರ್ವಾಹಕ ಕಾರ್ಯದರ್ಶಿ, ಬೆಂಗಳೂರು  ಯೋಜನೆಗಳ ಬಗ್ಗೆ ವಿವರಿಸಿದರು. ಈ ಹಿಂದೆಎನರ್ಜಿಗೆ ಸಂಬಂದಪಟ್ಟಂತೆ ಹಲವಾರು ಯೋಜನೆಗಳು ನಡೆಯುತ್ತಿದ್ದುಇತ್ತೀಚೆಗೆ ಬಯೋಫ್ಯೂಯಲ್, ಎಲೆಕ್ಟ್ರಾನಿಕ್ ವೇಸ್ಟ್ ಮತ್ತು ಮುನಿಸಿಪಲ್ ವೇಸ್ಟ್‍ನಂಥಇನ್ನೂ ಅನೇಕ ಪ್ರಾಜೆಕ್ಟಗಳಿಗೆ(ಯೋಜನೆ) ಧನಸಹಾಯದೊಂದಿಗೆ ಸಂಶೋಧನೆಯನ್ನುಉತ್ತೇಜಿಸುತ್ತಿದೆ. ನಮ್ಮ ಸಂಸ್ಥೆಯಲ್ಲಿIPಖ ಸೆಲ್‍ಇದ್ದುಇದರ ಸದುಪಯೋಗ ಪಡೆಯಲು ಅಭ್ಯರ್ಥಿಗಳಿಗೆ ಕರೆಕೊಟ್ಟರು.

             ಸಂಸದರಾದ ಶ್ರೀ ಜಿ.ಎಂ. ಸಿದ್ದೇಶ್ವರವರು ವಿದ್ಯಾರ್ಥಿಗಳನ್ನು ಕುರಿತುಕಾರ್ಯಾಗಾರದ ಸದುಪಯೋಗ ಪಡೆಯಲು ಸೂಚಿಸಿದರು.ಪ್ರಾಜೆಕ್ಟಗಳನ್ನು ಸಲ್ಲಿಸಲು ಹೆಚ್ಚು ಹೆಚ್ಚಾಗಿ ಅವಿಸ್ಕಾರಗಳನ್ನು, ಕಂಡು ಹಿಡಿದು ಪೇಟೆಂಟ್‍ಗಳನ್ನು ಪಡೆಯಲುಕರೆನೀಡಿದರು.

              ಕಾಲೇಜಿನ ಗೌರ್ನಿಂಗ್‍ಕೌನ್ಸಿಲ್ ಸದಸ್ಯರಾದ ಡಾ. ದಿವ್ಯಾನಂದ ರವರು ಕಾರ್ಯಾಗಾರದಲ್ಲಿ ಪ್ರಸ್ತುತಪಡುವ ವಿಷಯಗಳಿಂದ ತಮ್ಮ ಸಂಶೋಧನೆಗಳಿಗೆ ಮತ್ತುತಮ್ಮ ಪಠ್ಯ ಚಟುವಟಿಕೆಗಳ ಸದುಪಯೋಗ ಪಡೆದುಕೊಳ್ಳಲು ಸಲಹೆ ನೀಡಿದರು. ಅಂತಿಮವಾಗಿ ಸಮಾರಂಭದ ಅಧ್ಯಕ್ಷತೆಯ ವಹಿಸಿದ್ದ ಪ್ರಾಚಾರ್ಯರಾದ ಡಾ. ಪಿ. ಪ್ರಕಾಶ್‍ ರವರು ದಾವಣಗೆರೆಯಲ್ಲಿ ಇರುವುದು ಜಿ.ಎಂ.ಐ.ಟಿಒಂದು ಏಕೈಕ ಸಂಸ್ಥೆ ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಮತ್ತು ಕಾರ್ಯಾಗಾರದಲ್ಲಿ ಪ್ರಸ್ತುತ ಪಡಿಸುವ ವಿಷಯಗಳನ್ನು ಅವಲೋಕಿಸಿ ತಮ್ಮ ಪಠ್ಯಚಟುವಟಿಕೆ ಮತ್ತು ಸಂಶೋಧನಾಕಾರ್ಯಾದಲ್ಲಿ ಬಳಸಿಕೊಳ್ಳಲು ಕರೆ ನೀಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link