ಮೋದಿ ಬರೀ ಸುಳ್ಳು ಹೇಳಿದ್ದೇ ದೊಡ್ಡ ಸಾಧನೆ : ಈಶ್ವರ ಖಂಡ್ರೆ ವ್ಯಂಗ್ಯ

 ಹೊಸಪೇಟೆ : 

      ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಳೆದ ನಾಲ್ಕುವರಿ ವರ್ಷದಲ್ಲಿ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಕಪ್ಪು ಹಣ ವಾಪಾಸ್ 2ಕೋಟಿ ಉದ್ಯೋಗ ಸೇರಿದಂತೆ ಯಾವುದೇ ಒಂದು ಭರವಸೆ ಈಡೇರಿಸಿಲ್ಲ. ಬರೀ ಸುಳ್ಳು ಹೇಳಿಕೊಂಡು ತಿರುಗಿದ್ದೇ ಇವರ ದೊಡ್ಡ ಸಾಧನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವ್ಯಂಗ್ಯವಾಡಿದರು.

      ಇಲ್ಲಿನ ಪಟೇಲನಗರದ ಶಾಸಕ ಆನಂದಸಿಂಗ್ ಕಚೇರಿ ಆವರದಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಿಮಿತ್ತ ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

      ಚುನಾವಣೆಗೆ ಮುಂಚೆ ಪ್ರಧಾನಿ ಮೋದಿಯವರು ಅಧಿಕಾರ ಹಿಡಿಯುವ ಉದ್ದೇಶದಿಂದ ದೇಶದ ಜನರಿಗೆ ಕಪ್ಪುಹಣ ವಾಪಾಸ್, ನಿರುದ್ಯೋಗಿಗಳಿಗೆ 2ಕೋಟಿ ಉದ್ಯೋಗ ನೀಡುವ ಭರವಸೆ ನೀಡಿದ್ದರು. ಅದು ಹುಸಿಯಾಗಿದೆ. ಇವರಿಗೆ ಬಡವರ , ರೈತರ, ಮಹಿಳೆಯರ, ಕಾರ್ಮಿಕರ ಹಾಗು ದಲಿತರ ಬಗ್ಗೆ ಯಾವುದೇ ಕಾಳಜಿ ಇಲ್ಲ. ಬರೀ ಸುಳ್ಳು ಹೇಳೋದೇ ನಿತ್ಯದ ಕಾಯಕವಾಗಿದೆ. ಕಳೆದ ನಾಲ್ಕುವರಿ ವರ್ಷದ ಆಡಳಿತ ನೋಡಿದರೆ ಜನರಿಗೆ ಇವರ ಆಡಳಿತ ವೈಫಲ್ಯ ಅರ್ಥವಾಗುತ್ತಿದೆ ಎಂದರು.

      ಪೆಟ್ರೋಲ್, ಡೀಸೆಲ್ ಹಾಗು ಅಗತ್ಯ ವಸ್ತುಗಳ ಬೆಲೆ ಏರಿಕೆ, ನೋಟ್ ಬ್ಯಾನ್‍ನಿಂದ ದೇಶದ ಜನ ಕಂಗಾಲಾಗಿದ್ದಾರೆ. ದನಗಳ ಹೆಸರಿನಲ್ಲಿ ಅಮಾಯಕರನ್ನು ಕೊಲೆ ಮಾಡುತ್ತಿದ್ದಾರೆ. ದಲಿತರು, ಮಹಿಳೆಯರು, ಬಡವರು, ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಹಿಂದೆ ಆಳಿದ ಯಾವ ಸರ್ಕಾರಗಳು ಇಂಥ ಕೆಟ್ಟ ಆಡಳಿತ ನೀಡಿದ್ದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

      ಸಿಬಿಐ, ಐಟಿ, ಇಡಿ ಮುಂತಾದ ಸಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು, ಯಾರು ಅವರ ವಿರುದ್ದ ಮಾತನಾಡುತ್ತಾರೋ ಅಂಥವರ ವಿರುದ್ದ ಸಿಬಿಐ, ಐಟಿ ಗಳನ್ನು ಛೂಬಿಟ್ಟು ಪ್ರತಿ ಪಕ್ಷಗಳನ್ನು ಹಣಿಯುವ ಕೆಲಸ ಮಾಡುತ್ತಿದ್ದಾರೆ. ತಮ್ಮ ಸ್ವರ್ಥಕ್ಕಾಗಿ ಮತಗಳ ಧ್ರವೀಕರಣಕ್ಕಾಗಿ ಇಂಥ ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಇಂಥವರಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಬೇಕು ಎಂದರು.

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ : ಈಶ್ವರಖಂಡ್ರೆ ವಿಶ್ವಾಸ

      ಇದೇ ಆ.31ರಂದು ರಾಜ್ಯದಲ್ಲಿ ನಡೆಯಲಿರುವ 105 ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರಖಂಡ್ರೆ ವಿಶ್ವಾಸ ವ್ಯಕ್ತಪಡಿಸಿದರು.

      ಇಲ್ಲಿನ ಪಟೇಲನಗರದ ಶಾಸಕ ಆನಂದಸಿಂಗ್ ಅವರ ಕಚೇರಿ ಆವರಣದಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯುವ 105 ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಲಿದೆ. ಎಲ್ಲೆಡೆ ಕಾಂಗ್ರೆಸ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.

      ಇದೇ ಆ.24ನೇ ತಾರೀಖಿನಿಂದ ರಾಜ್ಯದಲ್ಲಿ ಪ್ರವಾಸ ಕೈಗೊಂಡಿದ್ದೇನೆ. ಈಗಾಗಲೇ 30 ಸ್ಥಳೀಯ ಸಂಸ್ಥೆಗಳಲ್ಲಿ ಪ್ರಚಾರ ಕಾರ್ಯ ಮುಗಿಸಿದ್ದೇನೆ. ಇನ್ನುಳಿದ ಸ್ಥಳಗಳಲ್ಲಿ ಪ್ರಚಾರ ಮಾಡುವವನಿದ್ದೇನೆ. ಜಿಲ್ಲೆಯ ಕುಡುತಿನಿ, ಕೊಟ್ಟೂರುಗಳಲ್ಲಿ ಸಹ ಚುನಾವಣೆ ನಡೆಯುತ್ತಿದೆ. ಪಕ್ಷದ ಕಾರ್ಯಕರ್ತರು ಹುಮ್ಮಸ್ಸಿನಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.

      ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯನವರ ಸರ್ಕಾರ ಅನೇಕ ಜಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿತ್ತು. ಆದರೂ ನಾವು ಸೋಲುವಂತಾಯಿತು. ಇದಕ್ಕೆ ಅತೀ ಆತ್ಮವಿಶ್ವಾಸವೇ ಕಾರಣವಾಯಿತು. ಬಿಜೆಪಿಯ ಸುಳ್ಳುಗಳನ್ನು ಜನತೆ ಮುಂದಿಡುವ ಕಾರ್ಯದಲ್ಲಿ ಸ್ವಲ್ಪ ಎಡವಿದ್ದೇವೆ. ಅದಕ್ಕಾಗಿ ಈಗ ಪಕ್ಷವನ್ನು ಬೇರು ಮಟ್ಟದಿಂದ ಕಟ್ಟುವ ನಿಟ್ಟಿನಲ್ಲಿ ಕಾರ್ಯನಿರತರಾಗಿದ್ದೇವೆ. ಪಕ್ಷದ ಕಾರ್ಯಕರ್ತರು, ಯುವಕರು ಪಕ್ಷದ ಬಲವರ್ಧನೆಗೆ ಶ್ರಮಿಸಬೇಕು ಎಂದರು.

      ಕಾಂಗ್ರೆಸ್ ಸರ್ಕಾರ ಆರ್ಥಿಕ, ಸಾಮಾಜಿಕ, ಕೃಷಿ, ಆರೋಗ್ಯ, ವಿಜ್ಞಾನ ತಂತ್ರಜ್ಞಾನ, ವಸತಿ, ಸಾಲಮನ್ನಾ, ಹಳ್ಳಿ ಹಳ್ಳಿಗೆ ಸಂವಹನ ಸಂಪರ್ಕ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದೆ. ಆದರೆ ದೇಶಕ್ಕೆ ಮೋದಿ ಸರ್ಕಾರದ ಕೊಡುಗ್ಯೇನೂ ಇಲ್ಲ. ಬರೀ ಶೂನ್ಯ ಎಂದು ಕುಟುಕಿದರು.

      ಶಾಸಕರಾದ ಆನಂದಸಿಂಗ್, ಪಿ.ಟಿ.ಪರಮೇಶ್ವರನಾಯ್ಕ್, ಪಕ್ಷದ ಜಿಲ್ಲಾಧ್ಯಕ್ಷ ಬಿ.ವಿ.ಶಿವಯೋಗಿ, ಕೆಪಿಸಿಸಿ ಪ್ರ.ಕಾರ್ಯದರ್ಶಿ ಮಂಜುನಾಥ, ಕೆಪಿಸಿಸಿ ಕಾರ್ಯದರ್ಶಿಗಳಾದ ಮುರುಳಿಧರ ಯಕ್ಲಾರ್ಕರ್, ರಘು ಗುಜ್ಜಲ, ನಗರಸಭೆ ಅಧ್ಯಕ್ಷ ಗುಜ್ಜಲ ನಿಂಗಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಇಮಾಮ್ ನಿಯಾಜಿ, ತಮ್ಮನಳ್ಳೆಪ್ಪ, ಮುಖಂಡರಾದ ಸಂದೀಪಸಿಂಗ್, ಗುಜ್ಜಲ ನಾಗರಾಜ, ನಿಂಬಗಲ್ ರಾಮಕೃಷ್ಣ, ದಾದಾಪೀರ್, ವಿನಾಯಕ ಶೆಟ್ಟರ್ ಇದ್ದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link