ಮಿನಿ ಲಾರಿ ಮತ್ತು ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ ಸ್ವಾತಂತ್ರ್ಯ ದಿನಾಚರಣೆ ಆಚರಣೆ

ತಿಪಟೂರು 

ನಗರದ ಬಸ್‍ನಿಲ್ದಾಣದಲ್ಲಿರುವ ಕಲ್ಪತರು ಮಿನಿ ಲಾರಿ ಮತ್ತು ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ ಪ್ರಖ್ಯಾತ ವೈದ್ಯರಾದ ಡಾ|| ಶ್ರೀಧರ್‍ರವರನ್ನು ಸನ್ಮಾನಿಸುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಧ್ವಜಾರೋಹಣ ನೆರವೇರಿಸಿದ ಡಾ|| ಶ್ರೀಧರ್ ಮಾತನಾಡಿ, ನಮ್ಮ ಭಾರತ ದೇಶ ಜಗತ್ತಿನಲ್ಲೇ ಮಾದರಿ ಎನಿಸಿರುವುದರ ಜೊತೆಗೆ ಪ್ರಗತಿಯಲ್ಲಿ ಶರವೇಗದಲ್ಲಿ ಮುನ್ನಡೆ ಸಾಧಿಸುತ್ತಿದೆ. ಈ ದೇಶದಲ್ಲಿ ಹುಟ್ಟಿರುವುದೇ ಒಂದು ಪುಣ್ಯ ಮತ್ತು ಗೌರವ. ತ್ರಿವರ್ಣ ಧ್ವಜದ ಮೂರು ಬಣ್ಣಗಳ ಸಂದೇಶ ತ್ಯಾಗ, ಶಾಂತಿ ಮತ್ತು ಪ್ರಗತಿಯ ಸಂಕೇತ, ಜಾತಿ ಮತ್ತು ಧರ್ಮದ ಆಧಾರದಲ್ಲಿ ಒಗ್ಗಟ್ಟು ಮುರಿಯಲು ಸಾಧ್ಯವಿಲ್ಲ. ಶ್ರಮಿಕ ಶಕ್ತಿ ಆತ್ಮವಿಶ್ವಾಸ ಮತ್ತು ನಂಬಿಕೆಯಿಂದ ಈ ದೇಶದ ಬಗ್ಗೆ ದೊಡ್ಡ ಅಭಿಮಾನ ಇಟ್ಟುಕೊಂಡಿದ್ದಾರೆ. ಎಲ್ಲರೂ ಒಂದು ಗೂಡಿ ಜೀವನ ಮಾಡುವುದೇ ದೇಶಕ್ಕೆ ನಾವು ಕೊಡುವ ಕೊಡುಗೆ ಎಂದರು.

ನೆಲಸಿರಿ ಗ್ರಾಮೀಣ ಉದ್ಯೋಗ ಟ್ರಸ್ಟ್ರರ್‍ನ ಅಧ್ಯಕ್ಷರಾದ ತಿಪಟೂರು ಕೃಷ್ಣ ಮಾತನಾಡಿ, ಸಾವಿರಾರು ವರ್ಷಗಳ ಕಾಲ ರಾಜ ಮಹಾರಾಜರ ಆಡಳಿತ ನಂತರ ಇನ್ನೂರು ವರ್ಷ ಬ್ರಿಟೀಷರ ಗುಲಾಮಗಿರಿಯಲ್ಲಿ ನೊಂದು ಬೆಂದು ಲಕ್ಷಾಂತರ ದೇಶಭಕ್ತರ ಬಲಿದಾನದಿಂದ ಸ್ವಾತಂತ್ರ್ಯ ಪಡೆದಿದ್ದು ಇಂದು ಸಂಭ್ರಮದ ಆಚರಣೆ ಮಾಡುತ್ತಿದ್ದೇವೆ. ಈ ಸಂಭ್ರಮದ ಜೊತೆಯಲ್ಲಿ ದುಃಖದ ವಿಚಾರವನ್ನು ನಾವು ಆತ್ಮ ವಿಮರ್ಶೆ ಮಾಡಿಕೊಳ್ಳುವ ಸಂದರ್ಭ ಎದುರಾಗಿದ್ದು ದುರದೃಷ್ಟಕರ ಸಂಗತಿ. ಒಂದು ಕಡೆ ಜಾತಿ, ಧರ್ಮದ ಆಧಾರದಲ್ಲಿ ಜನರ ಮನಸ್ಸು ಒಡೆಯುವ ಷಡ್ಯಂತ್ರಗಳು, ಮಹಿಳೆ, ಮಕ್ಕಳ ಮೇಲೆ ದೌರ್ಜನ್ಯ, ಮತ್ತೊಂಡೆದೆ ಅನಾವೃಷ್ಟಿ, ಅತೀವೃಷ್ಟಿಯಿಂದ ಸಾವಿರಾರು ನೋವು ಸಂಕಟಗಳನ್ನು ಮರೆತು ಐಕ್ಯತೆ ಸಾಧಿಸಬೇಕು. ಏಕತೆ ದೇಶದ ಅಭಿವೃದ್ಧಿಗೆ ಪೂರಕ ನಮ್ಮ ನಡೆ ನುಡಿಗಳು ಸಹ ಸನ್ನಡತೆಯಿಂದ ಕೂಡಿದರೆ ಅದೇ ದೇಶಕ್ಕೆ ಕೊಡುವ ಗೌರವವೆಂದರು.

ಪ್ರತಿದಿನದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿಯ facebook page like ಮಾಡಿ   

Recent Articles

spot_img

Related Stories

Share via
Copy link