ಮಿಸ್ ಪ್ರಿನ್ಸೆಸ್ ಆಫ್ ದಾವಣಗೆರೆಯಾಗಿ ಕು.ಮಹಾಲಕ್ಷ್ಮಿ

 ದಾವಣಗೆರೆ:

      ನಗರದಲ್ಲಿ ಇತ್ತೀಚೆಗೆ ಡೆಸ್ಟಿನಿ ಇವೆಂಟ್ಸ್‍ನ ನವೀನ್ ಅವರು ಏರ್ಪಡಿಸಿದ್ದ ಫ್ಯಾಷನ್ ಫೆಸ್ಟ್ ಟ್ಯಾಲೆಂಟ್ ಸರ್ಚ್‍ನಲ್ಲಿ ನಗರದ ಬಾಲ ಪ್ರತಿಭೆ ಕು|| ಮಹಾಲಕ್ಷ್ಮಿ ಸಿ.ಜೆ.(ವಜ್ರ) ಇವರು ಮಿಸ್ ಪ್ರಿನ್ಸೆಸ್ ಆಫ್ ದಾವಣಗೆರೆ ಆಗಿ ಆಯ್ಕೆಯಾಗಿದ್ದಾರೆ.

      ಬಾಲ ಪ್ರತಿಭೆ ಮತ್ತು ಯುವ ಪ್ರತಿಭೆಗಳನ್ನು ಗುರುತಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, 6 ವರ್ಷದ ಕು|| ಮಹಾಲಕ್ಷ್ಮಿ ಸಿ.ಜೆ.(ವಜ್ರ) ಇವರು ನೂರಾರು ಸ್ಪರ್ಧಿಗಳನ್ನು ಹಿಂದಿಕ್ಕಿ ಅಂತಿಮವಾಗಿ ಮಿಸ್ ಪ್ರಿನ್ಸೆಸ್ ಆಫ್ ದಾವಣಗೆರೆ ಆಗಿ ಆಯ್ಕೆಯಾದರು.

      ಕು|| ಮಹಾಲಕ್ಷ್ಮಿ ಸಿ.ಜೆ.(ವಜ್ರ) ಅನುಭವ ಮಂಟಪದ ತರಳಬಾಳು ವಿದ್ಯಾಸಂಸ್ಥೆಯಲ್ಲಿ 1ನೇ ತರಗತಿ ಓದುತ್ತಿದ್ದು, ಮಹಾನಗರ ಪಾಲಿಕೆಯ ಲೆಕ್ಕಾಧಿಕಾರಿ ಎಂ.ಎಸ್.ಜಯರಾಂ ಮತ್ತು ಮಂಜುಳಾ ಟಿ.ಎನ್. ಇವರ ಪುತ್ರಿ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link