ಚಂಡೀಗಢ:
ಕಳೆದ ಕೆಲ ದಿನಗಳಿಂದ ಕಟಾರಿಯಾ ಅವರು ನ್ಯುಮೋನಿಯಾದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ. ಕಟಾರಿಯಾ ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಕಟಾರಿಯಾ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ರಾಷ್ಟ್ರೀಯ ಸ್ವಯಂಸೇವಕದೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ಪ್ರಧಾನಿ ಮೋದಿ ಅವರ ಸಂಪುಟದಲ್ಲಿ ಜಲಶಕ್ತಿ ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವರಾಗಿದ್ದ ಕಟಾರಿಯಾ ಅವರ, ಎರಡು ವರ್ಷಗಳ ಕಾಲ ಸೇವೆಯ ಬಳಿಕ 2021 ರ ಜುಲೈನಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ರತನ್ ಲಾಲಾ ಕಟಾರಿಯಾ ಅವರ ನಿಧನಕ್ಕೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮತ್ತು ಸ್ಪೀಕರ್ ಜಿಯಾನ್ ಚಂದ್ ಗುಪ್ತಾ ಅವರು ಸಂತಾಪ ಸೂಚಿಸಿದ್ದು, ಪಂಚಕುಲದಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.
ಕೇಂದ್ರದ ಮಾಜಿ ರಾಜ್ಯ ಸಚಿವ ಮತ್ತು ಅಂಬಾಲಾದ ಸಂಸದ ರತನ್ ಲಾಲ್ ಕಟಾರಿಯಾ ಅವರ ನಿಧನದಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ಅವರು ಸಮಾಜದ ಕಲ್ಯಾಣ ಮತ್ತು ಹರಿಯಾಣದ ಜನರ ಪ್ರಗತಿಗಾಗಿ ಸಂಸತ್ತಿನಲ್ಲಿ ಯಾವಾಗಲೂ ಧ್ವನಿ ಎತ್ತಿದವರು. ಅವರ ಅಗಲಿಕೆ ರಾಜಕೀಯಕ್ಕೆ ತುಂಬಲಾರದ ನಷ್ಟ. ದೇವರು ಅಗಲಿದ ಆತ್ಮಕ್ಕೆ ಸ್ಥಾನ ನೀಡಲಿ ಮತ್ತು ಈ ಕಷ್ಟದ ಸಮಯದಲ್ಲಿ ಕುಟುಂಬಕ್ಕೆ ಶಕ್ತಿಯನ್ನು ನೀಡಲಿ ಎಂದು ಮನೋಹರ್ ಲಾಲ್ ಖಟ್ಟರ್ ಅವರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.