ಮೇಲು ಸೇತುವೆಯಿಂದ ಬಿದ್ದ ಅಣಬೆ ಲಾರಿ : ಒಂದು ಸಾವು

ಬೆಂಗಳೂರು

         ಪುಣೆಯಿಂದ ನಗರಕ್ಕೆ ಅಣಬೆ ತುಂಬಿಕೊಂಡು ವೇಗವಾಗಿ ಬರುತ್ತಿದ್ದ ಲಾರಿ ಮೇಲುಸೇತುವೆ ರಸ್ತೆಯಿಂದ ಕೆಳಗಿನ ರಸ್ತೆಗೆ ಉರುಳಿಬಿದ್ದು ಕ್ಲೀನರ್ ಸ್ಥಳದಲ್ಲೇ ಮೃತಪಟ್ಟರೆ ಚಾಲಕ ಗಾಯಗೊಂಡಿರುವ ದುರ್ಘಟನೆ ಭಾನುವಾರ ಮುಂಜಾನೆ ಯಶವಂತಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

          ಪುಣೆ ಮೂಲದ ಶ್ರೀನಿವಾಸಚಾರಿ(23)ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ. ಗಾಯಗೊಂಡಿರುವ ಚಾಲಕ ಕೆಂಚೇಗೌಡ ಅವರನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

         ಪುಣೆಯಿಂದ ಬೆಂಗಳೂರಿಗೆ ಅಣಬೆ ತುಂಬಿಕೊಂಡು ಬರುತ್ತಿದ್ದ ಲಾರಿಯು ಮುಂಜಾನೆ 5.30ರ ವೇಳೆ ಯಶವಂತಪುರ ಮೇಲುಸೇತುವೆ ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದೆ.

        ಲಾರಿಯಡಿ ಸಿಕ್ಕ ಕ್ಲೀನರ್ ಸ್ಥಳದಲ್ಲೇ ಮೃತಪಟ್ಟು, ಚಾಲಕನಿಗೆ ಗಂಭೀರ ಗಾಯವಾಗಿದೆ.ಲಾರಿಯಲ್ಲಿದ್ದ ಅಣಬೆ ಬಾಕ್ಸ್‍ಗಳು ಚೆಲ್ಲಾಪಿಲ್ಲಿಯಾಗಿದ್ದು ಲಾರಿ ಜಖಂಗೊಂಡಿದೆ.ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ಯಶವಂತಪುರ ಮೇಲುಸೇತುವೆ ರಸ್ತೆಯಲ್ಲಿ ಹಠಾತ್ ತಿರುವಿದ್ದು ಇದರಿಂದ ಹಲವು ಬಾರಿ ಅಪಘಾತಗಳು ನಡೆದಿವೆ ಬೆಳಿಗ್ಗೆ 6 ನಂತರವೇನಾದರೂ ಲಾರಿ ಕೆಳಗೆಬಿದ್ದಿದ್ದರೆ ಅಲ್ಲಿದ್ದ ಆಟೋ ನಿಲ್ದಾಣದಿಂದ ಬಹಳಷ್ಟು ಹಾನಿಯಾಗುತ್ತಿತ್ತು.ಘಟನಾ ಸ್ಥಳಕ್ಕೆ ಡಿಸಿಪಿ ಸೌಮ್ಯಲತಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿರುವ ಯಶವಂತಪುರ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link