ಚಿತ್ರದುರ್ಗ:
ಮಕ್ಕಳಲ್ಲಿನ ಸುಪ್ತ ಪ್ರತಿಭೆಗಳನ್ನು ಗುರುತಿಸಲು ಮಾಧ್ಯಮಗಳು ಸಹಕಾರಿಯಾಗಿವೆ. ಮಕ್ಕಳಲ್ಲಿ ಸಾಂಸ್ಕೃತಿಕ ಮನೋಭಾವ ಬೆಳೆದಂತೆ ಏಕಾಗ್ರತೆ, ಶಿಸ್ತು ಮೂಡುತ್ತದೆ ಎಂದು ಚಿತ್ರದುರ್ಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಎಂ.ವೀರೇಶ್ ತಿಳಿಸಿದರು.
ನಗರದ ಪಿಳ್ಳೆಕೆರೇನಹಳ್ಳಿಯ ಬಾಪೂಜಿ ಸಮೂಹ ಸಂಸ್ಥೆಯ ಬಾಪೂಜಿ ಸಭಾಂಗಣದಲ್ಲಿ ಸೆ.18 ರಿಂದ ಸೆ.23 ರವರೆಗೆ ಸ್ಟಾರ್ ಸುವರ್ಣ ಚಾನಲ್ ನಡೆಸುತ್ತಿರುವ ಪುಟಾಣಿಪಂಟ್ರು ಸೀಜನ್ 03 ಆಡಿಷನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪಠ್ಯಕ್ರಮಕ್ಕೆ ಪೂರಕವಾಗಿ ಮಕ್ಕಳಲ್ಲಿ ನಾಟಕ, ನೃತ್ಯ, ಸಂಗೀತ ಮೊದಲಾದ ಸಾಂಸ್ಕೃತಿಕ ಚಟುವಟಿಕೆಗಳು ಇರಬೇಕು. ಇದರಿಂದ ಪೋಷಕರು ಮಕ್ಕಳಿಗೆ ಸದಾ ಕ್ರಿಯಾಶೀಲ ಕಲಾ ಶ್ರೀಮಂತಿಕೆಯ ಮನೋಭಾವವನ್ನು ಬಿತ್ತಬೇಕು ಎಂದರು.
ನಗರಸಭೆ ಸದಸ್ಯೆ ಶ್ಯಾಮಲಾಶಿವಪ್ರಕಾಶ್ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸ್ಥಳೀಯ ಮಕ್ಕಳು ತಮ್ಮ ಪ್ರತಿಭೆಗಳನ್ನು ವ್ಯಕ್ತಪಡಿಸಲು ಮುಂದಾಗುವಂತೆ ಮನಸ್ಸು ಮಾಡಬೇಕು ಎಂದರು.
ಬಾಪೂಜಿ ದೂರಶಿಕ್ಷಣ ಕೇಂದ್ರದ ಸಂಯೋಜಕ ಪ್ರೊ.ಎ.ಎಂ.ರುದ್ರಪ್ಪ, ರಂಗನಿರ್ದೆಶಕ ಕೆ.ಪಿ.ಎಂ. ಗಣೇಶಯ್ಯ, ಬಾಪೂಜಿ ಸಮೂಹ ಸಂಸ್ಥೆ ನಿರ್ದೇಶಕ ಕೆ.ಎಂ.ಚೇತನ್, ಮುಖ್ಯಶಿಕ್ಷಕಿ ಸುಧಾ, ಯುವ ರಂಗನಿರ್ದೇಶಕ ಆರ್.ಧೀಮಂತ್, ರಂಗಕಲಾವಿದ ಮಂಜುನಾಥ, ಸ್ಟಾರ್‍ಸುವರ್ಣ ಪುಟಾಣಿ ಪಂಟ್ರು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಪುನೀತ್, ಶ್ರೀರಂಗ, ರವಿ, ಮಂಜು, ಶೈಲೇಶ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ