ತುಮಕೂರು:
ಮನರಂಜನೆ ಮನುಷ್ಯನ ಮೂಲಭೂತ ಅವಶ್ಯಕತೆ. ಅದನ್ನು ಒದಗಿಸುವಲ್ಲಿ ಕಲೆ-ಸಂಸ್ಕøತಿಗಳ ಪಾತ್ರ ಮಹತ್ವದ್ದು ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವೈ. ಎಸ್. ಸಿದ್ದೇಗೌಡ ತಿಳಿಸಿದರು.
ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಸಾಂಸ್ಕøತಿಕ ಚಟುವಟಿಕೆಗಳ ಘಟಕ ಹಾಗೂ ಕನ್ನಡ ವಿಭಾಗದ ಆಶ್ರಯಲ್ಲಿ ಸೋಮವಾರ ನಡೆದ ರಂಗಗೀತೆಗಳ ಗಾಯನ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು.
ಸಮಾಜ ಬದಲಾದಂತೆ ಕಲೆ-ಸಂಸ್ಕøತಿಗಳು ಮಾರ್ಪಾಡು ಹೊಂದುತ್ತವೆ. ಸದಾ ಬದಲಾಗುತ್ತಿರುವ ಕಲೆಗಳನ್ನು ಮುಂದಿನ ಪೀಳಿಗೆಗೆ ಉಳಿಸುವ ಗುರುತರ ಹೊಣೆ ಯುವಜನತೆಯ ಮೇಲಿದೆ ಎಂದರು.
ಸೋಮಾರಿತನ ಮನುಷ್ಯನ ಮೊದಲ ಶತ್ರು. ಹಣ ಅಧಿಕಾರಗಳು ಸಂತೋಷವನ್ನು ತಂದುಕೊಡುವುದಿಲ್ಲ. ಅದಕ್ಕೆ ಸಾಂಪ್ರದಾಯಿಕ ಕಲೆಗಳೇ ಬೇಕು. ಅದರೊಂದಿಗೆ ಸರಳ ಹಾಗೂ ಪ್ರಾಮಾಣಿಕ ಬದುಕನ್ನು ನಡೆಸಬೇಕು ಎಂದರು.
ಪೌರಾಣಿಕ ಪಾತ್ರಗಳನ್ನು ರಂಗಭೂಮಿ ಮಾನವೀಯ ನೆಲೆಯಲ್ಲಿ ಚಿತ್ರಿಸಿದೆ. ಪ್ರಾಚೀನ ಕಲೆಗಳಿಂದ ನಾವು ಕಲಿಯುವುದು ಬಹಳ ಇದೆ. ವಿದ್ಯಾರ್ಥಿಗಳು ಇವುಗಳಿಂದ ಮನರಂಜನೆಯನ್ನು ಪಡೆಯುವುದರೊಂದಿಗೆ ನೈತಿಕ ಅಂಶಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಾಂಶುಪಾಲ ಕೆ. ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಬೆಳ್ಳಿ ಕಿರೀಟ ಪುರಸ್ಕøತ ರಂಗಕಲಾವಿದ ಚಿಕ್ಕಪ್ಪಯ್ಯ, ರಂಗಕಲಾವಿದ ಕೃಷ್ಣಪ್ಪ ಸಿ., ಕನ್ನಡ ವಿಭಾಗದ ಮುಖ್ಯಸ್ಥ ಬಿ. ಕರಿಯಣ್ಣ, ಸಹಾಯಕ ಪ್ರಾಧ್ಯಾಪಕ ವೆಂಕಟರೆಡ್ಡಿ ರಾಮರೆಡ್ಡಿ ಹಾಗೂ ಸಾಂಸ್ಕøತಿಕ ಚಟುವಟಿಕೆಗಳ ಘಟಕದ ಸಂಚಾಲಕ ಡಾ. ಎಸ್. ಶಿವಣ್ಣ ಬೆಳವಾಡಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ