ಮತದಾರರ ಪಟ್ಟಿ ಲೋಪ: ಆಯೋಗಕ್ಕೆ ದೂರು

ತುಮಕೂರು
           ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿನ ಮುಂದೆ ಯಾವುದೋ ಮಹಿಳೆಯ ಭಾವಚಿತ್ರ ಹಾಕುವ ಲೋಪವೆಸಗಿ ತಮಗೆ ಅಪಮಾನ ಮಾಡಲಾಗಿದೆ ಎಂದು ತುಮಕೂರು ನಗರದ ಮಾಹಿತಿ ಹಕ್ಕು ಕಾರ್ಯಕರ್ತ ಕೆ.ಎಂ.ಶಿವಕುಮಾರ್ (ಆಟೋ ಯಡಿಯೂರಪ್ಪ) ರಾಜ್ಯ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
           ‘‘ನಾನು ತುಮಕೂರು ನಗರದ 35 ನೇ ವಾರ್ಡ್ ವ್ಯಾಪ್ತಿಯ ಬಂಡೆಪಾಳ್ಯ ನಿವಾಸಿ. ಮತಗಟ್ಟೆ ಸಂಖ್ಯೆ 271 ರಲ್ಲಿ ನನ್ನ ಮತ ಇದೆ. ಆದರೆ ಮತದಾರರ ಪಟ್ಟಿಯಲ್ಲಿ ನನ್ನ ಹೆಸರಿನ ಮುಂದೆ ನನ್ನ ಫೋಟೋ ಬದಲು, ಮಹಿಳೆಯ ಭಾವಚಿತ್ರ ಇದೆ. ಈ ಲೋಪವನ್ನು ಸರಿಪಡಿಸುವಂತೆ ಕೋರಿ ಎರಡು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ನಾನು ಮನವಿ ಪತ್ರ ಸಲ್ಲಿಸಿದರೂ, ಅಧಿಕಾರಿಗಳು ಯಾವುದೇ ಕ್ರಮ ಜರುಗಿಸಲಿಲ್ಲ. ದಿನಾಂಕ 31-08-2018 ರಂದು ನಡೆದ ತುಮಕೂರು ಮಹಾನಗರ ಪಾಲಿಕೆ ಚುನಾವಣೆ ಸಂದ‘ರ್ದ ಮತದಾರರ ಪಟ್ಟಿಯಲ್ಲಿ ಸಹ ನನ್ನ ಫೋಟೋ ಬದಲು ಮಹಿಳೆ ೆಟೋ ಹಾಗೆಯೇ ಇತ್ತು. ಇದು ನನಗಾದ ಅವಮಾನವೆಂದೇ ನಾನು ಭಾವಿಸುತ್ತೇನೆ’’ ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ.
           ‘‘ಇದಲ್ಲದೆ ಮತದಾರರ ಪಟ್ಟಿಯಲ್ಲಿ ನನ್ನ ಹಾಗೂ ನನ್ನ ಪತ್ನಿಯ ಹೆಸರನ್ನು ಒಂದರ ನಂತರ ಒಂದರಂತೆ ಹಾಕದೆ, ಬೇರೆ ಬೇರೆ ಸಂಖ್ಯೆಯಲ್ಲಿ ಮುದ್ರಿಸಲಾಗಿದೆ. ಇಲ್ಲೂ ಸಹ ಲೋಪಗಳಾಗಿವೆ’’ ಎಂದು ದೂರಿದ್ದಾರೆ.
‘‘ಇದಕ್ಕೆಲ್ಲ ಅಧಿಕಾರಿಗಳ ನಿರ್ಲಕ್ಷೃವೇ ಕಾರಣವಾಗಿದ್ದು, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ನ್ಯಾಯಾಲಯದ ಮೊರೆ ಹೋಗಬೇಕಾದೀತು’’ ಎಂದು ವಿವಿ‘ ದಾಖಲಾತಿಗಳೊಂದಿಗೆ ಶಿವಕುಮಾರ್ ದೂರು ಸಲ್ಲಿಸಿದ್ದಾರೆ.

Recent Articles

spot_img

Related Stories

Share via
Copy link
Powered by Social Snap