ಬೆಂಗಳೂರು: ಮಲ್ಲೇಶ್ವರಂ ಕ್ಷೇತ್ರದ ಶಾಸಕರೂ ಆಗಿರುವ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಅವರು ಭಾನುವಾರ ಮತ್ತೀಕೆರೆ ಬಡಾವಣೆಯ 3ನೇ ಮುಖ್ಯರಸ್ತೆಯಲ್ಲಿ ಪಾದಯಾತ್ರೆ ನಡೆಸಿ, ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದರು.
ಸರಕಾರಿ ಶಾಲೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚರಿಸಿದ ಅವರು, ಜನರ ಅಭಿಪ್ರಾಯಗಳನ್ನು ಆಲಿಸಿದರು. ಸಚಿವರು ತಮ್ಮ ಬಳಿಗೆ ಖುದ್ದಾಗಿ ಬಂದಿದ್ದನ್ನು ಕಂಡು ನಿವಾಸಿಗಳು ಹರ್ಷಚಿತ್ತರಾದರು.
ವಾಹನ ನಿಲುಗಡೆ, ಬೀದಿದೀಪ, ತ್ಯಾಜ್ಯ ವಿಲೇವಾರಿ, ಕುಡಿಯುವ ನೀರು ಪೂರೈಕೆ ಇತ್ಯಾದಿಗಳಲ್ಲಿರುವ ಸಣ್ಣಪುಟ್ಟ ಸಮಸ್ಯೆಗಳನ್ನು ಜನರು ವಿವರಿಸಿದರು. ಸಚಿವರು, ಇವುಗಳನ್ನು ಸಮರೋಪಾದಿಯಲ್ಲಿ ಬಗೆಹರಿಸುವಂತೆ ತಕ್ಷಣವೇ ಸೂಚಿಸಿದರು.
ಕೆಲವೆಡೆಗಳಲ್ಲಿ ಎದುರಾದ ಮಕ್ಕಳ ವಿದ್ಯಾಭ್ಯಾಸ, ಶೈಕ್ಷಣಿಕ ಪ್ರಗತಿ, ಶಾಲೆಯಲ್ಲಿ ಇರುವ ಬಿಸಿಯೂಟದ ವ್ಯವಸ್ಥೆ ಇತ್ಯಾದಿಗಳ ಬಗ್ಗೆ ಸಚಿವರು ಕಾಳಜಿಯಿಂದ ವಿಚಾರಿಸಿದರು.
ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಅವರು ಮತ್ತೀಕೆರೆಯ ವಿವಿಧ ಪ್ರದೇಶಗಳಲ್ಲಿ ಭಾನುವಾರ ಪಾದಯಾತ್ರೆ ಮಾಡಿ, ಜನರ ಕುಂದುಕೊರತೆಗಳನ್ನು ಆಲಿಸಿದರು.
