ಮೈದಾಳ ಕೆರೆಗೆ ಹೇಮಾವತಿ ನೀರು:ಡಿ.ಸಿ.ಗೌರಿಶಂಕರ್

ತುಮಕೂರು:

               ಮುಂದಿನ ಒಂದು ವರ್ಷದ ಅವಧಿಯಲ್ಲಿ ಬುಗುಡನಹಳ್ಳಿ ಕೆರೆಯಿಂದ ಮೈದಾಳ ಕೆರೆಗೆ ಹೇಮಾವತಿ ನೀರು ಹರಿಸುವುದು ಶತಸಿದ್ಧ ಎಂದುಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಭರವಸೆ ನೀಡಿದರು.

                ಅವರು ಕ್ಷೇತ್ರದ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಾದ, ದುರ್ಗದಹಳ್ಳಿ ಸರ್ಕಾರಿ ಶಾಲಾ ಕಟ್ಟಡದಗುದ್ದಲಿ ಪೂಜೆ, ಕದರನಹಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ರೈತರಜಮೀನಿಗೆ ತೆರಳಿ ಬೆಳೆ ವೀಕ್ಷಣೆ, ಊರ್ಡಿಗೆರೆರೈತ ಸಂಪರ್ಕಕೇಂದ್ರದಲ್ಲಿರಸಗೊಬ್ಬರ, ಬಿತ್ತನೆ ಬೀಜ, ಕೃಷಿ ಪರಿಕರಗಳ ವಿತರಣೆ, ಕದರನಹಳ್ಳಿ ತಾಂಡ್ಯದಲ್ಲಿ ಸಮುದಾಯ ಭವನಕ್ಕೆಗುದ್ದಲಿ ಪೂಜೆ ಹಾಗೂ ತಿಮ್ಮನಾಯಕನಹಳ್ಳಿಯಲ್ಲಿ ನೂತನ ಸರ್ಕಾರಿ ಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡುತ್ತಿದ್ದರು.

                ಇತಿಹಾಸದಲ್ಲಿ ಇಲ್ಲಿಯವರೆಗೂ ಗ್ರಾಮಾಂತರಕ್ಷೇತ್ರದಲ್ಲಿ ರಾಜಕಾರಣ ಮಾಡಿದಯಾರೂ ಬುಗುಡನಹಳ್ಳಿ ಕೆರೆಯಿಂದ ಮೈದಾಳ ಕೆರೆಗೆ ಹೇಮಾವತಿ ನೀರು ಹರಿಸಿಲ್ಲ ಮುಂದಿನ 1 ವರ್ಷದಲ್ಲಿ ಈ ಯೋಜನೆಕಾರ್ಯರೂಪಕ್ಕೆತರುವುದಾಗಿ ತಿಳಿಸಿದರು.

                ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯಲ್ಲಿ ಸರ್ಕಾರಿಶಾಲೆಗಳ ಅಭಿವೃದ್ಧಿಗಾಗಿ, ಹಳೇ ಶಾಲೆಗಳ ದುರಸ್ಥಿಗೆ, ಹೊಸ ಶಾಲಾ ಕಟ್ಟಡದ ನಿರ್ಮಾಣಕ್ಕಾಗಿ ಶಿಕ್ಷಣ ಸಚಿವರಿಗೆ ಹಾಗೂ ಮುಖ್ಯಮಂತ್ರಿಕುಮಾರಸ್ವಾಮಿರವರಿಗೆಅನುದಾನ ಬಿಡುಗಡೆಗೆ ಪ್ರಸ್ಥಾವನೆ ಸಲ್ಲಿಸಲಾಗಿದೆಎಂದರು.ತಿಮ್ಮನಾಯಕನಹಳ್ಳಿ ಗ್ರಾಮವನ್ನುದತ್ತು ಪಡೆದುಹೈಟೆಕ್‍ಗ್ರಾಮವನ್ನಾಗಿ ನಿರ್ಮಿಸಲಾಗುವುದುಎಂದುಇದೇ ವೇಳೆ ಘೋಷಿಸಿದರು.

               ಅಂಬೇಡ್ಕರ್‍ ಅಭಿವೃದ್ಧಿ ನಿಗಮದಿಂದ ಈ ಬಾರಿ 1385 ಕುಟುಂಬಗಳಿಗೆ 10 ಕೋಟಿ 18 ಲಕ್ಷ ಹೆಚ್ಚುವರಿಅನುದಾನ ನೀಡುವಂತೆ ಸಚಿವರಿಗೆ ಮನವಿ ಮಾಡಿದ್ದೇನೆ. ಗ್ರಾಮಾಂತರ ಕ್ಷೇತ್ರದಲ್ಲಿ 50 ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ 6 ಕೋಟಿ, 50 ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕೆ 6 ಕೋಟಿ, ಅನುದಾನ ದೊರಕಿಸಲು ಸರ್ಕಾರಕ್ಕೆ ಪ್ರಸ್ಥಾವನೆ ಸಲ್ಲಿಸಿರುವುದಾಗಿ ತಿಳಿಸಿದರು ಮುಖ್ಯಮಂತ್ರಿ ಕುಮಾರಸ್ವಾಮಿಯವರು ರೈತರ ಸಾಲ ಮನ್ನಾ ಮಾಡದಿದ್ದರೆ ಗ್ರಾಮಾಂತರ ಕ್ಷೇತ್ರದ ಸಮಗ್ರಅಭಿವೃದ್ಧಿಗಾಗಿ 1000 ಕೋಟಿಅನುದಾನತರುವ ನಿರೀಕ್ಷೆ ಹೊಂದಿದ್ದೆ.ಆದರೆ ಮುಖ್ಯಮಂತ್ರಿಕುಮಾರಸ್ವಾಮಿಯವರುರೈತರ ಸಾಲ ಮನ್ನಾ ಮಾಡಿಜನಪರ ಕಾಳಜಿ ಮರೆದಿದ್ದಾರೆ ಹಾಗಾಗಿ ಕ್ಷೇತ್ರಕ್ಕೆ ಹೆಚ್ಚಿನಅನುದಾನ ಬಿಡುಗಡೆ ಮಾಡಲುಒತ್ತಡ ಹಾಕುವುದು ಕಷ್ಠಸಾಧ್ಯಆದ್ದರಿಂದ ಹಂತ ಹಂತವಾಗಿಅನುದಾನ ಬಿಡುಗಡೆ ಮಾಡಲು ಪ್ರಸ್ಥಾವನೆ ಸಲ್ಲಿಸುವುದಾಗಿ ಹೇಳಿದರು.

             ಎಸ್.ಸಿ.ಪಿ, ಟಿ.ಎಸ್.ಪಿ.ಯೋಜನೆಯಡಿ ಗ್ರಾಮಾಂತರಕ್ಷೇತ್ರದ ಕಾಲೋನಿಗಳ ಸಮಗ್ರ ಅಭಿವೃದ್ಧಿಗಾಗಿ 200 ಕೋಟಿರೂಗಳ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ಥಾವನೆ ಸಲ್ಲಿಸಿರುವುದಾಗಿ ತಿಳಿಸಿದರು.

             ಗ್ರಾಮಾಂತರ ಕ್ಷೇತ್ರಕ್ಕೆ ಸರ್ಕಾರದಿಂದ ವಸತಿ ಯೋಜನೆಯಡಿ ಮಂಜೂರಾಗಿರುವ ಮನೆಗಳನ್ನು ಹೊರತುಪಡಿಸಿ ಹೆಚ್ಚುವರಿಯಾಗಿ 6500 ಮನೆ ಮಂಜೂರಾತಿ ಮಾಡುವಂತೆವಸತಿ ಸಚಿವರಿಗೆ ಮನವಿ ಮಾಡಿರುವುದಾಗಿ ಹೇಳಿ ಸೌಲಭ್ಯ ವಿತರಣೆಯಲ್ಲಿ ಬಡವರನ್ನು ನಾನೇ ನೇರವಾಗಿ ಭೇಟಿಮಾಡಿ ವಸ್ತುಸ್ಥಿತಿಗುರುತಿಸಿ ಸೌಲಭ್ಯ ವಿತರಣೆಗೆಕ್ರಮ ಕೈಗೊಳ್ಳೂತ್ತೇನೆ ಎಂದು ಭರವಸೆ ನೀಡಿದರು
ಈ ವೇಳೆ ತಾಲ್ಲೂಕು ಜೆಡಿಎಸ್‍ ಘಟಕದ ಅಧ್ಯಕ್ಷ ಸುವರ್ಣಗಿರಿಕುಮಾರ್, ಕಾರ್ಯಧ್ಯಕ್ಷ ದುರ್ಗದಹಳ್ಳಿ ರಮೇಶ್, ಜೆಡಿಎಸ್ ಮುಖಂಡರಾದ ಬೆಳಗುಂಭ ವೆಂಕಟೇಶ್, ಮಾಜಿ ಎಪಿಎಂಸಿ ಅಧ್ಯಕ್ಷ ವಿಜಯ್‍ಕುಮಾರ್, ಹರಳೂರು ಸುರೇಶ್ ಹಾಗೂ ಜೆಡಿಎಸ್‍ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link
Powered by Social Snap