ಕುಣಿಗಲ್
ತಾಲ್ಲೂಕಿನ ವಿವಿಧ ಭಾಗಗಳಲ್ಲಿ ರೈತರ ಜೀವ ನಾಡಿ, ಬೆಲೆ ಬಾಳುವ ಸೀಮೇಹಸುಗಳ ಸಾವು ಹೆಚ್ಚುತ್ತಿರುವುದು ಬಹುತೇಕ ರೈತರಲ್ಲಿ ಆತಂಕ ಮೂಡಿಸಿರುವ ಬೆನ್ನಲ್ಲೇ ಇದೀಗ ಕಾಣದ ರೋಗಕ್ಕೆ ಮತ್ತೊಮ್ಮೆ ತಾಲ್ಲೂಕಿನ ಮೋದೂರು ಹೊಸೂರು ಗ್ರಾಮದಲ್ಲಿ ಹಲವು ಸೀಮೆ ಹಸುಗಳ ಸಾವು ಉಂಟಾಗಿರುವ ಘಟನೆ ಸಂಭವಿಸಿದೆ.
ಕೆಲ ತಿಂಗಳಿಂದೆ ತಾಲ್ಲೂಕಿನ ಹುತ್ರಿದುರ್ಗ ಹೋಬಳಿಯ ಹೊಸಕೆರೆ ಗ್ರಾಮದಲ್ಲಿ ಕಾಲು ಬಾಯಿ ರೋಗಕ್ಕೆ ಸುಮಾರು 30ಕ್ಕೂ ಹೆಚ್ಚು ಹಸುಗಳು ಸಾವನ್ನಪ್ಪಿದ್ದು ಅಂದು ಪಶು ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಸೇರಿದಂತೆ ಪಶು ರೋಗ ತಜ್ಞರು ಆಗಮಿಸಿ ಪರಿಶೀಲಿಸಿ ಹೋಗಿದ್ದು 2018 ಮೇ ತಿಂಗಳಲ್ಲಿ ಅಂದು ಅವರು ಹೇಳಿದಂತೆ ಒಂದು ರೀತಿಯ ಸಾಂಕ್ರಾಮಿಕ ರೋಗವಾಗಿದ್ದು ಅದಕ್ಕೆ ಸಮರ್ಪಕ ಚಿಕಿತ್ಸೆ ಪಡೆಯುವಂತೆ ಮಾಹಿತಿ ನೀಡಿದ್ದರು. ಅಲ್ಲದೆ ಸುತ್ತ ಮುತ್ತ ಮೃತಪಟ್ಟ ಹಸುಗಳನ್ನ ಹೂಳುವಂತೆಯೂ ಸೂಚಿಸಿ ಕೊಟ್ಟಿಗೆಗಳಿಗೆ ಔಷಧಿ ಸಿಂಪಡಿಸುವಂತೆಯೂ ಸೂಚಿಸಿದ್ದರು.
ಆದರೆ ಇದೀಗ ಕೇವಲ 3 ತಿಂಗಳಲ್ಲಿಯೇ ಮತ್ತೊಮ್ಮೆ ಇದೇ ಸರಹದ್ದಿನಲ್ಲಿ ಬರುವ ಮೋದೂರು-ಹೊಸೂರು ಗ್ರಾಮದಲ್ಲಿ ಸೀಮೆ ಹಸುಗಳು ಸಾವನ್ನಪ್ಪುತ್ತಿರುವುದು ರೈತರಲ್ಲಿ ಆತಂಕ ಹಾಗೂ ಅಚ್ಚರಿ ಮೂಡಿಸಿದೆ.
ಹೊಸೂರು ಗ್ರಾಮದ ಶ್ರೀನಿವಾಸ್ ಎಂಬುವರ ಎರಡು ಸಿಮೇಹಸು, ಶಿವಲಿಂಗಯ್ಯ ಎಂಬುವರ ಒಂದು ಹಸು ಸರಣಿ ಸಾವನ್ನಪ್ಪಿದ್ದು ಮಂಜಮ್ಮನವರ ಒಂದು ಹಸು ರೋಗಕ್ಕೆ ತುತ್ತಾಗಿದೆ ಅಲ್ಲದೆ ಈ ಹಿಂದೆ ಹಲವು ಹಸುಗಳು ಮೃತಪಟ್ಟಿವೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದು ಸುದ್ದಿ ತಿಳಿಸಿದಾಗ ಪಶುವೈದ್ಯರು ಬಂದು ಚಿಕಿತ್ಸೆ ನೀಡಿದರೂ ಫಲಕಾರಿಯಾಗುತ್ತಿಲ್ಲ ಎನ್ನುವ ಅವರು ಈ ರೋಗ ಕೆಟಾರಲ್ ಜ್ವರದ ಬೀತಿ ಇದೆ ಎನ್ನುತ್ತಾರೆ ಆದರೆ ಯಾವುದೇ ಸಮರ್ಪಕ ಮಾಹಿತಿ ಇಲ್ಲದ ಕಾರಣ ನಮ್ಮಗಳ ಬೆಲೆ ಬಾಳುವ ಹಸುಗಳು ಸಾಯುತ್ತಿವೆ ನಾವು ಸಾಲ ಸೂಲ ಮಾಡಿ ಈ ಬರಗಾಲದಲ್ಲಿ ಮೂರು ಕಾಸು ದುಡಿದು ಜೀವನ ನಡೆಸಲು ಕಷ್ಟಕರವಾಗಿದೆ ಎಂದು ಗ್ರಾಮಸ್ಥರು ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ.
ಸ್ಥಳಕ್ಕೆ ಬೇಟಿ ನೀಡಿದ ಜನಪ್ರತಿನಿಧಿಗಳು ಹಾಗೂ ಪಶು ವೈದ್ಯರ ತಂಡ :- ಸೋಮವಾರ ರೈತರಿಂದ ಮಾಹಿತಿ ಪಡೆದ ಪಶುವೈದ್ಯರು, ವಿಜ್ಞಾನಿಗಳು ಮತ್ತು ಅಧಿಕಾರಿಗಳು ತಂಡ ಶಾಸಕರು ಮತ್ತು ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ತೆರಳಿ ಪರೀಶಿಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಶಾಸಕ ಡಾ.ರಂಗನಾಥ್ ತಾಲ್ಲೂಕು ಪಶುವೈದ್ಯಾಧಿಕಾರಿ ಶಶಿಕಾಂತ್ ರೊಂದಿಗೆ ಮಾಹಿತಿ ಪಡೆದು ಬೆಂಗಳೂರು ಪ.ನಿ. ಶಿವರಾಂ ಭಟ್, ಅಪಾರ ನಿರ್ದೇಶಕ ಟಿ.ಎಸ್. ಮಂಜು, ಜಿಲ್ಲಾ ಪಶು ಆರೋಗ್ಯ ನಿ. ಭೈರೇಗೌಡ, ಜಂಟಿ ನಿರ್ದೇಶಕ ಶ್ರೀನಿವಾಸ್, ಪಶುವಿಜ್ಞಾನಿಗಳಾದ ಶಿವರಾಜ್, ಗಿರಿಧರ್ ವೈದ್ಯರಾದ ವಿನಯ್, ನಂಜೇಗೌಡ ಸೇರಿದಂತೆ ಹಲವು ವೈದ್ಯರ ತಂಡ ಭೇಟಿ ನೀಡಿ ಪರಿಶೀಲಿಸಿದರು. ಇದೇ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಜಗದೀಶ್, ಮೋದರು ಗ್ರಾ.ಪಂ. ಸದಸ್ಯ ಸುರೇಶ್ ಸೇರಿದಂತೆ ಹಲವು ಸ್ಥಳೀಯ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ರೈತರಿಗೆ ಮನಸ್ತೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಪಶುವೈದ್ಯರ ತಂಡ ಹಸುಗಳ ರೋಗ ಲಕ್ಷಣದ ಬಗ್ಗೆ ಸೂಕ್ತ ಕ್ರಮವನ್ನು ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ.
ರೈತರಲ್ಲಿ ಮನೆ ಮಾಡಿರುವ ಆತಂಕ : ಯಾರು ಬಂದು ಎಷ್ಟೇ ಹೇಳಿದರು ಈಗಾಗಲೇ ಸಾವನ್ನಪ್ಪಿರುವ ಹಸು ಬರುವುದಿಲ್ಲ. ಸಾಲಾ ಮಾಡಿ ಜೀವನ ನಡೆಸುವ ದೃಷ್ಟಿಯಿಂದ ಹಸುತಂದು ಕುಟುಂಬದ ಜವಾಬ್ದಾರಿಯನ್ನು ನಿಬಾಹಿಸುತ್ತಿದ್ದೆವು ಆದರೆ ಇದಕ್ಕು ರೋಗಬಂದರೆ ಈ ಬರಗಾಲದಲ್ಲಿ ಇನ್ನೇನು ಮಾಡಲಿ ಎಂದು ರೈತರು ಆತಂಕವ್ಯಕ್ತಪಡಿಸಿ ಸಂಬಂಧ ಪಟ್ಟವರಿಗೆ ಹಿಡಿ ಶಾಪಹಾಕುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ