ಹರಿಹರ:
ಭಾರತ ದೇಶದ ಸರ್ವತೋಮುಖ ಅಭಿವೃದ್ಧಿಗೆ ಮತ್ತೊಮ್ಮೆ ನರೇಂದ್ರ ಮೋದಿಜಿ ಅವರ ಪ್ರಧಾನಿಯಾಗಿ, ರಾಷ್ಟ್ರವನ್ನು ಮುನ್ನೆಡೆಸಬೇಕು ಎಂದು ಮಾಜಿ ಸಂಸದ, ದಾವಣಗೆರೆ ಕ್ಷೇತ್ರದ ಹಾಲಿ ಬಿಜೆಪಿ ಅಭ್ಯರ್ಥಿ ಜಿ.ಎಂ ಸಿದ್ದೇಶ್ವರ ಹೇಳಿದರು.
ನಗರದ ನೀರಾವರಿ ಇಲಾಖೆಯಿಂದ ಚುನಾವಣೆಯ ಪ್ರಚಾರ ಕುರಿತು ಶನಿವಾರ ನೆಡೆಸಿದ ರೋಡ್ ಶೋ ಮೆರವಣಿಗೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೇಶ ಎಲ್ಲಾ ಕ್ಷೇತ್ರಗಳಲ್ಲಿಯೂ ಮತ್ತೊಷ್ಟು ಅಭಿವೃದ್ಧಿ ಸಾಧಿಸಬೇಕಾದರೆ ಮೋದಿ ಯೋಜನೆಗಳೆ ನಮಗೆ ಮತವಾಗಿ ಪರಿವರ್ತನೆ ಆಗಲಿವೆ. ಅವರ ಸರ್ಕಾರ ಮತ್ತೊಮ್ಮೆ ರಚನೆಯಾಗಬೇಕು ಎಂದರು ತಿಳಿಸಿದರು.
ನಾನು ಸಂಸದನಾದ ವೇಳೆಯಲ್ಲಿ ಕೇಂದ್ರ ಸರ್ಕಾರದಿಂದ ಸಾವಿರಾರು ಕೋಟಿ ಅನುದಾನವನ್ನು ತಂದು, ದಾವಣಗೆರೆ ಜಿಲ್ಲೆಯಲ್ಲಿ ಅಭಿವೃದ್ಧಿಯ ಕಾಮಗಾರಿಗಳನ್ನು ಮಾಡಿಸಿದ್ದೇನೆ. ಬೆಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾದಾಗ ಸಾವಿರಾರು ಕೊಳವೆಬಾವಿಗಳನ್ನು ಕೊರೆಸಿ, ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದೇನೆ. ಜಿಲ್ಲೆಯಲ್ಲಿ ಕೈಗಾರಿಕ ಪ್ರದೇಶ ಹಾಗೂ ಹೊಸ ಹೊಸ ಕೈಗಾರಿಕೆಗಳನ್ನು ಪ್ರಾರಂಭಿಸಲು ಮುಂದಾಗಿದ್ದೇನೆ ಎಂದರು.
ದೇಶದಲ್ಲಿ ಕಳೆದ ಐದು ವರ್ಷಗಳಿಂದ ಎಲ್ಲಾ ಕ್ಷೇತ್ರಗಳಲ್ಲಿ ಬದಲಾವಣೆ ತಂದು, ದೇಶದ ಹೆಜ್ಜೆಯನ್ನೇ ಬದಲಾಯಿಸಿದ ಕೀರ್ತಿ ಮಾಜಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ಅವರನ್ನ ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಿ, ಭಾರತ ದೇಶ ಪ್ರಂಪಚದಲ್ಲಿಯೇ ಎಲ್ಲಾ ಕ್ಷೇತ್ರಗಳಲ್ಲಿ ಪ್ರಥಮ ಸ್ಥಾನ ಪಡೆಯುವಂತೆ ಮಾಡಲು, ಈ ಬಾರಿ ಮತ್ತೊಮ್ಮೆ ಸಿದ್ದೇಶ್ವರ ಅಭ್ಯಾರ್ಥಿಗೆ ಹೆಚ್ಚು ಮತಗಳನ್ನು ನೀಡುವುದರ ಮೂಲಕ ಲೋಕಸಭೆಗೆ ಕಳಿಸಿಕೊಡಬೇಕಾಗಿದೆ ಎಂದು ಹೇಳಿದರು.
ಮೆರವಣಿಗೆಯಲ್ಲಿ ಶಾಸಕ ರವೀದ್ರನಾಥ್, ಜೆ.ಸಿ ಮಾದುಸ್ವಾಮಿ, ಮುರುಗೇಶ್ ನಿರಾಣಿ, ಜಿಲ್ಲಾ ಅಧ್ಯಕ್ಷ ಯಶವಂತ್ ಜಾದವ್, ಮಾಜಿ ಶಾಸಕ ಬಿ.ಪಿ ಹರೀಶ್, ತೇಜಸ್ವಿ ಸೂರ್ಯ, ಮುಖಂಡರಾದ ಡಿ. ಹೇಮಂತರಾಜ್, ಎಚ್. ಶಿವಾನಂದಪ್ಪ, ಬೆಳ್ಳೂಡಿ ರಾಮಚಂದ್ರಪ್ಪ, ಎಸ್.ಎಂ ವೀರೇಶ್, ಬಾತಿ ಚಂದ್ರಶೇಖರ್, ಆನಂದ್, ಕೀರ್ತಿ ಕುಮಾರ್, ಅಜಿತ್ ಸಾವಂತ್, ಚಂದ್ರಶೇಖರ್ ಪೂಜಾರ್, ತುಳಜಪ್ಪ ಭೂತೆ ಹಾಗೂ ಅನೇಕ ಮುಖಂಡರು ಭಾಗಿಯಾಗಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
