ತುರುವೇಕೆರೆ:
ಕೊಡಗಿನಲ್ಲಿ ನೆರೆ ಹಾವಳಿಯಿಂದ ನಿರಾಶ್ರಿತರಾಗಿ ಗಂಜಿಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರಿಗೆ ತಾಲೂಕಿನ ಮುಸ್ಲಿಂ ಯುವಕರು ಕೊಡಗಿಗೆ ಸ್ವತಃ ತೆರಳಿ ಹೊದಿಕೆಯನ್ನು ನೇರವಾಗಿ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶನಿವಾರ ಮಧ್ಯಾಹ್ನ ತುರುವೇಕೆರೆಯಿಂದ ಹೊದಿಕೆಗಳನ್ನು ವಾಹನದಲ್ಲಿ ಹೊತ್ತು ಸಾಗಿದ ಮುಸ್ಲಿಂ ಯುವಕರು ಮಡಿಕೇರಿ ತಾಲೂಕಿನ ಕಬಳಕೇರಿಯ ಗಂಜಿ ಕೇಂದ್ರದಲ್ಲಿ ವಾಸವಿರುವ ನೂರಾರು ಮಂದಿ ನಿರಾಶ್ರಿತರಿಗೆ ಹೊದಿಕೆಗಳನ್ನು ಸ್ವತಃ ವಿತರಿಸಿದರು.
ವಿತರಣೆ ಮಾಡಿದ ಸಂಧರ್ಭದಲ್ಲಿ ಬಹಳ ಕೃತಜ್ಞತೆ ಅರ್ಪಿಸಿದ ಕೊಡಗಿನ ನಿರಾಶ್ರಿತರು ಸ್ಥಳೀಯ ಗ್ರಾಮ ಪಂಚಾಯ್ತಿಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮೂಲಭೂತ ಸೌಲಭ್ಯ ನೀಡಲು ಹಿಂದು ಮುಂದು ನೋಡುತ್ತಿದ್ದಾರೆ. ಆದರೆ ಯಾವುದೇ ಸಂಬಂದವಿಲ್ಲದ ಹಾಗೂ ಎಲ್ಲಿಂದಲೋ ಬಂದು ನಮ್ಮ ದುಃಸ್ಥಿತಿಯನ್ನು ಕಂಡು ಸಹಾಯ ಹಸ್ತ ನೀಡಿರುವುದು ನಿಜಕ್ಕೂ ಶ್ಲಾಘನೀಯ. ನೀವುಗಳು ನಮ್ಮ ಕಷ್ಠ ಕಾಲದಲ್ಲಿ ಸಹಕಾರ ಇತ್ತಿರುವುದನ್ನು ಜನ್ಮಜನ್ಮಾಂತರದಲ್ಲೂ ಮರೆಯುವುದಿಲ್ಲ ಎಂದು ಹೇಳಿ ತಮ್ಮ ಕೃತಜ್ಞತೆಗಳನ್ನು ತಿಳಿಸಿದರು ಎಂದು ಮುಸ್ಲಿಂ ಸಮುದಾಯದ ಮುಖಂಡರಾದ ಜಾಕೀರ್ ಹುಸೇನ್ ಮತ್ತು ಇಂತಿಯಾಜ್ ಹಾಗೂ ಅಫ್ಜಲ್ ಪತ್ರಿಕೆಗೆ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
