ಮೂರು ಪಕ್ಷಗಳ ಕುಟುಂಬ ರಾಜಕಾರಣ ವಿರುದ್ಧ ಪಕ್ಷೇತರ ಅಭ್ಯಾರ್ಥಿಯಿಂದ ಜನಾಂದೋಲನ

ಕೊಡಿಗೇನಹಳ್ಳಿ:

      ಜನರಿಂದ ಜನರಿಗಾಗಿ ಜನರಿಗೋಸ್ಕರ ಅಭ್ಯಾರ್ಥಿಗಳು ಆಯ್ಕೆಯಾಗಬೇಕೆಂಬ ಉದ್ದೇಶದಿಂದ ದೇವ ಮೂಲೆಯಿಂದ ಇಂದು ಪಕ್ಷೇತ್ರ ಅಭ್ಯಾರ್ಥಿಯಾಗಿ ನಾನು ಇಂದು ಪ್ರಚಾರಕ್ಕೆ ಇಳಿದಿದ್ದೇನೆ ಎಂದು ಕರ್ನಾಟಕ ರಾಷ್ಟ್ರ ಸಮಿತಿಯ ಪಕ್ಷೇತರ ಅಭ್ಯಾರ್ಥಿ ಬಿಎಸ್ ಮಲ್ಲಿಕಾರ್ಜುನ್ ಭಟ್ಟರಹಳ್ಳಿ ತಿಳಿಸಿದರು.

         ಜಿಲ್ಲೆಯ ದೇವಮೂಲೆಯಾದ ತಾಲೂಕಿನ ದೊಡ್ಡದಾಳವಟ್ಟ ಗ್ರಾಮದ ಶ್ರೀ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕ್ಷೇತ್ರದ ದೇವಮೂಲೆಯಾದ ವಿಠ್ಠಲ್ಲಾಪುರದಲ್ಲಿ ಪಕ್ಷದ ಸಂಘಟನೆಗೆ ದೇಣಿಗೆ ಸಂಗ್ರಹಿಸಿ ಮಾತನಾಡಿದರು. ಜಿಲ್ಲೆಯು ಕಳೆದ 10 ವರ್ಷಗಳಿಂದ ಕಾಂಗ್ರೇಸ್, ಜೆಡಿಎಸ್, ಬಿಜೆಪಿಯ ಪಕ್ಷಗಳಿಂದ ಬ್ರಷ್ಟಚಾರ ಹಾಗೂ ಕಲುಶಿತ ರಾಜಕಾರಣ ತುಂಬಿದೆ,
ಇದನ್ನು ಶುದ್ಧಿಗೊಳಿಸಲು ಕರ್ನಾಟಕ ರಾಷ್ಟ್ರ ಸಮಿತಿ ಬೆಂಬಲಿತ ಅಭ್ಯಾರ್ಥಿಯಾಗಿ ನಾನು ಸ್ಪರ್ಧಿಸಿದ್ದೇನೆ ಎಂದರು.

        ಮಧುಗಿರಿ ಕ್ಷೇತ್ರವನ್ನು ಎಲ್ಲಾ ಪಕ್ಷಗಳು ಕುಟುಂಬ ರಾಜಕೀಯಕ್ಕೆ ಬಳಸಿಕೊಳ್ಳುತಿದ್ದು ಹಾಲಿ ಮುಖ್ಯಮಂತ್ರಿಯ ಪತ್ನಿ ಹಾಗೂ ಉಪ ಮುಖ್ಯಮಂತ್ರಿ ಹಿಂದೆ ಶಾಸಕರಾಗಿದ್ದವರು, ಹಾಲಿ ಸಂಸದರ ಅವಧಿಯಲ್ಲಿ ಸಂಸದರ ಆದರ್ಶ ಗ್ರಾಮವಾಗಿ ಚಿಕ್ಕದಾಳವಟ್ಟ ಗ್ರಾಮವನ್ನು ಆಯ್ಕೆ ಮಾಡಿಕೊಂಡಿದ್ದರು ಆದರೆ ಇಲ್ಲಿನ ಜನತೆಗೆ ಒಂದು ಸರಕಾರಿ ಸಾರಿಗೆ, ಸೂಕ್ತ ಚರಂಡಿಗಳು, ರಸ್ತೆ ವ್ಯವಸ್ಥೆ ಮಾಡಿಸಲು ಸಾಧ್ಯವಾಗಿಲ್ಲಾ,

        ಸಂಸದರ ಆದರ್ಶ ಗ್ರಾಮವಾಗಿ ಆಯ್ಕೆಯಾಗಿ 5 ವರ್ಷ ಕಳೆದರು ಈ ಭಾಗದಲ್ಲಿ ಯಾವುದೆ ಅಭಿವೃದ್ದಿ ಕಂಡಿಲ್ಲಾ, ಯಾವುದೆ ಬದಲಾವಣೆಯಾಗಿಲ್ಲಾ, ಕನಿಷ್ಠ ಒಂದು ಕೈಗಾರಿಕ ಕೇಂದ್ರವಿಲ್ಲಾ, ಸಹಕಾರಿ ಕ್ಷೇತ್ರದಿಂದ ಎಲ್ಲಾ ಕ್ಷೇತ್ರಗಳು ಬ್ರಷ್ಠಚಾರ ತುಂಬಿ ತುಳುಕುತ್ತಿದೆ, ಹಣ ಹೆಂಡ ಹಂಚುವವರನ್ನು ಬಹಿಷ್ಕರಿಸಿ ಇಂತಹ ವಿರುದ್ಧ ಪ್ರಾಮಾಣಿಕ ಅಭ್ಯಾರ್ಥಿಗೆ ಮತಚಲಾಯಿಸಿ, ಕೇವಲ ಈ ಮೂರು ಜೆಸಿಬಿ ಪಕ್ಷಗಳು ವಂಶಾವಳಿ ರಾಜಕಾರಣ ಮಾಡುತ್ತಾ ಕಾಲಹರಣ ಮಾಡುಲಾಗುತ್ತಿದೆ ಎಂದು ಆರೋಪಿಸಿದರು.

         ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಯ ಜಿಲ್ಲಾ ಉಪಾಧ್ಯಕ್ಷ ಬಿಎಸ್ ಹನುಮಂತರಾಯಪ್ಪ ಮಾತನಾಡಿ, ನಾವು ಮತದಾರರಿಗೆ ಆಸೆ ಅಮಿಷಗಳನ್ನು ಕೊಟ್ಟು ಹಣ ಹೆಂಡ ಹಂಚುವವರಲ್ಲಾ, ನಿಮ್ಮಿಂದ ನಿಮಗಾಗಿ ದೇಣಿಗೆ ಸಂಗ್ರಹಿಸಿ ಚುನಾವಣೆ ಎದುರಿಸುತಿದ್ದೇವೆ, ನಮ್ಮ ಪಕ್ಷದಲ್ಲಿ ಪ್ರತಿ ಚುನಾವಣೆಯಲ್ಲಿ ವಿಧ್ಯಾವಂತ ಯುವಕರನ್ನು ತರಬೇತಿ ನೀಡುವ ಮೂಲಕ ನಮ್ಮ ಪಕ್ಷದಿಂದ ಅಭ್ಯಾರ್ಥಿಯನ್ನಾಗಿಸಿ ಪ್ರಜಾಪ್ರಭೃತ್ವದ ಉಳಿವಿಗಾಗಿ ಹೋರಾಟ ಮಾಡುತಿದ್ದೇವೆ ಇದಕ್ಕೆ ಪ್ರಜ್ಞಾವಂತ ಮತದಾರರು ಸಹಕರಿಸಿ ನಮ್ಮ ಅಭ್ಯಾರ್ಥಿಯ ಗೆಲುವಿಗೆ ಶ್ರಮಿಸಬೇಕಿದೆ ಎಂದರು.

          ಈ ಸಂದರ್ಭದಲ್ಲಿ ಜನಸಂಗ್ರಾಮ ಪರಿಷತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರತಿಮಾ ನಾಯ್ಕ್, ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಸದಸ್ಯರಾದ ಗೋವಿಂದರಾಜು, ಗುಂಡ ಹುಸೇನ್, ಗಣೇಶ್ ಮೂರ್ತಿ, ಹಂದ್ರಾಳು ನರೇಂದ್ರ, ಮಧುಗಿರಿ ಹರೀಶ್, ತಿಮ್ಯಯ್ಯ, ಬ್ಯಾಲ್ಯ ಭೀಮಣ್ಣ, ರಾಜಗೋಪಾಲರೆಡ್ಡಿ ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link