ಮೈಸೂರು:
5 ದಿನಗಳ ಹಿಂದೆಯಷ್ಟೇ ಬಸ್ ದುರಂತ ನಡೆದ ಕನಗನಮರಡಿ ದುರ್ಘಟನೆ ಮಾಸುವ ಮುನ್ನವೇ ವಿ.ಸಿ. ನಾಲೆ ಸಮೀಪ ಇನ್ನೊಂದು ಅಪಘಾತವಾಗಿದೆ.
ಶನಿವಾರವಷ್ಟೇ (ನ.30) ಇದೇ ನಾಲೆಗೆ ಬಸ್ಸೊಂದು ಉರುಳಿ ಬಿದ್ದು 30 ಜನ ಸಾವನ್ನಪ್ಪಿದ್ದು, ಈಗ ಅದೇ ವಿ.ಸಿ.ನಾಲೆ ಸಮೀಪ ಇನ್ನೊಂದು ಅಪಘಾತವಾಗಿದೆ. ನಾಲೆ ಸಮೀಪ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಕಾರಿನಲ್ಲಿದ್ದ ಚಾಲಕ ಸೇರಿ ಮೂವರು ವೈದ್ಯರು ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಬಸ್ ದುರಂತ ನಡೆದ ಸ್ಥಳದಲ್ಲೇ ಈ ಅವಘಡ ಸಂಭವಿಸಿದ್ದಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಈ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪಕರಣ ದಾಖಲಾಗಿದೆ.
ಘಟನೆಯ ವಿವರ:
ಘಟನೆ ನಡೆದ ಸ್ಥಳ ವೀಕ್ಷಣೆಗೆ ಕಾರು ನಿಲ್ಲಿಸುವ ವೇಳೆ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ ಹೊಡೆದು ಮಗುಚಿ ಬಿದ್ದಿದೆ. ಅದೃಷ್ಟವಶಾತ್ ಕಾರಿನ ಚಾಲಕ, ವೈದ್ಯ ಸೇರಿ ಮೂರು ಜನ ಪಾರಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
