ಮಧುಗಿರಿ
ಉಪವಿಭಾಗಾಧಿಕಾರಿಗಳ ಕಚೇರಿಯ ಆವರಣಲ್ಲಿದ್ದ ಮರವೊಂದು ಇದ್ದಕಿದ್ದ ಹಾಗೆ ನೆಲಕ್ಕೆ ಉರುಳಿ ಎರಡು ದ್ವಿಚಕ್ರವಾಹನಗಳು ಜಖಂಗೊಂಡಿವೆ.
ಪಟ್ಟಣದ ಇಂದಿರಾ ಕ್ಯಾಂಟೀನ್ ಸಮೀಪವಿರುವ ಉಪವಿಭಾಗಾಧಿಕಾರಿಗಳ ಕಚೇರಿಯ ಆವರಣದಲ್ಲಿದ್ದ ಕೆಂಗಕೇಸರಿ( ಮೇ ಡೇ ಪ್ಲವರ್-ಗುಲ್ ಮೊಹರ್) ಮರವೊಂದು ಶನಿವಾರ ಮಧ್ಯಾಹ್ನ 3.30ರ ಸಮಯದಲ್ಲಿ ನೆಲಕ್ಕುರುಳಿದೆ. ಬಿಸಲ ಬೇಗೆಯಿಂದ ತಪ್ಪಿಸಿಕೊಳ್ಳಲು ಹಾಗೂ ನೆರಳಿನ ಆಶ್ರಯಕ್ಕಾಗಿ ಮರದ ಕೆಳಗೆ ಪ್ರತಿ ದಿನ ದ್ವಿಚಕ್ರ ವಾಹನಗಳು ನಿಲ್ಲಿಸಲಾಗುತ್ತಿತ್ತು. ಕೆಲ ದಿನಗಳ ಹಿಂದೆ ಸಂಜೆ ಸುರಿದ ಮಳೆಯಿಂದಾಗಿ ಮರದ ಕೆಳ ಭಾಗವು ತೇವಾಂಶ ಮತ್ತು ಮರದ ಕಾಂಡವನ್ನು ಹುಳುಗಳು ತಿಂದಿದ್ದು, ಮರವು ಉರುಳಿ ಬಿದ್ದಿದೆ. ಕಚೇರಿಯಲ್ಲಿದ್ದ ಸಿಬ್ಬಂದಿ ಮರ ಬೀಳುವ ಶಬ್ದಕ್ಕೆ ಹೆದರಿ ಏನೋ ಆಗಿದೆ ಎಂದು ಭಯಭೀತರಾಗಿ ಹೊರ ಬಂದಿದ್ದೂ ನಡೆಯಿತು