ನವದೆಹಲಿ:
ಶೀಘ್ರದಲ್ಲೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ( RBI ) ಹೊಸ 20 ರೂ.ಗಳ ನೋಟನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.
ದೇಶದಲ್ಲಿ ನೋಟು ಅಮಾನ್ಯೀಕರಣವಾದ ಬಳಿಕ ಹೊಸ 10, 50, 100, 500, 200 ರು. ನೋಟುಗಳನ್ನು ಬಿಡುಗಡೆ ಮಾಡಲಾಗಿತ್ತು. ಇದೀಗ 20 ರೂ. ಬೆಲೆಯ ಹೊಸ ನೋಟುಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ.
4.92 ಬಿಲಿಯನ್ ಹೊಸ 20 ರು. ನೋಟುಗಳನ್ನು ಕಳೆದ ಮಾರ್ಚ್ ನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿತ್ತು. ಸದ್ಯ ಚಲಾವಣೆಯಲ್ಲಿರುವ ಹಣದಲ್ಲಿ 20 ರು. ನೋಟುಗಳ ಪ್ರಮಾಣ ಶೇ.9.8 ರಷ್ಟಿದ್ದು, ಇದೀಗ ಮತ್ತೆ ಹೊಸ ರೀತಿಯ 20 ರು. ನೋಟುಗಳನ್ನು ಮಾರುಕಟ್ಟೆಗೆ ಬಿಡಲು RBI ಸಜ್ಜಾಗಿದೆ.
ಹಳೆಯ 20 ರು ನೋಟಿಗಿಂತ ಹೆಚ್ಚಿನ ಫೀಚರ್ ಈ ಹೊಸ ನೋಟಿನಲ್ಲಿ ಇರಲಿದೆ ಎಂದು ಕೇಂದ್ರೀಯ ಬ್ಯಾಂಕ್ ಹೇಳಿದೆ. ಹೊಸ ನೋಟುಗಳು ಮಾರುಕಟ್ಟೆಗೆ ಬಂದರೂ ಸಹ ಹಳೆ ನೋಟುಗಳ ಚಲಾವಣೆಯೂ ಮಾರುಕಟ್ಟೆಯಲ್ಲಿ ಮುಂದುವರಿಯಲಿವೆ.
2016ರ ನವೆಂಬರ್ ಬಳಿಕ ಆರ್‌ಬಿಐ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಭಾವಚಿತ್ರವನ್ನು ಹೊಂದಿರುವ ಹೊಸ ನೋಟುಗಳನ್ನು ಪರಿಚಯಿಸುತ್ತಿದೆ. ಈ ಹೊಸ ನೋಟುಗಳು ಹಿಂದಿನ ನೋಟುಗಳಿಗಿಂತ ಗಾತ್ರ ಹಾಗೂ ವಿನ್ಯಾಸದಲ್ಲಿ ಭಿನ್ನತೆಗಳನ್ನು ಹೊಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ