ಮಂಡ್ಯದಲ್ಲಿ ಸ್ಥಾಪನೆಯಾಯಿತು ‘ಆ್ಯಪಲ್ ಲ್ಯಾಬ್’

ಮಂಡ್ಯ: 

     ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ರಾಜ್ಯದಲ್ಲೇ ಮೊಟ್ಟಮೊದಲ ‘ಆ್ಯಪಲ್ ಲ್ಯಾಬ್’ (ಆ್ಯಪಲ್ ಕಂಪ್ಯೂಟರ್ ಪ್ರಯೋಗಾಲಯ) ಸ್ಥಾಪನೆಯಾಗಿದ್ದು, ಅದರ ಉದ್ಘಾಟನೆಯೂ ಆಗಿದೆ. 35 ಲಕ್ಷ ರೂ. ವೆಚ್ಚದಲ್ಲಿ ಅತ್ಯಾಧುನಿಕ ಲ್ಯಾಬ್ ಅನ್ನು ಸ್ಥಾಪಿಸಲಾಗಿದೆ.

    ವಿಶ್ವವಿದ್ಯಾಲಯದ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಲ್ಯಾಬ್‌ನಲ್ಲಿ ಆ್ಯಪಲ್ ಸಾಫ್ಟ್‌ವೇರ್ ಪ್ರೋಗ್ರಾಂ ತರಬೇತಿ ಪಡೆಯಲಿದ್ದಾರೆ. ಇದರಿಂದ ವಿಶ್ವದ ವಿವಿಧೆಡೆ ಉದ್ಯೋ ಗ ಪಡೆಯುವ ಅವಕಾಶವನ್ನು ಕಲ್ಪಿಸಲಾಗಿದೆ.

    ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಆ್ಯಪಲ್ ತಾಂತ್ರಿಕ ಜ್ಞಾನವನ್ನು ನೀಡುತ್ತದೆ. ಇದನ್ನು ಅಮೆರಿಕನ್ ಕಂಪನಿ ಕೂಪರ್‌ಟಿನೋ ಪ್ರಮಾಣೀಕರಿಸಿದೆ. ಕಲೆ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿಯೂ ಉದ್ಯೋಗಾವಕಾಶಗಳನ್ನು ಪಡೆಯಬಹುದಾಗಿದೆ.

   ಕಂಪನಿಯ ತರಬೇತುದಾರರು ಪ್ರತಿ ವಾರ ಎರಡರಿಂದ ಮೂರು ದಿನಗಳ ಕಾಲ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದ್ದಾರೆ. ಸದ್ಯ, ಲ್ಯಾಬ್‌ 20 ಕಂಪ್ಯೂಟರ್ ಸಿಸ್ಟಮ್‌ಗಳನ್ನು ಹೊಂದಿದ್ದು, ಪ್ರತಿ ಬ್ಯಾಚ್‌ನಲ್ಲಿ ಸುಮಾರು 40 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. 

     ಮಂಡ್ಯ ವಿವಿ ಉಪಕುಲಪತಿ ಪುಟ್ಟರಾಜು ಮಾತನಾಡಿ, ಆ್ಯಪಲ್ ಇಂಕ್ ನೀಡಿರುವ ಪ್ರಮಾಣ ಪತ್ರಕ್ಕೆ ಹೆಚ್ಚಿನ ಮೌಲ್ಯವಿದೆ. ಇಂಜಿನಿಯರಿಂಗ್ ಪದವಿಗಿಂತಲೂ ಹೆಚ್ಚು ಬೆಲೆಯಿದೆ. ಇದು ವಿದ್ಯಾರ್ಥಿಗಳಿಗೆ ಪ್ರಪಂಚದಾದ್ಯಂತದ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗಗಳನ್ನು ಪಡೆಯಲು ಅವಕಾಶವನ್ನು ಒದಗಿಸುತ್ತದೆ ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap