ಲಾಹೋರ್:
ಕೆಲ ದಿನಗಳ ಹಿಂದೆ ಬಾಲಿವುಡ್ ನಟ ನಾಸಿರುದ್ದೀನ್ ಶಾ ಅವರು ನಾನು ಮತ್ತು ನನ್ನ ಮಕ್ಕಳು ಭಾರತದಂತಹ ದೇಶದಲ್ಲಿ ಇರಲು ಹೆದರುವ ಪರಿಸ್ಥಿತಿ ಬಂದೊದಗಿದೆ ಎಂದು ತಿಳಿಸಿದ್ದ ಬೆನ್ನಲ್ಲೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ “ಅಲ್ಪಸಂಖ್ಯಾತರನ್ನು ಹೇಗೆ ಕಾಣಬೇಕೆಂದು ನಾವು ಮೋದಿ ಸರ್ಕಾರಕ್ಕೆ ತೋರಿಸುತ್ತೇವೆ” ಎಂದು ಹೇಳುವ ಮೂಲಕ ಹೊಸ ವಿವಾದ ಸೃಷ್ಠಿಸಿದ್ದಾರೆ .
ಉತ್ತರ ಪ್ರದೇಶದ ಬುಲಂದರ್ ಶಹರ್ ಹಿಂಸಾಚಾರ ವೇಳೆ ಪೋಲೀಸ್ ಅಧಿಕಾರಿಯೊಬ್ಬರ ಹತ್ಯೆಯಾಗಿದ್ದ ಹಿನ್ನೆಲೆಯಲ್ಲಿ ಭಾರತದಲ್ಲಿ ಗುಂಪು ದಾಳಿಗಳು ಹೆಚ್ಚುತ್ತಿದ್ದ ಬಗ್ಗೆ ಬಾಲಿವುಡ್ ನಟ ಶಾ ಕಳವಳ ವ್ಯಕ್ತಪಡಿಸಿದ್ದರು.”ನನ್ನ ಮಕ್ಕಳನ್ನು ನಾನು ಯಾವುದೇ ನಿರ್ದಿಷ್ಟ ಧರ್ಮದ ಅನುಯಾಯಿಗಳನ್ನಾಗಿ ಬೆಳೆಸಿಲ್ಲ, ಅವರ ಬಗ್ಗೆ ನನಗೆ ಆತಂಕವಿದೆ” ಎಂದು ಶಾ ಹೇಳಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








