ತುಮಕೂರು:
ವಿ.ಪ.ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ೧೫ ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಮೇಲ್ಮನೆಯಲ್ಲಿ ಬಹುಮತ ಸಾಧಿಸಲಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ವಿಶ್ವಾಸ ವ್ಯಕ್ತಪಡಿಸಿದರು. ನಗರದ ಹೊರವಲಯದ ಹೆಗ್ಗೆರೆಯಲ್ಲಿ ಮಾತನಾಡಿ, ಕಾಂಗ್ರೆಸ್ ಈ ಭಾರಿ ಲೆಕ್ಕಾಚಾರದೊಂದಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಬಿಜಾಪುರ, ಧಾರವಾಡ , ದ.ಕ. ಮೈಸೂರು, ಮಂಗಳೂರಿನಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವುದು ಖಚಿತವಾಗಿದ್ದು ತುಮಕೂರು ಸೇರಿ ಇತರ ಏಕ ಸದಸ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವಿನ ಹಾದಿಯಲ್ಲಿದ್ದಾರೆ ಎಂದರು. ವಿ.ಪ.ದಲ್ಲಿ ಕಾಂಗ್ರೆಸ್ ವಬಹುಮತ ಸಾಧಿಸುವ ಮೂಲಕ ಆಡಳಿತ ಪಕ್ಷಕ್ಕೆ ಮುಜುಗರ ಉಂಟಾಗಲಿದ್ದು ಯಾವುದೇ ವಿಧೇಯಕ ಹಾಗೂ ತಿದ್ದುಪಡಿ ತರಲು ಸರ್ಕಾರಕ್ಕೆ ಆಗುವುದಿಲ್ಲ.
ಸರ್ಕಾರದ ಆಡಳಿತ ವೈಫಲ್ಯ, ಬೆಲೆ ಏರಿಕೆ, ಅತಿ ವೃಷ್ಟಿಯಿಂದ ಆದ ಬೆಳೆಹಾನಿ ಪರಿಹಾರ ವಿಳಂಬ ಈ ಎಲ್ಲ ಅಂಶಗಳು ಚುನಾವಣೆ ಮೇಲೆ ಪ್ರಭಾವ ಬೀರಲಿದ್ದು ಫಲಿತಾಂಶ ಆಡಲಿತ ಪಕ್ಷಕ್ಕೆ ವ್ಯತಿರಿಕ್ತವಾಗಲಿದೆ ಎಂದರು. ತುಮಕೂರು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎಲ್ಲ ಮುಖಂಡರು ಒಗ್ಗಾಟ್ಟಾಗಿ ಕೆಲಸಮಾಡುವುದು ರಾಜೇಂದ್ರ ಗೆಲ್ಲುವುದು ನಿಶ್ಚಿತ . ಕಾಂಗ್ರೆಸ್ ಅಭ್ಯರ್ಥಿ ಕೈ ಗೆ ಸಿಗುವ ವ್ಯಕ್ತಿಯಾಗಿದ್ದು ಗ್ರಾಪಂ ಸದಸ್ಯರು ಅವರ ಬಗ್ಗೆ ಹೆಚ್ವಿನ ಒಲವು ಹೊಂದಿದ್ದಾರೆ . ಜಿಲ್ಲೆಯ ಎಲ್ಲ ಗ್ರಾಪಂಗಳಲ್ಲೂ ಕಾಂಗ್ರೆಸ್ ಬೆಂಬಲಿತರೆ ಸದಸ್ಯರಾಗಿರುವುದರಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲವು ಶತಸಿದ್ಧ ಎಂದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
