ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಂತ ಗಣ್ಯರು…!

ಹಾಸನ

   ಕರ್ನಾಟಕದಲ್ಲಿ 2024ರ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆಯುತ್ತಿದೆ. ಈಗಾಗಲೇ ಅನೇಕರು ಮತದಾನ ಮಾಡಿದ್ದು, ಸಿನಿಮಾ ನಟರು, ರಾಜಕೀಯ ಗಣ್ಯರು ಬೆಳ್ಳಂಬೆಳಗ್ಗೆ ಮತ ಚಲಾಯಿಸಿದ್ದಾರೆ.

   ಹಾಸನ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಏಕಾಂಗಿಯಾಗಿ ಬಂದು ಮತದಾನ ಮಾಡಿದ್ದಾರೆ. ಈ ಹಿಂದೆಯೇ ಶುಕ್ರವಾರ 8 ಗಂಟೆಗೆ ಮತದಾನ ಮಾಡಲಿದ್ದೇನೆ ಎಂದು ಹೇಳಿದ್ದ ಪ್ರಜ್ವಲ್‌ ರೇವಣ್ಣ, ಬೆಳ್ಳಂಬೆಳಗ್ಗೆ ಹರದನಹಳ್ಳಿ ಗ್ರಾಮದಲ್ಲಿರುವ ದೇವೇಶ್ವರ ದೇವಾಲಯಕ್ಕೆ ತೆರಳಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಬಳಿಕ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಪಡುವಲಹಿಪ್ಪೆಯ ಮತಗಟ್ಟೆಗೆ ಏಕಾಂಗಿಯಾಗಿ ಬಂದು ಪ್ರಜ್ವಲ್‌ ರೇವಣ್ಣ ಮತದಾನ ಚಲಾಯಿಸಿದ್ದಾರೆ. ಪ್ರತಿ ಬಾರಿಯೂ ಕುಟಂಬ ಸಮೇತರಾಗಿ ಬಂದು ಮತದಾನ ಮಾಡುತ್ತಿದ್ದ ಪ್ರಜ್ವಲ್ ರೇವಣ್ಣ, ಈ ಬಾರಿ ಒಬ್ಬರೇ ಬಂದು ಮತದಾನ ಮಾಡಿದ್ದಾರೆ.