ಕುಣಿಗಲ್
ಇಂದು ಭ್ರಷ್ಟಾಚಾರ ತಾಂಡವವಾಡುತ್ತಿದ್ದು ಇಂತಹ ಭ್ರಷ್ಟಾಚಾರ ತಡೆಗಟ್ಟಲು ಸಾರ್ವನಿಕರು ಎಚ್ಚತ್ತಿಕೊಳ್ಳುವ ಮೂಲಕ ಜನರಲ್ಲಿ ಸಂಘ-ಸಂಸ್ಥೆಗಳು ಜಾಗೃತಿ,ಅರಿವನ್ನ ಉಂಟು ಮಾಡುವುದು ಸೂಕ್ತ ಎಂದು ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್‍ಪಿ ರಘುಕುಮಾರ್ ತಿಳಿಸಿದರು.
ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಭ್ರಷ್ಟಾಚಾರ ನಿಗ್ರಹ ದಳವೂ ಸಾರ್ವಜನಿಕರಿಂದ ದೂರು ದುಮ್ಮಾನಗಳನ್ನ ಸ್ವೀಕರಿಸಿ ಮಾತನಾಡುತ್ತಾ,ಸರ್ಕಾರಿ ನೌಕರರು ಸಾರ್ವಜನಿಕರಿಗೆ ಯಾವುದೇ ಕೆಲಸವನ್ನ ಮಾಡಲು ವಿನಾಕಾರಣ ವಿಳಂಬ ಮಾಡದೇ ಉದ್ದೇಶಪೂರ್ವಕವಾಗಿ ಕೆಲಸ ಮಾಡಿಕೊಡದೇ ಹಣಕ್ಕಾಗಿ ಬೇಡಿಕೆ ಇಡುವುದು ಮಹಾ ಅಪರಾಧವಾಗಿದ್ದು,ಸಾರ್ವಜನಿಕರಿಗೆ ಸಂಘ-ಸಂಸ್ಥೇಗಳು ಈ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವಂತಹ ಕೆಲಸಗಳನ್ನ ಹಳ್ಳಿ-ಹಳ್ಳಿಯಲ್ಲೂ ಹಮ್ಮಿಕೊಳ್ಳಬೇಕಾಗಿದ್ದು,ಮುಂದಿನ ದಿನಗಳಲ್ಲಿ ಪ್ರತಿ ಹೋಬಳಿ ಮ್ಟ್ಟದಲ್ಲಿ ಸಾರ್ವಜನಿಕರಿಂದ ದೂರುಗಳನ್ನ ಸ್ವೀಕರಿಸುವಂತಹ ವ್ಯವಸ್ಥೆಯನ್ನ ಕೈಗೊಳ್ಳಲಾಗುವುದು.ಈ ಬಗ್ಗೆ ನೇರವಾಗಿ ದೂರು ಸಲ್ಲಿಸಿ ತಮ್ಮ ಸಮಸ್ಯೆಗಳನ್ನ ಬಗೆಹರಿಸಿಕೊಳ್ಳಲು ಜನತೆ ಮುಂದಾಗಬೇಕಾಗಿದೆ ಎಂದು ತಿಳಿಸಿದರು.
ಬಿಳಿದೇವಾಲಯ ಹರಿಜನ ಸ್ಮಶಾನದ ಅಭಿವೃದ್ಧಿಗೆ 5 ಲಕ್ಷ ರೂಪಾಯಿ ಹಣ ಬಿಡುಗಡೆಗೊಂಡಿದ್ದರೂ ಯಾವುದೇ ಅಭಿವೃಧ್ಧಿ ಕಾರ್ಯ ಕೈಗೊಳ್ಳದೇ ಇರುವ ಬಗ್ಗೆ ಗ್ರಾಮದ ಪ್ರವೀಣ್ ಎಸಿಬಿಗೆ ದೂರು ಸಲ್ಲಿಸಿದರು.ಪುರಸಭೆಯು ಕಳೆದ ಹಲವಾರು ದಿನಗಳಿಂದ ಖಾತೆ ಮಾಡಿಲ್ಲ ಎಂದು ವ್ಯಕ್ತಿಯೊಬ್ಬರೂ ದೂರು ನೀಡಿದರು.ಕುಡಿಯುವ ನೀರು ,ಆಸ್ಪತ್ರೆ ಸ್ವಚ್ಛತೆ ಸೇರಿದಂತೆ ಎಲ್ಲಾ ಸರ್ಕಾರಿ ಕಛೇರಿಗಳ ಮುಂಭಾಗದಲ್ಲಿ ಭ್ರಷ್ಟಾಚಾರ ನಿಗ್ರಹದಳದ ನಾಮಫಲಕಗಳನ್ನ ಅಳವಡಿಸುವಂತೆ ನೌಕರರಿಗೆ ತಾಕೀತು ಮಾಡಿದರು.ಈ ಸಂದರ್ಭದಲ್ಲಿ ಜಿಲ್ಲಾ ವೃತ್ತ ನಿರೀಕ್ಷಕ ಹಾಲಪ್ಪ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ