ಮಾಯಕೊಂಡವನ್ನು ತಾಲೂಕು ಕೇಂದ್ರವಾಗಿ ಘೋಷಿಸಿ

ದಾವಣಗೆರೆ:

         ವಿಧಾನಸಭಾ ಕ್ಷೇತ್ರವಾಗಿರುವ ಮಾಯಕೊಂಡವನ್ನು ತಾಲೂಕು ಕೇಂದ್ರವನ್ನಾಗಿ ಸರ್ಕಾರ ಘೋಷಿಸಬೇಕೆಂದು ಒತ್ತಾಯಿಸಿ, ಮಾಯಕೊಂಡ ಪುರ ಅಭಿವೃದ್ಧಿ ವೇದಿಕೆ ಮತ್ತು ಗ್ರಾಮ ಪಂಚಾಯತ್ ವತಿಯಿಂದ ಶಾಸಕ ಪ್ರೊ.ಎನ್.ಲಿಂಗಣ್ಣನವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ.

          ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆಯ ಎಂ.ಎಸ್.ಕೆ.ಶಾಸ್ತ್ರಿ, ರಾಜ್ಯ ಸರ್ಕಾರವು ಬಜೆಟ್‍ನಲ್ಲಿ ಆರು ತಾಲೂಕುಗಳನ್ನು ಪ್ರಕಟಿಸಿದಲ್ಲದೇ, ಇತ್ತೀಚೆಗೆ ಸಿಎಂ ಹೆಚ್.ಡಿ.ಕುಮಾರಸ್ವಾಮಿಯರು ಮೂರು ತಾಲೂಕು ಕೇಂದ್ರಗಳನ್ನು ಘೋಷಣೆ ಮಾಡಿದ್ದು, ಮಾಯಕೊಂಡವನ್ನು ಕಡೆಗಣಿಸಿರುವುದು ಖಂಡನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

         ವಿಧಾನಸಭಾ ಕ್ಷೇತ್ರದ ಕೆಂದ್ರ ಬಿಂದುವಾಗಿರುವ ಮಾಯಕೊಂಡವು ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ಹೊಂದಿದೆ. ಅಲ್ಲದೆ, ಸರ್ಕಾರಿ ಪದವಿ ಕಾಲೇಜು, ನಾಡ ಕಛೇರಿ, ಕೆನರಾ ಬ್ಯಾಂಕ್ ಶಾಖೆ, ರೈಲು ಮತ್ತು ಬಸ್ ಸಂಪರ್ಕ ಸೌಲಭ್ಯಗಳನ್ನು ಸಹ ಹೊಂದಿದೆ. ಹುಂಡೇಕರ್ ಸಮಿತಿ, ವಾಸುದೇವರಾವ್ ಸಮಿತಿ ಹಾಗೂ ಗದ್ದಿಗೌಡರ್ ಸಮಿತಿಗಳ ವರದಿಗಳಲ್ಲೂ ಮಾಯಕೊಂಡ ತಾಲೂಕು ಕೇಂದ್ರವಾಗುವ ಎಲ್ಲಾ ಅರ್ಹತೆಗಳನ್ನು ಹೊಂದಿದೆ ಎಂದು ಉಲ್ಲೇಖಿಸಿದ್ದರೂ ಸಹ ಸರ್ಕಾರ ಮಾಯಕೊಂಡವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸದೇ, ಸುದೀರ್ಘವಾಗಿ ಅನ್ಯಾಯ ಮಾಡಿಕೊಂಡು ಬಂದಿದೆ ಎಂದು ಆರೋಪಿಸಿದರು.

          ಸುಮಾರು 14 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಮಾಯಕೊಂಡದಲ್ಲಿ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬಿಟ್ರೀಷ್ ಎಲಿಜೆಬತ್ ಮಹಾರಾಣಿಯ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿ, 185ಕ್ಕೂ ಹೆಚ್ಚು ಹೋರಾಟಗಾರರು ಹುತಾತ್ಮರಾಗಿರುವ ಇತಿಹಾಸವಿದೆ. ಆದ್ದರಿಂದ ತಾಲೂಕು ಕೇಂದ್ರವಾಗಿರುವ ಎಲ್ಲಾ ಅರ್ಹತೆಯನ್ನು ಹೊಂದಿರುವ ಮಾಯಕೊಂಡವನ್ನು ತಾಲೂಕು ಕೇಂದ್ರವನ್ನಾಗಿ ಮಾಡಿಸಲು ಶಾಸಕ ನಿಂಗಣ್ಣನವರು ಸತತ ಪ್ರಯತ್ನ ಮಾಡಿ, ಸರ್ಕಾರ ಮೇಲೆ ಒತ್ತಡ ಹೇರುವ ಮೂಲಕ ನಮ್ಮ ಮನವಿಗೆ ಸ್ಪಂದಿಸಬೇಕೆಂದು ಅವರು ಒತ್ತಾಯಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap