ಮಾನವನ ಬದುಕು ಹಸನಾಗಬೇಕು : ಅಭಿನವ ಶ್ರೀ

ತಿಪಟೂರು :

              ಬದುಕು ಸೂಕ್ಷ್ಮ ಮತ್ತು ಅಧ್ಬುತವಾದುದು, ಜನನ ಮರಣವೆಂಬುದು ಸಾಮರಸ್ಯ ಜೀವನ ವಿದ್ದಂತೆ ಮಾನವನ ಬದುಕು ಹಸನಾಗಲು ಪರಿಪೂರ್ಣತೆಯ ಸಾರ್ಥಕ ಜೀವನವನ್ನು ನಾವು ಮಾಡಬೇಕೆಂದು ಕುಪ್ಪೂರು-ತಮ್ಮಡಿಹಳ್ಳಿಯ ಶ್ರೀ ಶ್ರೀ ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

              ಶ್ರೀ ಚೌಡೇಶ್ವರಿ ಪತ್ತಿನ ಸಹಕಾರ ಸಂಘದ 18ನೇ ವಾರ್ಷಿಕ ಮಹಾಸಭೆಯ ದಿವ್ಯ ಸಾನಿಧ್ಯವಹಿಸಿ ಆರ್ಶೀವಚನ ನೀಡಿದ ಶ್ರೀಗಳು ಮನುಷ್ಯನು ಮಣ್ಣಿನಲ್ಲಿ ಮಣ್ಣಾಗುತ್ತಾನೆ. ಶರಣರ, ಚಿಂತಕರ ಆದರ್ಶಗಳನ್ನು ನಾವು ಅಳವಡಿಸಿಕೊಳ್ಳಬೇಕೆಂದರು. ಇಂದು ಸಹಕಾರಿಯು ಆರ್ಥಿಕವಾಗಿ ಹಿಂದುಳಿದ ವರ್ಗದವರ ಪ್ರಗತಿಗಾಗಿ ಶ್ರಮಿತ್ತಿರುವುದು ಶ್ಲಾಘನೀಯವಾಗಿದೆ. ಮುಂದಿನ ದಿನಗಳಲ್ಲಿ 100 ಕೋಟಿ ವ್ಯವಹಾರ ಮಾಡುವಂತಾಗಲಿ. ರೈತಶ್ರೋಯೋಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶ್ರಮಿಸಬೇಕೆಂದರು.

             ಸಂಘದ ಅಧ್ಯಕ್ಷರಾದ ಸೊಮಣ್ಣನವರು ಮಾತನಾಡಿ ಈಗ ನಮ್ಮ ಸಂಘದಲ್ಲಿ 3365 ಷೇರುದಾರರಿದ್ದು 19 ಕೋಟಿ ಠೇವಣಿ ಸಂಗ್ರಹಿಸಿ 1200 ಸದಸ್ಯರಿಗೆ ಸಾಲ ವಿತರಣೆ ಮಾಡಲಾಗಿದೆ. ಪ್ರಸಕ್ತ ವರ್ಷ ನಮ್ಮ ಸಹಕಾರಿ 31 ಲಕ್ಷ ಲಾಭಗಳಿಸಿದ್ದು. ವಸೂಲಾತಿಯಲ್ಲಿ ಶೇ 90% ರಷ್ಟು ಪ್ರಗತಿ ಸಾಧಿಸಿದ್ದೇವೆ. ಸಹಕಾರಿ ಅಭಿವೃದ್ಧಿಯಿಂದ ಸದಸ್ಯರಿಗೆ ಡಿವಿಡೆಂಟ್ ನೀಡಲಾಗುತ್ತಿದೆ.

             ಸಹಕಾರಿಯ ಅಭಿವೃದ್ಧಿಗೆ ಸಿಬ್ಬಂದಿ ಹಾಗೂ ಗ್ರಾಹಕರು ಕಾರಣರಾಗಿದ್ದಾರೆ. ಸಂಘವು ಆರೋಗ್ಯ ಶಿಬಿರ, ಪಠ್ಯಪುಸ್ತಕ ವಿತರಣೆ ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು ಮುಂದಿನ ದಿನಗಳಲ್ಲಿ ಇನ್ನು ವಿಶಾಲಕಟ್ಟಡವನ್ನು ನಿರ್ಮಸಲಾಗುವುದು ಎಂದರು. ಸಹಕಾರಿಯ ಉಪಾಧ್ಯಕ್ಷರು ವಂದಿಸಿದರ, ನಿರ್ದೇಶಕರುಗಳಾದ ಶಂಕರಮೂರ್ತಿ, ರಾಜಶೇಖರ್, ಗಿರೀಶ್‍ಕುಮಾರ್, ಮಂಜುನಾಥ.ಟಿ.ಎಸ್, ನಟರಾಜು, ಕಾಂತರಾಜು ಮುಂತಾದವರು ಉಪಸ್ಥಿತರಿದ್ದರು.
 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link