ತುಮಕೂರು:
ತುಮಕೂರು ಮಹಾನಗರ ಪಾಲಿಕೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಇಲ್ಲದೆ, ಅತಂತ್ರ ಸ್ಥಿತಿ ನಿರ್ಮಾಣಗೊಂಡಿದೆ.
ತುಮಕೂರು ಮಹಾನಗರ ಪಾಲಿಕೆಯ 35 ವಾರ್ಡ್ಗಳ ಪೈಕಿ, ಬಿಜೆಪಿ 12 , ಜೆಡಿಎಸ್ 11, ಕಾಂಗ್ರೆಸ್ 9, ಇತರೆ 3 ವಾರ್ಡ್ಗಳಲ್ಲಿ ಗೆಲವು ಸಾಧಿಸಿದ್ದಾರೆ. ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು 18 ಸದಸ್ಯರ ಬೆಂಬಲ ಅಗತ್ಯ. ಇಷ್ಟು ಸಂಖ್ಯೆಯಲ್ಲಿ ಯಾರೂ ಗೆಲ್ಲದ ಕಾರಣ ಪಾಲಿಕೆ ಅತಂತ್ರಗೊಂಡಿದೆ.
ಇದರಲ್ಲಿ ವಿಜೇತಗೊಂಡ ಅಭ್ಯರ್ಥಿಗಳ ವಾರ್ಡ್ ವಿವರ ಈ ಕೆಳಕಂಡಂತಿದೆ.
ಒಟ್ಟು ಮೂರು ಮಹಾನಗರ ಪಾಲಿಕೆಗಳಲ್ಲಿ ಒಂದರಲ್ಲಿ ಅಂದರೆ, ಶಿವಮೊಗ್ಗ ಮಹಾನಗರ ಪಾಲಿಕೆಯು ಬಿಜೆಪಿ ತೆಕ್ಕೆಗೆ ಬಿದ್ದಿದ್ದು, ಇದರಲ್ಲಿ ಬಿಜೆಪಿ-20, ಕಾಂಗ್ರೆಸ್-7, ಜೆಡಿಎಸ್-2 ಸ್ಥಾನ ಪಡೆದಿದೆ. ಉಳಿದ ಎರಡು ಅಂದರೆ, ಮೈಸೂರು ಮತ್ತು ತುಮಕೂರು ಪಾಲಿಕೆಗಳಲ್ಲಿ ಅತಂತ್ರ ಸ್ಥಿತಿ ಏರ್ಪಟ್ಟಿದ್ದು,. ಮೈಸೂರಿನಲ್ಲಿ ಬಿಜೆಪಿ-22, ಕಾಂಗ್ರೆಸ್-19, ಜೆಡಿಎಸ್-18, ಬಿಎಸ್‍ಪಿ-1, ಪಕ್ಷೇತರ-5 ಸ್ಥಾನ ಪಡೆದಿದೆ.ರಾಜ್ಯದ ಒಟ್ಟು ಪುರಸಭೆಯ 1247 ಸ್ಥಾನಗಳ ಪೈಕಿ ಕಾಂಗ್ರೆಸ್ -532, ಬಿಜೆಪಿ-389, ಜೆಡಿಎಸ್-211, ಇತರೆ-115. ನಗರಸಭೆಯ 926 ಸ್ಥಾನಗಳಲ್ಲಿ, ಕಾಂಗ್ರೆಸ್-294, ಬಿಜೆಪಿ-355, ಜೆಡಿಎಸ್-107, ಇತರೆ-170. ಪಟ್ಟಣ ಪಂಚಾಯಿತಿಯ 358 ಸ್ಥಾನಗಳ ಪೈಕಿ, 141-ಕಾಂಗ್ರೆಸ್, ಬಿಜೆಪಿ-129, ಜೆಡಿಎಸ್-29, ಇತರೆ-59 ಸ್ಥಾನಗಳನ್ನು ಪಡೆದಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ