ತಿಪಟೂರು :
ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಲಯದ ವತಿಯಿಂದ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಪ್ರತಿಭಾಕಾರಂಜಿ ಮತ್ತು ಕಲೋತ್ಸವ 2018-19ರ ಕಾರ್ಯಕಮದ ಪ್ರಸ್ತಾವಿಕ ನುಡಿಯನ್ನಾಡುತ್ತಾ ಮಕ್ಕಳಲ್ಲಿರುವ ಸ್ತುಪ್ತಪ್ರತಿಭೆಯನ್ನು ಗುರುತಿಸಿ ಅದನ್ನು ಹೊರತರುವ ವೇದಿಕೆಯೇ ಈ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವಗಳು ಎಂದರು.
ತಾಲ್ಲೂಕು ದಂಡಾಧಿಕಾರಿಗಳಾದ ಡಾ. ಮಂಜುನಾಥ್ ಮಾತನಾಡುತ್ತಾ ಭಾರತದಲ್ಲಿರುವ ಜನಸಂಖ್ಯೆಯಲ್ಲಿ ಪ್ರತಿಭೆಗಳಿಗೇನು ಕೊರತೆಯಿಲ್ಲ. ಆದರೆ ತಮ್ಮ ಪ್ರತಿಭೆಯನ್ನು ಹೊರಹಾಕಲು ಮಕ್ಕಳು ಭಯಪಡುತ್ತಾರೆ. ಆದರೆ ಮಕ್ಕಳಲ್ಲಿನ ವೇದಿಕೆಯ ಭಯವನ್ನು ಹೋಗಲಾಡಿಸಲು ಶಿಕ್ಷಣ ಇಲಾಖೆಯ ಈ ಪ್ರತಿಭಾಕಾರಂಜಿ ಮತ್ತು ಕ್ರೀಡಾಕೂಟಗಳು ಸಹಕಾರಿಯಾಗಿವೆ. ಇಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಮುಕ್ಕಳು ಮಂದೆ ಭಾರತದ ನಿರ್ಮಾತೃಗಳಾಗುತ್ತಾರೆಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾ.ಪಂ ಅಧ್ಯಕ್ಷರಾದ ಎನ್.ಎಂ.ಸುರೇಶ್ ರವರು ಇಂದು ಶಾಲೆಯ ಎಲ್ಲಾ ಮಕ್ಕಳು ತಮ್ಮ ಪ್ರತಿಬೆಯನ್ನು ಹೊರಹಾಕಲು ಪ್ರತಿಭಾ ಕಾರಂಜಿಯೂ ಸೂಕ್ತವೇದಿಕೆಯಾಗಿದೆ. ಈ ವೇದಿಕೆಯನ್ನು ಉಪಯೋಗಿಸಿಕೊಂಡು ಮುಂದೆ ಉತ್ತಮ ಕಲಾವಿದರು, ವಿಜ್ಞಾನಿಗಳು, ಶಿಲ್ಪಿಗಳು ಮತ್ತು ಕಲಾಕಾರರುಗಳಾಗಬಹುದು ಇದನ್ನು ಬಳಸಿಕೊಳ್ಳು ಶಿಕ್ಷಕರು ಉತ್ತಮವನ್ನು ಮಾರ್ಗದರ್ಶನ ನೀಡುತ್ತಿದ್ದು ಇದನ್ನು ಬಳಸಿಕೊಳ್ಳಲು ಮಕ್ಕಳು ಮತ್ತು ಪೋಷಕರಿಗೆ ಕರೆಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿದ್ದ ಶಾಸಕ ಬಿ.ಸಿ.ನಾಗೇಶ್‍ರವರು ಇಂದು ಮಕ್ಕಳು ವಿಶೇಷವಾದ ವೇಷಭೂಷಣಗಳನ್ನು ತೊಟ್ಟು ಲವಲವಿಕೆಯಿಂದ ಸಂಭ್ರಮಿಸುತ್ತಿದ್ದಾರೆ ಅವರು ಲವಲವಿಕೆಯಿಂದ ಇರುವಂತಹ ಪ್ರತಿಭಾ ಕಾರಂಜಿಯು ಮಕ್ಕಳಲ್ಲಿ ಇನಷ್ಟು ಆಸಕ್ತಿಯನ್ನು ಉಂಟುಮಾಡುವ ಕಾರ್ಯಕ್ರಮವೇ ಪ್ರತಿಭಾ ಕಾರಂಜಿ. ಇಂದು ತಮ್ಮ ಕ್ಲಸ್ಟರ್ ಹಂತವನ್ನು ದಾಟಿ ತಾಲ್ಲೂಕು ಮಟ್ಟಕ್ಕೆ ಬಂದಿದ್ದೀರಿ ಮುಂದೆ ನಿಮ್ಮ ಸಾಧನೆಯು ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿದಿಸಿ ನಿಮ್ಮ ತಂದೆ-ತಾಯಿಗಳಿಗೆ, ಶಿಕ್ಷಕರಿಗೆ, ನಾಡಿಗೆ ಮತ್ತು ರಾಷ್ಟ್ರಕ್ಕೆ ಹೆಸರನ್ನು ತರುವಂತಾಗಿ ಎಂದು ಆಶಿಸಿದರು.
ಕಾರ್ಯಕ್ರಮವನ್ನು ನಗರಸಭೆಯ ಅಧ್ಯಕ್ಷರಾದ ಟಿ.ಎನ್ ಪ್ರಕಾಶ್‍ರವರು ಡೋಲುಬಾರಿಸುವ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ತಾಲ್ಲೂಕು ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಷಡಕ್ಷರಿ, ಜಿ.ಜಿ.ಸಿ.ಸಿ ಪ್ರಾಂಶುಪಾಲರಾದ ನಾಗೇಂದ್ರಪ್ಪ, ಜಿ.ಜಿ.ಜೆ.ಸಿ.ಉಪಪ್ರಾಂಶುಪಾಲರಾದ ಸಿದ್ದರಾಜು, ಪ್ರಾ.ಶಾ.ಮು.ಶಿ.ಸಂ ಅಧ್ಯಕ್ಷರಾದ, ಸಿದ್ದಯ್ಯ, ಕಾ.ರಾ,ಸ.ನೌ ಸಂಘದ ಅಧ್ಯಕ್ಷರಾದ ಹೆಚ್.ಇ.ರಮೇಶ್, ತಾ.ಪ್ರೌ.ಶಾ.ಶಿ ಸಂಘದ ಅಧ್ಯಕ್ಷರಾದ ಎಸ್.ಸಿ.ಸುರೇಶ್, ತಾ.ಪ್ರಾ.ಶಾ.ಶಿ. ಸಂಘದ ಅಧ್ಯಕ್ಷರಾದ ಹೆಚ್.ಆರ್.ಉಮೇಶ್, ಎಲ್ಲಾ ಸಿ.ಆರ್.ಪಿ.ಗಳು, ಶಿಕ್ಷಕರುಗಳು ಉಪಸ್ಥಿತರಿದ್ದರು. ಕು.ಮುಕ್ತಾ ಸಂಗಡಿಗರು ಪ್ರಾರ್ಥನೆಯನ್ನು ಮತ್ತು ನಾಡಗೀತೆಯನ್ನು ಹಾಡಿದರು, ವಿ.ಮಂಜುನಾಥ್ ಎಲ್ಲರನ್ನು ಸ್ವಾಗತಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
