ಮದಕರಿ ನಾಯಕನ 237ನೇ ಪುಣ್ಯಸ್ಮರಣೆ

ಚಿತ್ರದುರ್ಗ

    ಹಂಪಿಯನ್ನು ಸರ್ಕಾರ ಯಾವ ರೀತಿ ಪ್ರವಾಸೋದ್ಯಮವಾಗಿ ಅಭೀವೃದ್ದಿಗೊಳಿಸಿದ್ದೇಯೇ ಅದೇ ಮಾದರಿಯಲ್ಲಿ ಚಿತ್ರದುರ್ಗವನ್ನು ಸಹಾ ಅಭೀವೃದ್ದಿ ಮಾಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ನಾಯಕ ಜನಾಂಗದ ಮುಖಂಡ, ನಗರಸಭೆಯ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಒತ್ತಾಯಿಸಿದ್ದಾರೆ.

    ಚಿತ್ರದುರ್ಗವನ್ನಾಳಿದ ಸಂಸ್ಥಾನದ ರಾಜವೀರ ಮದಕರಿ ನಾಯಕರು ನಿಧನ ಹೊಂದಿದ್ದು ಹಿನ್ನಲೆಯಲ್ಲಿ ನಗರದ ಮಜೆಸ್ಟಿಕ್ ವೃತ್ತದಲ್ಲಿನ ರಾಜವೀರ ಮದಕರಿ ನಾಯಕರ ಕಂಚಿಯ ಪ್ರತಿಮೆಗೆ ಪೂಜೆಯನ್ನು ನೇರವೇರಿಸಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಮದಕರಿ ನಾಯಕರು ನಿಧನ ಹೊಂದಿ ಇಂದಿಗೆ 237ನೇ (15-05-1782) ವರ್ಷವಾಗಿದ್ದು ಅವರ ಸ್ಮರಣೆಯನ್ನು ಮಾಡುವುದು ಅನಿವಾರ್ಯ ಮತ್ತು ಅಗತ್ಯವಾಗಿದೆ ಎಂದರು.

     ಪ್ರವಾಸಿಗರು ಹಂಪಿಗೆ ಹೋಗುವಾಗ ಚಿತ್ರದುರ್ಗವನ್ನು ಹಾದು ಹೋಗಬೇಕಿದೆ ಆದರೆ ಇಲ್ಲಿಗೆ ಬರುವವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿದೆ ಈ ಹಿನ್ನಲೆಯಲ್ಲಿ ಎರಡು ಸರ್ಕಾರಗಳು ಹಂಪಿಯನ್ನು ಯಾವ ರೀತಿ ಅಭೀವೃದ್ದಿ ಮಾಡಿ ಅಲ್ಲಿಗೆ ಪ್ರವಾಸಿಗರು ಬರುವಂತೆ ಮಾಡಲಾಗಿದ್ದೇಯೇ ಅದೇ ಮಾದರಿಯಲ್ಲಿ ಚಿತ್ರದುರ್ಗವನ್ನು ಸಹಾ ಅಭೀವೃದ್ದಿ ಮಾಡಿ ಇಲ್ಲಿಗೂ ಸಹಾ ಪ್ರವಾಸಿಗರು ಬರುವಂತೆ ಮಾಡಬೇಕಿದೆ ಎಂದು ಕಾಂತರಾಜ್ ತಿಳಿಸಿ ಇದಕ್ಕೆ ಬೇಕಾದ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕಿದೆ ಎಂದು ಸರ್ಕಾರವನ್ನು ಒತ್ತಾಯಿಸಿದರು.

    ಈ ಸಂದರ್ಭದಲ್ಲಿ ಹಾಜರಿದ್ದ ಸಂಸದರಾದ ಬಿ.ಎನ್.ಚಂದ್ರಪ್ಪ ಮಾತನಾಡಿ, ಮದಕರಿ ನಾಯಕರು ಚಿತ್ರದುರ್ಗ ಮಾತ್ರವಲ್ಲದೆ ರಾಜ್ಯದ ಮಹಾನ್ ನಾಯಕರಾಗಿದ್ದಾರೆ, ಅವರು ನೀಡಿದ ಕೂಡುಗೆಗಳು ಇಂದಿಗೂ ಸಹಾ ಅಜರಾಮರವಾಗಿದೆ. ಅವರನ್ನು ಬರೀ ಒಂದು ಜನಾಂಗ ಮಾತ್ರವೇ ನೆನಪಿಸಿಕೊಳ್ಳದೇ ಎಲ್ಲರು ಸಹಾ ನೆನೆಯಬೇಕಿದೆ ಎಂದು ತಿಳಿಸಿದರು.

      ಚಿತ್ರದುರ್ಗದಲ್ಲಿ ಅವರ ವಂಶಸ್ಥರು ಇನ್ನೂ ಇದ್ದಾರೆ ಅವರ ಬಳಿ ಮಾತನಾಡಿ ಇಲ್ಲಿಗೆ ಏನು ಬೇಕು ಕೋಟೆ ಸೇರಿದಂತೆ ಇತರೆ ಅಭೀವೃದ್ದಿಯ ಬಗ್ಗೆ ಅವರ ಬಳಿ ಮಾತನಾಡಿ ಮುಂದಿನ ಕ್ರಮವನ್ನು ಕೈಗೊಳ್ಳುವುದಾಗಿ ಸಂಸದ ಚಂದ್ರಪ್ಪ ಹೇಳಿದರು.

     ಮದಕರಿ ವಂಶಸ್ಥರಾದ ಮದಕರಿ ಮಾತನಾಡಿ, ಶ್ರೀರಂಗ ಪಟ್ಟಣದಲ್ಲಿ ಮದಕರಿ ನಾಯಕ ಸಮಾಧಿ ಇದೆ ಅದರೆ ಅಲ್ಲಿ ಅವರ ಪುತ್ಥಳಿ ಇಲ್ಲ ಇದರಿಂದ ಸರ್ಕಾರ ಅಲ್ಲಿ ಮದಕರಿ ನಾಯಕರ ಪುತ್ಥಳಿಯನ್ನು ನಿರ್ಮಾಣ ಮಾಡಬೇಕು, ಚಿತ್ರದುರ್ಗದಲ್ಲಿ ಮದಕರಿ ನಾಯಕರ ಪ್ರತಿಮೆ ಇದೆ ಆದರೆ ಪುತ್ಥಳಿ ಇಲ್ಲ ಇಲ್ಲಿಯೂ ಸಹಾ ನಿರ್ಮಾಣ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಡಾ.ರಾಮಚಂದ್ರ ನಾಯಕ್, ಹೆಚ್.ಅಂಜಿನಪ್ಪ, ಗೋಪಾಲಸ್ವಾಮಿ ನಾಯಕ, ಕಿರಣ್, ಫಾತ್ಯರಾಜನ್, ಮೈಲಾರಪ್ಪ, ಬಿ.ಟಿ.ಜಗದೀಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link