ಮಡಿವಾಳ ಬಾಂಬ್ ಸ್ಫೋಟದ ಆರೋಪಿ ಬಂಧನ

ಬೆಂಗಳೂರು: 

  ಬರೋಬರಿ ಹತ್ತು ವರ್ಷಗಳ ಬಳಿಕ ಮಡಿವಾಳ ಬಾಂಬ್ ಸ್ಫೋಟ ಪ್ರಕರಣದ ಆರೋಪಿಯನ್ನ ಬಂಧಿಸಿದ್ದ ಸಿಸಿಬಿ ಪೊಲೀಸರು ಆರೋಪಿಯನ್ನು ಕೇರಳಕ್ಕೆ ಕರೆದುಕೊಂಡು ಹೋಗಿ ಮತ್ತೆ ವಾಪಸ್ ಕರೆತಂದು ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.

  ಆರೋಪಿ ಸಲೀಂನನ್ನು ಕೇರಳಕ್ಕೆ ಕರೆದುಕೊಂಡು ಹೋದ ಸಿಸಿಬಿ   ಪೊಲೀಸರು, ಕೇರಳದಲ್ಲಿ ಬಾಂಬ್ ಸ್ಫೋಟಕ್ಕೆ ಬೇಕಾದ ಕಚ್ಚಾ ಬಾಂಬ್ ಎಲ್ಲಿ ಸಿಕ್ಕಿತ್ತು ಎಂಬುದರ ಬಗ್ಗೆ ಸಲೀಂ ಮಹಜರುಪಡಿಸಿ ಹಲವಾರು ಮಹತ್ವರ ಮಾಹಿತಿ ಪಡೆದಿದ್ದಾರೆ.

  ಕೇರಳದಿಂದ ಆರೋಪಿ ಸಲೀಂನನ್ನು ಬೆಂಗಳೂರಿಗೆ ಕರೆತಂದು ಪೊಲೀಸರು ವಶದಲ್ಲಿಟ್ಟುಕೊಂಡಿದ್ದಾರೆ. ಇದೇ ತಿಂಗಳ 25ಕ್ಕೆ 14 ದಿನಗಳ ಕಸ್ಟಡಿ ಅಂತ್ಯವಾಗಲಿದೆ ಎಂದು ಸಿಸಿಬಿ ಉನ್ನತ ಮೂಲಗಳು ತಿಳಿಸಿವೆ. ಪ್ರಕರಣದಲ್ಲಿ ಹಲವಾರು ಜನರ ಕೈವಾಡ ಇರುವ ಶಂಕೆ ವ್ಯಕ್ತವಾಗುತ್ತಿದ್ದು, ತನಿಖೆ ಮುಂದುವರೆದಿದೆ.

  2008 ನಗರದ ಮಡಿವಾಳ, ಚಿನ್ನಸ್ವಾಮಿ ಸ್ಟೇಡಿಯಂ ಸೇರಿದಂತೆ ನಗರದಲ್ಲಿ ಹಲವು ಕಡೆ ಸರಣಿ ಬಾಂಬ್ ಇಡಲಾಗಿತ್ತು. ಮಡಿವಾಳ ಬಳಿ ಒರ್ವ ಮಹಿಳೆ ಮೃತಪಟ್ಟರೆ, ಹಲವಾರು ಮಂದಿ ಗಾಯಗೊಂಡಿದ್ದರು.

Recent Articles

spot_img

Related Stories

Share via
Copy link