ಮಾದರಿ ಪಟ್ಟಣ ಪಂಚಾಯಿತಿಯನ್ನು ನಿರ್ಮಾಣಮಾಡಲು ಈ ಭಾರಿ ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ-ಶಾಸಕ ಎಸ್.ವಿ.ರಾಮಚಂದ್ರ

 ಜಗಳೂರು :

      ಜಿಡ್ಡುಗಟ್ಟಿದ ಆಡಳಿತಕ್ಕೆ ಮುಕ್ತಿ ನೀಡಿ ಮೂಲಭೂತ ಸೌಲಭ್ಯವನ್ನು ಕಲ್ಪಿಸಿ ಮಾಧರಿ ಪಟ್ಟಣ ಪಂಚಾಯಿತಿಯನ್ನು ನಿರ್ಮಾಣಮಾಡಲು ಈ ಭಾರಿ ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ ಎಂದು ಶಾಸಕ ಎಸ್.ವಿ.ರಾಮಚಂದ್ರ ಅವರು ಹೇಳಿದರು.

      ಪಟ್ಟಣದ 12ನೇ ವಾರ್ಡ್ ವಿದ್ಯಾನಗರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಪಿ.ಸುಭಾನ್ ಪರವಾಗಿ ಮತಯಾಚಿಸಿ ಮಾತನಾಡಿದ ಅವರು ಕಳೆದ ಐದು ವರ್ಷಗಳ ಕಾಲ ಆಡಳಿತವನ್ನು ನಡೆಸಿದಿ ಕಾಂಗ್ರೆಸ್ ಪಕ್ಷ ಪಟ್ಟಣಕ್ಕೆ ಕನಿಷ್ಟ ಮೂಲಭೂತ ಸೌಲಭ್ಯಗಳನ್ನು ಒದಗಿಸಿದೇ ಸರಕಾರದ ಅನುಧಾನವನ್ನು ದುರುಪಯೋಗಪಡಸಿಕೊಂಡಿದೆ ಇದನ್ನು ಸರಿಪಡಿಸಿಕೊಳ್ಳಬೇಕಾದರೆ ಪಟ್ಟಣದ 18 ವಾರ್ಡ್‍ಗಳ ಪೈಕಿ 17 ವಾರ್ಡ್‍ಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವುದರ ಮೂಲಕ ಪಟ್ಟಣ ಪಂಚಾಯಿತಿ ಅಧಿಕಾರವನ್ನು ಹಿಡಿಯಬೇಕಾಗಿದೆ. ಕ್ಷೇತ್ರದಲ್ಲಿ ಬಿಜೆಪಿ ಪಕ್ಷವೇ ಅಧಿಕಾರದಲ್ಲಿದ್ದು ನಿಮ್ಮಗಳ ಆಶಿರ್ವಾದದಿಂದ ಶಾಸಕನಾಗಿದ್ದೇನೆ ಅದೇ ರೀತಿ ಇಲ್ಲಿನ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿಗೆ ಮತನೀಡಿ ಸಹಕರಿಸಿದರೆ ಸರಕಾರದಿಂದ ಸಾಕಷ್ಟು ಅನುಧಾನವನ್ನು ತಂದು ಅಭಿವೃದ್ಧಿ ಪಡಿಸುತ್ತೇನೆ.

      ಚುನಾವಣೆ ಪ್ರಚಾರಕ್ಕೆ ಇನ್ನೊಂದು ವಾರಗಳ ಕಾಲ ಅವಕಾಶವಿದ್ದು ಪಟ್ಟಣದ ಎಲ್ಲಾ ವಾರ್ಡ್‍ಗಳಿಗೂ ಭೇಟಿ ನೀಡಿ ಅಭ್ಯರ್ಥಿಗಳಪರವಾಗಿ ಪ್ರಚಾರವನ್ನು ಮಾಡಿ ಅಧಿಕಾರಕ್ಕೆ ತರಲು ಶತಪ್ರಯತ್ನ ಮಾಡುತ್ತೇನೆಂದರು.

ಬಿಜೆಪಿ ಅಭ್ಯರ್ಥಿ ಬಿ.ಪಿ.ಸುಭಾನ್ ಮಾತನಾಡಿ ಶಾಸಕ ಎಸ್.ವಿ.ರಾಮಚಂದ್ರ ಅವರ ಹಾಗೂ ಸಂಸದ ಜಿ.ಎಂ.ಸಿದ್ದೇಶ್ವರ, ಟಿ.ಗುರುಸಿದ್ದನಗೌಡ್ರರ ಹಾಗೂ ನಿಮ್ಮೆಲ್ಲರ ಸಹಕಾರದಿಂದ ಟಿಕೇಟ್ ನೀಡಿದ್ದು ಇಲ್ಲಿನ ಮತದಾರರು ಈ ಭಾರಿ ಆಶಿರ್ವಾದವನ್ನು ನೀಡಿ, 12 ನೇ ವಾರ್ಡಿನಲ್ಲಿ ಬರುವ ರಸ್ತೆಗಳು,ಚರಂಡಿ ನಿರ್ಮಾಣ ಸೇರಿದಂತೆ ಮೂಲಭೂತ ಸೌಕರ್ಯಗಳೂ ಸೇರಿದಂತೆ ತಮ್ಮ ಅಹವಾಲುಗಳನ್ನು ಈಡೇರಿಸಲು ನಾನು ಸದಾ ಸಿದ್ಧನೀರುತ್ತೇನೆಂದು ಅವರು ಭರವಸೆ ನೀಡಿದರು.

      ಇದಕ್ಕೂ ಮುನ್ನ ಒಂದನೇವಾರ್ಡು, ಎರಡನೇ ವಾರ್ಡು, ಮೂರುನೇ ವಾರ್ಡಿನ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮನೆ ಮನೆಗೆ ತೆರಳಿ ಶಾಸಕ ಎಸ್.ವಿ.ರಾಮಚಂದ್ರ ಮತಯಾಚನೆ ನಡೆಸಿದರು.

      ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ಡಿ.ವಿ.ನಾಗಪ್ಪ, ಮಾಜಿ ಜಿ.ಪಂ.ಸದಸ್ಯ ಹೆಚ್. ನಾಗರಾಜ್, ಯುವ ಮೋರ್ಚದ ಅಧ್ಯಕ್ಷ ರವಿಕುಮಾರ್, ಮುಖಂಡರಾದ ಅರವಿಂದ್, ಜಗದೀಶ್, ಬಿಸ್ತುವಳ್ಳಿ ಬಾಬು, ಕಾಂತರಾಜ್, ಪ.ಪಂ.ಮಾಜಿ ಉಪಾಧ್ಯಕ್ಷ ಚಂದ್ರಪ್ಪ, ಹುಲಿಕುಂಟಶ್ರೇಷ್ಠಿ, ರಾಜು, ಕೃಷ್ಣಮೂರ್ತಿ, ತೂಲಹಳ್ಳಿ ಗಿರೀಶ್, ಗೌಡ್ರು ಜಗದೀಶ್, ನರೇಂದ್ರಗೌಡ, ಶಿವಾನಂದಪ್ಪ, ನಿವೃತ್ತ ಶಿಕ್ಷಕ ಸಿದ್ದಪ್ಪ, ಕೃಷ್ಣಪ್ಪ, ಬಳೆಗಾರ ರುದ್ರಪ್ಪ, ಸುಭಾನ್,ಅಲ್ಲಾಭಕ್ಷಿ, ಕ್ಯಾಂಪ್ ಪ್ರಕಾಶ್, ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.   

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap