ಲಂಡನ್ :
ಸತತವಾಗಿ ಹತ್ತು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಾರಣ ಕಾಂಗ್ರೆಸ್ ಪಕ್ಷದಲ್ಲಿ ಕೊಂಚ ದುರಹಂಕಾರವಿತ್ತು. ಆದರೆ 2014 ರ ಲೋಕಸಭಾ ಚುನಾವಣೆಯಲ್ಲಿ ಆದ ಸೋಲಿನ ನಂತರ ನಾವು ಪಾಠ ಕಲಿತೆವು ಎಂದು ಸ್ವತಃ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಲಂಡನ್ ನ ಇಂಟರ್ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಸ್ಟ್ರಾಟಜಿಕ್ ಸ್ಟಡೀಸ್ ಎಂಬಲ್ಲಿ ನಡೆದ ಸಭೆಯೊಂದರಲ್ಲಿ ಅವರು ಮಾತನಾಡುತ್ತಿದ್ದರು.
‘ನೀವು ಮತ್ತೊಬ್ಬರ ಮಾತು ಕೇಳಬೇಕು, ನಾಯಕತ್ವ ಎಂದರೆ ಅದೇ, ಕಲಿಯುವುದು’ ಎಂದು ನಾಯಕತ್ವದ ಕುರಿತು ಹೇಳಿದರು. ಕಾಂಗ್ರೇಸ್ ಸಬಲಗೊಳಿಸುವ ಪ್ರಯತ್ನದಲ್ಲಿ ರಾಗಾ ಪದೆ ಪದೆ ಎಡವುತ್ತಿದ್ದಾರೆ ಇದರಿಂದಾಗಿ ಆಡಿಕೊಳ್ಳುವವರ ಮುಂದೆ ಮತ್ತೊಮ್ಮೆ ಎಡವಿಬಿದ್ದಂತಾಗಿದೆ ಕಾಂಗ್ರೆಸ್ಸಿನಲ್ಲಿ ಹತ್ತು ವರ್ಷಗಳ ಕಾಲ ಅಧಿಕಾರ ವಹಿಸಿಕೊಂಡ ಕಾರಣಕ್ಕೆ ಒಂದು ಮಟ್ಟದ ದುರಹಂಕಾರವಿತ್ತು. ಆದರೆ ಚುನಾವಣೆಯ ನಂತರ ನಾವು ಪಾಠ ಕಲಿತೆವು ಎಂದು ಅವರು ಹೇಳಿ, ಕಾಂಗ್ರೆಸ್ಸಿನ ವೈಫಲ್ಯವನ್ನು ಒಪ್ಪಿಕೊಂಡರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ







